• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ಮೇಲೆ ರೇಪ್ ಕೇಸ್

By Mahesh
|

ನವದೆಹಲಿ, ಜೂನ್ 11: ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್​ ವಿರುದ್ಧ ಅವರ ಶಿಷ್ಯೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ಸೋಮವಾರದಂದು ಡಾಟಿ ಮಹಾರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಫತೇಪುರ್​ ಬೆರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಟಿ ಮಹಾರಾಜ್​ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್​ 376, 377, 354 ಮತ್ತು 34ರ ಅಡಿಯಲ್ಲಿ ಕೇಸ್ ಹಾಕಲಾಗಿದೆ.

ಒಳ್ಳೇ ದಿನಗಳು ಬರುತ್ತವೆ: ವೈರಲ್ ಆದ ಅಸಾರಾಮ್ ಫೋನ್ ಇನ್ ಸಂಭಾಷಣೆ

ಡಾಟಿ ಮಹಾರಾಜ್ ಅವರು ಎರಡು ವರ್ಷಗಳ ಹಿಂದೆ ತಮ್ಮ ಶನಿಧಾಮ್ ಆಶ್ರಮದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಭಯದಿಂದ ನಾನು ದೂರು ನೀಡಲು ಹಿಂಜರಿದಿದ್ದೆ ಎಂದು ದೂರು ನೀಡಿರುವ ಮಹಿಳೆ ಹೇಳಿದ್ದಾರೆ.

ದೆಹಲಿ ಹಾಗೂ ಎನ್ ಸಿಆರ್ ಭಾಗದಲ್ಲಿ ಜನಪ್ರಿಯತೆ ಗಳಿಸಿರುವ ಡಾಟಿ ಮಹಾರಾಜ್ ಅವರು ಗುರುವಾರ ಹಾಗೂ ಶನಿವಾರದಂದು ನಡೆಸುವ ಸತ್ಸಂಗ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಹಲವು ಟಿವಿ ಶೋಗಳು, ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

English summary
A woman disciple has alleged that she was sexually assaulted by self-style godman 'Daati Maharaj' inside Shani Dham two years ago. Because of fear and social stigma, she didn't file a complaint earlier as she was intimidated by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X