ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: SBI ಬ್ಯಾಂಕ್‌ನಲ್ಲಿ AePS ಪದ್ಧತಿ ವ್ಯವಹಾರ ಸ್ಥಗಿತಗೊಂಡಿಲ್ಲ

|
Google Oneindia Kannada News

ದೆಹಲಿ, ಏಪ್ರಿಲ್ 13: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಇಪಿಎಸ್ ವಿಧಾನದ (AePS-Aadhar enabled Payment System) ವ್ಯವಹಾರ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಸುದ್ದಿ ಸುಳ್ಳು. ಇಂತಹ ಯಾವುದೇ ಹೊಸ ಬದಲಾವಣೆಯಲ್ಲಿ ಬ್ಯಾಂಕ್ ತಂದಿಲ್ಲ.

ಏಪ್ರಿಲ್ 14ರ ವರೆಗೂ ಎಇಪಿಎಸ್ (AePS) ಸರ್ವರ್ ಡೌನ್ ಇರುತ್ತೆ. ಹಾಗಾಗಿ, ಈ ಪದ್ಧತಿಯಲ್ಲಿ ವ್ಯವಹಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ. ಒಂದು ವೇಳೆ ಎಇಪಿಎಸ್ ಬಳಸಿ ವ್ಯವಹಾರ ಮಾಡಿದ್ದೇ ಆದರೆ, ಆ ಹಣ ಮಂಜೂರು ಆಗುವುದಿಲ್ಲ. ಅದು ಸ್ಥಗಿತವಾಗುತ್ತೆ ಎನ್ನಲಾಗಿದೆ. ಆದರೆ ಇದು ಸುಳ್ಳು. ಆರ್‌ಬಿಐ ಇಂತಹ ಯಾವುದೇ ಸಲಹೆ ಸೂಚನೆಯನ್ನು ಇದುವರೆಗೂ ನೀಡಿಲ್ಲ.

ಬೆಂಗಳೂರಿನಲ್ಲಿ ಬ್ಯಾಂಕಿನಿಂದ ಗ್ರಾಹಕರ ಮನೆಗೆ ನಗದು ವಿತರಣೆ!ಬೆಂಗಳೂರಿನಲ್ಲಿ ಬ್ಯಾಂಕಿನಿಂದ ಗ್ರಾಹಕರ ಮನೆಗೆ ನಗದು ವಿತರಣೆ!

ಅಂದ್ಹಾಗೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಎಇಪಿಎಸ್ ವಿಧಾನದಲ್ಲಿ ವ್ಯವಹಾರ ನಡೆಯುತ್ತೆ. ಈ ವಿಧಾನದಲ್ಲಿ ಖಾತೆ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸಿದರೆ ಸಾಕು ಹಣ ವರ್ಗಾವಣೆ, ಪಾವತಿ ಸೇರಿದಂತೆ ಇನ್ನಿತರ ವ್ಯವಹಾರ ಮಾಡಬಹುದು.

RBI Has Not Frozen SBI AePS Server Its Fake

ಎಇಪಿಎಸ್ ಅಂದ್ರೆ ಆಧಾರ್ ಮೂಲಕ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ನೀಡುವುದು. ಈ ವಿಧಾನ ಬಳಸಿ ನೀವು ಹಣವನ್ನು ವರ್ಗಾಯಿಸಬಹುದು, ಪಾವತಿ ಮಾಡಬಹುದು, ಹಣವನ್ನು ಠೇವಣಿ ಮಾಡಬಹುದು, ಹಣವನ್ನು ಹಿಂಪಡೆಯಬಹುದು ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ವಿಚಾರಣೆ ಮಾಡಬಹುದು.

ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಲಕ್ಷಾಂತರ ಜನರು ಈ AePS ವಿಧಾನದ ಮೇಲೆ ಅವಲಂಬಿತವಾಗಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಇಂತಹ ಸುಳ್ಳು ಸುದ್ದಿಗಳಿಂದ ಸಾಮಾನ್ಯವಾಗಿ ಜನರು ಆತಂಕಕ್ಕೆ ಗುರಿಯಾಗಿದ್ದಾರೆ.

English summary
RBI has also not frozen the server. Please do not believe such news as this one is clearly fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X