• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ನ.22 ರಂದು ತಿಂಗಳ ಅತೀ ಕಡಿಮೆ ತಾಪಮಾನ ದಾಖಲು

|

ನವದೆಹಲಿ, ನವೆಂಬರ್ 22: ದೆಹಲಿಯಲ್ಲಿ ಭಾನುವಾರ ಕನಿಷ್ಠ 6.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರದ ತಾಪಮಾನವು ದೆಹಲಿಯಲ್ಲಿ ಶುಕ್ರವಾರ ದಾಖಲಾದ 7.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ, ಇದು 14 ವರ್ಷಗಳ ನವೆಂಬರ್‌ ತಿಂಗಳಿನಲ್ಲಿ ಅತ್ಯಂತ ಶೀತದ ದಿನವಾಗಿದೆ.

ಈ ಋತುವಿನಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುವ ಇದು ನಾಲ್ಕನೇ ದಿನವಾಗಿದೆ. ಆದ್ದರಿಂದ, ಇದು ಅಧಿಕೃತವಾಗಿ ಶೀತಲ ತರಂಗ ಪರಿಸ್ಥಿತಿಯಾಗಿದೆ, ಏಕೆಂದರೆ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ವಾಯುಮಾಲಿನ್ಯ:ಕೆಲ ದಿನಗಳ ಕಾಲ ದೆಹಲಿ ತೊರೆಯಲು ಸೋನಿಯಾಗೆ ಸೂಚನೆ

ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ದೆಹಲಿಯಲ್ಲಿ ಭಾನುವಾರದಂದು ಮಂಜುಕವಿದ ವಾತಾವರಣ ಹೊಂದಲಿದೆ ಮತ್ತು ಗರಿಷ್ಠ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ.

ಶನಿವಾರ ದೆಹಲಿಯಲ್ಲಿ ಕನಿಷ್ಠ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮತ್ತೊಂದೆಡೆ, ಶನಿವಾರ ಗರಿಷ್ಠ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಸೋಮವಾರ ಕೂಡಾ ಕನಿಷ್ಠ ತಾಪಮಾನ 8.0 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.

English summary
Delhi recorded a minimum temperature of 6.9 degrees Celsius on November 22, the Indian Meteorological Department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X