ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಣ ಬೇಡಿಯನ್ನು ನೈತಿಕ ಭ್ರಷ್ಟನನ್ನಾಗಿ ಮಾಡಿದ ದೆಹಲಿ ಚುನಾವಣೆ

|
Google Oneindia Kannada News

ಐದು ವರ್ಷದ ಹಿಂದೆ ನಡೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಗ್ರೌಂಡ್ ರಿಪೋರ್ಟ್ ಯಾವರೀತಿ ಇತ್ತೆಂದರೆ, ಆಮ್ ಆದ್ಮಿ ಪಕ್ಷ ನಿರಾಯಾಸವಾಗಿ ಅಧಿಕಾರಕ್ಕೇರಲಿದೆ ಎಂದು. ಆದರೆ, ಬಂದ ಫಲಿತಾಂಶ?

ವಿರೋಧಿಗಳು (ಬಿಜೆಪಿ ಮತ್ತು ಕಾಂಗ್ರೆಸ್) ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಫಲಿತಾಂಶ ಹೊರಬಿದ್ದಿತ್ತು. ಮತದಾರ ನೀಡಿದ ಜನಾದೇಶಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಯಾವರೀತಿ ಜರ್ಝರಿತವಾಗಿತ್ತೆಂದರೆ, ಬಿಜೆಪಿ ಕೇವಲ ಮೂರು ಸ್ಥಾನವನ್ನು ಗೆದ್ದರೆ, ಕಾಂಗ್ರೆಸ್ ಅಕೌಂಟೇ ಓಪನ್ ಮಾಡಲು ಆಗಲಿಲ್ಲ.

ದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳುದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

ಚುನಾವಣೆಗೆ ಕೆಲವು ತಿಂಗಳ ಮುನ್ನ, ಬಿಜೆಪಿ, ಕಿರಣ್ ಬೇಡಿಯನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು. ಪೊಲೀಸ್ ಅಧಿಕಾರಿಯಾಗಿ ಉತ್ತಮ ಹೆಸರನ್ನು ಹೊಂದಿದ್ದ ಕಿರಣ್ ಬೇಡಿಯಿಂದಾಗಿ, ಪಕ್ಷ ದಡಸೇರಬಹುದು ಎನ್ನುವ ಬಿಜೆಪಿ ಲೆಕ್ಕಾಚಾರವಾಗಿತ್ತು.

ದೆಹಲಿ ವಿಧಾನಸಭೆ ಚುನಾವಣೆ; ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆದೆಹಲಿ ವಿಧಾನಸಭೆ ಚುನಾವಣೆ; ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಆದರೆ, ಇದ್ಯಾವುದೂ ವರ್ಕೌಟ್ ಆಗದೇ, ಖುದ್ದು ಕಿರಣ್ ಬೇಡಿಯೇ ಚುನಾವಣೆಯಲ್ಲಿ ಮುಗ್ಗರಿಸಿದರು. ಸೋತದ್ದು ಒಂದೆಡೆಯಾದರೆ, ಕಿರಣ ಬೇಡಿಯವರನ್ನು ಆ ಚುನಾವಣೆ ನೈತಿಕ ಭ್ರಷ್ಟರನ್ನಾಗಿ ಮಾಡಿತು. ಅದಕ್ಕೆ ಕಾರಣ:

2015ರ ದೆಹಲಿ ಅಸೆಂಬ್ಲಿ ಚುನಾವಣೆ

2015ರ ದೆಹಲಿ ಅಸೆಂಬ್ಲಿ ಚುನಾವಣೆ

ದೆಹಲಿಯ ಮತದಾರ ಬಹಳ ಪ್ರಬುದ್ದ. 2015ರ ದೆಹಲಿ ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸೀಟ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದೇ ಗುಂಗಿನಲ್ಲಿ ಅಸೆಂಬ್ಲಿ ಚುನಾವಣೆಯೂ ನಡೆಯಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಕೂಡಾ ಹೊಂದಿತ್ತು. ಚುನಾವಣಾಪೂರ್ವ ಸಮೀಕ್ಷೆಗಳು ಅದನ್ನೇ ಹೇಳಿದ್ದವು.

