ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರದ 4 ದಿನ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ

|
Google Oneindia Kannada News

ನವದೆಹಲಿ, ನವೆಂಬರ್ 23 : ರಾಷ್ಟ್ರಪತಿಗಳ ಅಧಿಕೃತ ನಿವಾಸವನ್ನು ಸಾರ್ವಜನಿಕರ ವೀಕ್ಷಣೆಗಾಗಿ ವಾರದಲ್ಲಿ 4 ದಿನ ತೆರೆಯಲು ನಿರ್ಧರಿಸಲಾಗಿದೆ.

ರಾಷ್ಟ್ರಪತಿ ಭವನ, ಅಧ್ಯಕ್ಷ ಮಹೋದಯರ ಭವ್ಯ ರೆಸಾರ್ಟ್ರಾಷ್ಟ್ರಪತಿ ಭವನ, ಅಧ್ಯಕ್ಷ ಮಹೋದಯರ ಭವ್ಯ ರೆಸಾರ್ಟ್

ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ರಾಷ್ಟ್ರಪತಿಗಳ ಭವನವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ರಾಷ್ಟ್ರಪತಿಗಳ ಭವನ ವೀಕ್ಷಣೆಗೆ ಪ್ರತಿಯೊಬ್ಬರಿಗೆ 50 ರು. ದರ ನಿಗದಿಪಡಿಸಲಾಗಿದ್ದು, 8 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

Rashtrapati Bhavan open for public - four days a week

ಸರ್ಕಾರಿ ರಜಾದಿನಗಳ ಹೊರತು ಪಡಿಸಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ರಾಷ್ಟ್ರಪತಿ ಭವನ ವೀಕ್ಷಿಸಬಹುದಾಗಿದೆ. ಭವನ ವೀಕ್ಷಣೆಗೆ ಆಗಮಿಸುವವರು ಯಾವುದಾದರೂ ಒಂದು ಗುರುತಿನ ಚೀಟಿ ತೆಗೆದುಕೊಂಡು ಬಂರುವುದು ಕಡ್ಡಾಯವಾಗಿದೆ.

ಇದೀಗ ಜನರು ನಾಲ್ಕು ದಿನಗಳಲ್ಲಿ ಮೊದಲೇ ಆನ್ ಲೈನ್ ನಲ್ಲಿ ಮೂಲಕ ಬುಕ್ ಮಾಡಿ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡಬಹುದಾಗಿದೆ. ರಾಷ್ಟ್ರಪತಿ ಭವನವು 200,000 ಚದರಡಿ ವಿಸ್ತೀರ್ಣ ಹೊಂದಿದ್ದು, ಒಟ್ಟು 340 ಕೋಣೆಗಳಿವೆ.

ಬ್ರಿಟಿಷ್ ವೈಸ್‌ರಾಯ್‌ಗಳಿಗಾಗಿ ಎಡ್ವಿನ್ ಲ್ಯಾಂಡ್‌ಸೀರ್ ಲ್ಯುಟೆನ್ ಪರಿಕಲ್ಪನೆಯಲ್ಲಿ 1929ರಲ್ಲಿ ನಿರ್ಮಾಣವಾದ ಈ 'ಅರಮನೆ', ಭಾರತ ಗಣರಾಜ್ಯವಾದ ಮೇಲೆ 1950ರಿಂದ ರಾಷ್ಟ್ರಪತಿಗಳಿಗೆ ಅಧಿಕೃತ ನಿವಾಸವಾಗಿದೆ.

ಆನ್ ಲೈನ್ ನಲ್ಲಿ ಬುಕ್ ಮಾಡಲು ಈ ಲಿಂಕ್ ನ್ನು ಕ್ಲಿಕ್ಕಿಸಿ.

English summary
Rashtrapati Bhavan, the sprawling official residence of the Indian President, will now be open for public viewing -- four days a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X