ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ಖಾತೆ ಜೊತೆ ಆಧಾರ್ ಜೋಡಣೆ ನಿಜವೇ? ಸರ್ಕಾರ ಹೇಳಿದ್ದೇನು?

|
Google Oneindia Kannada News

ನವದೆಹಲಿ, ನವೆಂಬರ್ 20: ಫೆಸ್ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮದ ಖಾತೆಯೊಂದಿಗೆ ಆಧಾರ್ ಜೋಡಿಸುವ ಕುರಿತಂತೆ ಹಬ್ಬಿದ್ದ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ.

ಈ ಕುರಿತು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ಮಾಧ್ಯಮ ಖಾತೆಯೊಂದಿಗೆ ಆಧಾರ್ ಜೋಡಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸರ್ಕಾರ ಇಂಥ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಫೇಸ್‌ಬುಕ್‌ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ ವಿಚಾರಣೆಫೇಸ್‌ಬುಕ್‌ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ ವಿಚಾರಣೆ

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಯಾವೇ ಖಾತೆಯನ್ನು ತಡೆಹಿಡಿಯುವ, ಬ್ಲಾಕ್ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ದ ಅಡಿಯಲ್ಲಿ ಬರುವ 69A ವಿಧಿಯಲ್ಲಿ ಈ ಹಕ್ಕು ಸರ್ಕಾರಕ್ಕಿದೆ ಎಂದು ಅವರು ಹೇಳಿದದರು.

Ravi Shankar Prasad Says No Plan To Link Aadhaar with Social Media Account

2016 ರಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ವಿವಾದಾತ್ಮಕ ಎನ್ನಿಸಿದ ಸುಮಾರು 633 ಯುಆರ್ ಎಲ್ ಗಳನ್ನು ಸರ್ಕಾರ ಬ್ಲಾಕ್ ಮಾಡಿತ್ತು. 2017 ರಲ್ಲಿ1385, 2018 ರಲ್ಲಿ 2799, 2019 ರಲ್ಲಿ 3433 URLs ಗಳನ್ನು ಸರ್ಕಾರ ಬ್ಲಾಕ್ ಮಾಡಿತ್ತು.

ಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆ

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದಿತ, ದ್ವೇಷ ಬಿತ್ತುವ, ರಾಷ್ಟ್ರ ವಿರೋಧಿ, ಅಸಭ್ಯ ಮತ್ತು ಸುಳ್ಳು ಪೋಸ್ಟ್ ಗಳನ್ನು ನಿಯಂತ್ರಿಸಲು ಸೂಕ್ತ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಕಳೆದ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತ್ತು.

English summary
Union Minister Ravi Shankar Prasad Says No Plan To Link Aadhaar with Ravi Shankar Prasad Says No Plan To Link Aadhaar with Social Media Account Media Account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X