• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಣಮುಖರಾಗಿದ್ದ ದೆಹಲಿ ಪೊಲೀಸರಿಗೆ ಮತ್ತೆ ಕೊರೊನಾ ಸೋಂಕು

|

ನವದೆಹಲಿ, ಜುಲೈ 23: ಕೊವಿಡ್ 19 ರೋಗ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ನಗರಕ್ಕೆ ಭದ್ರತೆ ನೀಡುತ್ತಿದ್ದ ಪೊಲೀಸರಿಗೆ ಸೋಂಕು ತಗುಲಿತ್ತು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಇದೀಗ ಗುಣಮುಖರಾಗಿರುವ ಪೊಲೀಸರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಎಲ್ಲರಲ್ಲಿ ಆತಂಕ ಮೂಡಿಸಿದೆ. ಕೊರೊನಾದಿಂದ ವ್ಯಕ್ತಿ ಗುಣಮುಖರಾದರೂ ಮತ್ತೆ ಬರುವ ಸಾಧ್ಯತೆಯೇ ಇದೆಯಾ ಎಂಬುದರ ಬಗ್ಗೆ ವೈದ್ಯರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಮಾಸ್ಕ್ ಧರಿಸದ ಕಾರಣಕ್ಕೆ ಅಮಾನುಷವಾಗಿ ಹಲ್ಲೆ ನಡೆಸಿತಾ ಖಾಕಿ?

ಮೇ ತಿಂಗಳಲ್ಲಿ 50 ವರ್ಷದ ಪೊಲೀಸ್ ಒಬ್ಬರಿಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಮೇ 15ರಿಂದ 22ರವರೆಗೆ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕ್ಷಿಪ್ರ ಆಂಟಿಜೆನ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಅಪೊಲೊ ಆಸ್ಪತ್ರೆಗಳ ಉಸಿರಾಟ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಹಿರಿಯ ಸಲಹೆಗಾರ ಡಾ.ರಾಜೇಶ್ ಚಾವ್ಲಾ ಹೇಳಿದ್ದಾರೆ.

ಮೊದಲು ಕೊರೊನಾಗೆ ತುತ್ತಾಗಿದ್ದಾಗ ಅವರಿಗೆ ಯಾವುದೇ ರೀತಿಯ ಲಕ್ಷಣಗಳಿರಲಿಲ್ಲ. ಆದರೆ ಎರಡನೇ ಬಾರಿಗೆ ಕಾಣಿಸಿಕೊಂಡಾಗ ಪೊಲೀಸರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ಕಂಡು ಬಂದಿದೆ. ಹೀಗಾಗಿ ಅವರಿಗೆ ತೀವ್ರಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಪೂರ್ಣ ಚಿಕಿತ್ಸೆ ಪಡೆದು ನೆಗೆಟಿವ್ ಬಂದ ನಂತರ ಪೊಲೀಸ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಜುಲೈ 10 ರಂದು ಅವರಿಗೆ ಮತ್ತೆ ಜ್ವರ ಮತ್ತು ಒಣ ಕೆಮ್ಮಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಜುಲೈ 13ರಂದು ಸ್ವತಃ ಕೊರೊನಾ ಪರೀಕ್ಷೆಗೆ ಒಳಗಾದರು.

English summary
The case of a Delhi policeman having a relapse of the novel Coronavirus has baffled experts and the doctors treating him and has raised the question whether a recovered patient can contract the infection again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X