ಬಲವಾಗಿ ವಿರೋಧಿಸಿದವರು ಕಿರಣ್ ಬೇಡಿ

ಬಲವಾಗಿ ವಿರೋಧಿಸಿದವರು ಕಿರಣ್ ಬೇಡಿ

ಆ ಚುನಾವಣೆಯಲ್ಲಿ ಎಲ್ಲಕ್ಕಿಂತ ಗಮನಿಸಬೇಕಾಗಿದ್ದದ್ದು ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮುಂದಿನ ರೂಪವಾಗಿ ರಾಜಕೀಯ ಪಕ್ಷ ಕಟ್ಟಿದಾಗ ಅದನ್ನು ಬಲವಾಗಿ ವಿರೋಧಿಸಿದವರು ಕಿರಣ್ ಬೇಡಿ. ಅವರಿಗೆ ದೆಹಲಿ ಮುಖ್ಯಮಂತ್ರಿ ಪಟ್ಟದ ಆಮಿಷ ತೋರಿಸಿ ಅವರನ್ನು ನೈತಿಕ ಭ್ರಷ್ಟರನ್ನಾಗಿ ಮಾಡಲಾಯಿತು.

ನಿಧಿ ಸಂಗ್ರಹದಲ್ಲಿ ಹರಿದಾಡುವ ಕಪ್ಪುಹಣ

ನಿಧಿ ಸಂಗ್ರಹದಲ್ಲಿ ಹರಿದಾಡುವ ಕಪ್ಪುಹಣ

ಚುನಾವಣಾ ಹಾಗೂ ಪಕ್ಷದ ನಿಧಿ ಸಂಗ್ರಹದಲ್ಲಿ ಹರಿದಾಡುವ ಕಪ್ಪುಹಣದ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎನ್ನುವ ಹೊತ್ತಿನಲ್ಲಿ ಕಿರಣ್ ಬೇಡಿ ಬಿಜೆಪಿ ಸೇರಿದ್ದು, ದೊಡ್ಡ ನೈತಿಕ ಪತನ ಎಂದೇ ವ್ಯಾಖ್ಯಾನಿಸಲಾಗಿತ್ತು. ಚುನಾವಣೆಯ ವೇಳೆ, ಮತದಾರರಲ್ಲಿ ಇದರ ಅರಿವನ್ನು ಮೂಡಿಸಲು ಕೇಜ್ರಿವಾಲ್ ಪಕ್ಷ ಯಶಸ್ವಿಯಾಯಿತು.

ಕೇಜ್ರಿವಾಲ್ ತೋರಿದ ಧೈರ್ಯ

ಕೇಜ್ರಿವಾಲ್ ತೋರಿದ ಧೈರ್ಯ

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನೆಲೆಗೊಳ್ಳಬೇಕಾದರೆ ಚುನಾವಣ ಖರ್ಚಿಗೆ ಹಾಗೂ ಪಕ್ಷದ ಖರ್ಚಿಗೆ ಕಪ್ಪುಹಣ ಹಾಗೂ ವಾಣಿಜ್ಯೋದ್ಯಮಿಗಳ ಹಣ ಬಳಕೆಯಾಗುವುದು ನಿಲ್ಲಬೇಕು ಎನ್ನುವ ಕೂಗು ಇಂದು, ನಿನ್ನೆಯದಲ್ಲ. ಈ ನಿಟ್ಟಿನಲ್ಲಿ ಕೇಜ್ರಿವಾಲ್ ತೋರಿದ ಧೈರ್ಯ , ದೆಹಲಿ ಮತದಾರರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಯಿತು.

ಕಿರಣ ಬೇಡಿಯನ್ನು ನೈತಿಕ ಭ್ರಷ್ಟರನ್ನಾಗಿ ಮಾಡಿದ ದೆಹಲಿ ಚುನಾವಣೆ

ಕಿರಣ ಬೇಡಿಯನ್ನು ನೈತಿಕ ಭ್ರಷ್ಟರನ್ನಾಗಿ ಮಾಡಿದ ದೆಹಲಿ ಚುನಾವಣೆ

ಈಗ ರಾಜ್ಯಪಾಲರಾಗಿರುವ ಕಿರಣ್ ಬೇಡಿ, ಭ್ರಷ್ಟಾಚಾರ, ಭ್ರಷ್ಟ ವ್ಯವಸ್ಥೆಯ ವಿರುದ್ದ ಹೋರಾಡಿ ಜನಪ್ರಿಯಗೊಂಡಿದ್ದವರು. ಆದರೆ, ದೆಹಲಿಯ ಕಳೆದ ಅಸೆಂಬ್ಲಿ ಚುನಾವಣೆ ಅವರನ್ನು ನೈತಿಕ ಭ್ರಷ್ಟರನ್ನಾಗಿ ಮಾಡಿತು. ಇದು ಯಾವಮಟ್ಟಿಗೆ ಅಂದರೆ, ಕೃಷ್ಣಾನಗರ ಕ್ಷೇತ್ರದಿಂದ ಖುದ್ದು ಪರಾಭಗೊಂಡರು.

English summary
Recalling Incident Of 2015 Delhi Assembly Election, Kiran Bedi Faced Defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X