ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್‌ ಕುರಿತು ಇಮ್ರಾನ್ ಹೇಳಿಕೆಗೆ ಶಿವಸೇನೆ ತೀವ್ರ ವಿರೋಧ

|
Google Oneindia Kannada News

ನವದೆಹಲಿ, ಜುಲೈ 17: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತಂತೆ ಆಡಿದ ಇಮ್ರಾನ್ ಖಾನ್ ಮಾತಿನ ವಿರುದ್ಧ ಶಿವಸೇನೆ ಕಿಡಿ ಕಾರಿದೆ.

ಆರ್‌ಎಸ್‌ಎಸ್‌ ಸಿದ್ಧಾಂತಗಳೇ ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಅಡ್ಡಿಯಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದು, ಈ ಹೇಳಿಕೆಗೆ ಶಿವಸೇನೆ ವಿರೋಧಿಸಿದೆ.

ಇಮ್ರಾನ್ ಖಾನ್ ಅವರ ಈ ಹೇಳಿಕೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ತೀವ್ರವಾಗಿ ಕಿಡಿಕಾರಿದ್ದು, ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿ ಗೆ ಪಾಕಿಸ್ತಾನವೇ ಕಾರಣ ಎಂದು ಹೇಳಿದ್ದಾರೆ.

Raut Slams Imran Khan Over Comment On RSS, Says Pakistan Is Creator Of Taliban

ಆರ್‌ಎಸ್‌ಎಸ್‌ ಸಿದ್ದಾಂತವೇನು? ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ ಎಂಬುದು. ಅದು ಸತ್ಯ. ಇಡೀ ದೇಶದ ಭಾವನೆ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ.

ತಾಲಿಬಾನ್ ಸೃಷ್ಟಿಕರ್ತ ಯಾರು? ಪಾಕಿಸ್ತಾನ. ತಾಲಿಬಾನ್ ಸಹಾಯದಿಂದ ಪಾಕಿಸ್ತಾನ ಇಡೀ ವಿಶ್ವಕ್ಕೆ ಭಯೋತ್ಪಾದನೆ ಹರಡುವಂತೆ ಮಾಡಿದೆ. ಇಮ್ರಾನ್ ಖಾನ್ ಅವರನ್ನು ಯಾರೂ ನಂಬಬಾರದು ಎಂದಿದ್ದಾರೆ.

ಉಜ್ಬೇಕಿಸ್ತಾನದಲ್ಲಿನ ಸೆಂಟ್ರಕ್‌-ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್ ಅವರು, ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಆರ್‌ಎಸ್‌ಎಸ್‌ ಸಿದ್ಧಾಂತಗಳು ಅಡ್ಡಿಯಾಗಿದೆ. ಬಹಳ ಕಾಲದಿಂದ ಭಾರತದೊಂದಿಗೆ ಉತ್ತಮ ನಾಗರಿಕ ನೆರೆ ರಾಜ್ಯವಾಗಿ ಮುಂದವರಿಯಲು ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದರು.

ಪಾಕಿಸ್ತಾನ ತಾಲಿಬಾನ್‌ನ ಸೃಷ್ಟಿಕರ್ತ. ವಿಶ್ವದ ತಲೆದೋರಿರುವ ಭಯೋತ್ಪಾದನೆ ಸಮಸ್ಯೆಗೆ ಪಾಕಿಸ್ತಾನವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

English summary
Lashing out at Pakistan Prime Minister Imran Khan for blaming Rashtriya Swayamsevak Sangh (RSS) ideology for the talks stalled with India, Rajya Sabha MP and Shiv Sena leader Sanjay Raut on Saturday said that Pakistan is the creator of the Taliban and it is responsible for terrorism in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X