• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಟ್ಟಿಗರ ಮನ ಗೆದ್ದ ರತನ್ ಟಾಟಾ ಎಮೋಷನಲ್ ಪೋಸ್ಟ್‌

|

ನವ ದೆಹಲಿ, ಮಾರ್ಚ್ 17: ಖ್ಯಾತ ಉದ್ಯಮಿ ರತನ್ ಟಾಟಾ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಅನೇಕರಿಗೆ ಇಷ್ಟ ಆಗುತ್ತಾರೆ. ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯ ಒಂದು ಪೋಸ್ಟ್ ನೆಟ್ಟಿಗರ ಪ್ರೀತಿಗೆ ಪಾತ್ರವಾಗಿದೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 10 ತಿಂಗಳ ನಾಯಿ ಬಗ್ಗೆ ರತನ್ ಟಾಟಾ ಬರೆದುಕೊಂಡಿದ್ದಾರೆ. ಈ ನಾಯಿಗೆ ಮನೆಯನ್ನು ಒದಗಿಸಲು ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಸುರ್ ಎಂಬ ಈ ಶ್ವಾನ ಈಗಾಗಲೇ ಕೆಲವು ಕುಟುಂಬ ಜೊತೆಗೆ ಇದ್ದು, ಶಾಶ್ವತವಾಗಿ ನೋಡಿಕೊಳ್ಳುವವರು ಬೇಕು ಎಂದಿದ್ದಾರೆ.

ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಟಾಟಾ: ಇನ್ಫಿಗೆ 4ನೇ ಸ್ಥಾನ

''ನಿಮ್ಮ ಮನೆಯನ್ನು ಅವಳಿಗಾಗಿ ತೆರೆಯಬಹುದು, ಅಥವಾ ಯಾರನ್ನಾದರೂ ನೀವು ತಿಳಿದಿರಬಹುದು ಎಂದು ಭಾವಿಸಿದರೆ, ಅದಕ್ಕೆ ಸ್ವಲ್ಪ ಗಂಭೀರವಾದ ಆಲೋಚನೆಯನ್ನು ನೀಡಿ ಮತ್ತು ನನ್ನ ಬಯೋದಲ್ಲಿನ ಲಿಂಕ್ ಅನ್ನು ಭರ್ತಿ ಮಾಡಿ.'' ಎಂದು ರತನ್ ಟಾಟಾ ಬರೆದುಕೊಂಡಿದ್ದಾರೆ.

ರತನ್ ಟಾಟಾ ಇನ್ಸ್ಟಾಗ್ರಾಮ್ ಬಯೋದಲ್ಲಿನ ಲಿಂಕ್ ಕ್ಲಿಕ್ ಮಾಡಿದರೆ, ಒಂದಷ್ಟು ಪ್ರಶ್ನೆಗಳು ಕಣ್ಣಿಗೆ ಬೀಳುತ್ತದೆ. ಪುಣೆಯಲ್ಲಿ ವಾಸಿಸುವವರು ಮಾತ್ರ ಈ ನಾಯಿಯನ್ನು ಪಡೆಯಬಹುದು ಎಂದು ಅಲ್ಲಿ ತಿಳಿಸಲಾಗಿದೆ.

ಈ ಹಿಂದೆ ಮೈರಾ ಎಂಬ ನಾಯಿಗೆ ಸಹಾಯ ಮಾಡಲು ಇದೇ ರೀತಿಯಾಗಿ ರತನ್ ಟಾಟಾ ಕೇಳಿಕೊಂಡಿದ್ದರು. ಆಗ ನೂರಾರೂ ಜನರು ಮುಂದೆ ಬಂದಿದ್ದರು. ಈಗಲೂ ರತನ್ ಟಾಟಾ ಪೋಸ್ಟ್ ಅನೇಕರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

English summary
Ratan Tata took instagram to shares adoption appeal for 10 month old dog Sur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X