ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ranbaxy ಮಾಜಿ ಪ್ರವರ್ತಕ ಸಿಂಗ್ ಸೋದರರಿಗೆ ತಲಾ 1,175 ಕೋಟಿ ದಂಡ

|
Google Oneindia Kannada News

ನವದೆಹಲಿ, ನವೆಂಬರ್ 15: ಭಾರತದ ಔಷಧ ತಯಾರಕಾ ಕಂಪೆನಿ ರಾನ್‌ಬಾಕ್ಸಿ ಲ್ಯಾಬೊರೇಟರೀಸ್‌ನ ಮಾಜಿ ಪ್ರವರ್ತಕರಾದ ಮಲ್ವಿಂದರ್ ಸಿಂಗ್ ಮತ್ತು ಅವರ ಸಹೋದರ ಶಿವಿಂದರ್ ಸಿಂಗ್ ಜಪಾನಿನ ಸಂಸ್ಥೆ ಡಾಯಿಚಿ ಸಾಂಕ್ಯೋ ಹೂಡಿದ್ದ ನ್ಯಾಯಾಂಗ ನಿಂದನೆ ದಾವೆಯಲ್ಲಿ ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಫೋರ್ಟಿಸ್ ಹೆಲ್ತ್‌ಕೇರ್ ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್ ಹೊಣೆಯಾಗಿಸಿದೆ. ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿನ ತಮ್ಮ ಷೇರುಗಳನ್ನು ವರ್ಗಾವಣೆ ಮಾಡದಂತೆ ಮಾಡಿದ್ದ ಆದೇಶವನ್ನು ಸಿಂಗ್ ಸಹೋದರರು ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿತು.

ವಂಚನೆ ಪ್ರಕರಣದಲ್ಲಿ Ranbaxy ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನವಂಚನೆ ಪ್ರಕರಣದಲ್ಲಿ Ranbaxy ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

ಮಲ್ವಿಂದರ್ ಮತ್ತು ಶಿವಿಂದರ್ ಸಹೋದರರಿಬ್ಬರೂ ತಲಾ 1,175 ಕೋಟಿ ರೂ. ದಂಡದ ರೂಪದಲ್ಲಿ ಠೇವಣಿ ಇರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸಿಂಗ್ ಸಹೋದರರು ಮಲೇಷ್ಯಾದ ಐಎಚ್ಎಚ್ ಹೆಲ್ತ್‌ಕೇರ್‌ ಸಮೂಹದಿಂದ ಫೋರ್ಟಿಸ್‌ನಲ್ಲಿರುವ ನಿಯಂತ್ರಣ ಷೇರುಗಳನ್ನು ಪಡೆದುಕೊಳ್ಳುವುದಕ್ಕೆ ಸುಪ್ರೀಂಕೋರ್ಟ್ ನೀಡಿದ್ದ ತಡೆಯನ್ನು ಉಲ್ಲಂಘಿಸಿ ತಮ್ಮ ಆಸ್ತಿಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಿ ಜಪಾನಿನ ಔಷಧ ತಯಾರಕಾ ಕಂಪೆನಿ ಡಾಯಿಚಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಸಿಂಗ್ ಸಹೋದರರಿಗೆ ವಿಧಿಸಲಾಗಿದ್ದ 3,500 ಕೋಟಿ ರೂ. ದಂಡ ಪಾವತಿಸದ ಕಾರಣ ಡಾಯಿಚಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIRಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIR

ಫೋರ್ಟಿಸ್ ಷೇರುಗಳ ಖರೀದಿಗೆ ಷೇರುದಾರರಿಗೆ ಮುಕ್ತ ಆಹ್ವಾನ ನೀಡಲು ಮಲೇಷ್ಯಾ ಮೂಲಕ ಐಎಚ್ಎಚ್ ಹೆಲ್ತ್‌ಕೇರ್ ಅನುಮತಿ ನೀಡಬೇಕೆಂಬ ಮನವಿಯನ್ನು ಪುರಸ್ಕರಿಸದ ಸುಪ್ರೀಂಕೋರ್ಟ್, ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿತು.

ಫೋರ್ಟಿಸ್ ವಿರುದ್ಧದ ನ್ಯಾಯಾಂಗ ನಿಂದನೆಯ ಪ್ರಕರಣವು ಪೂರ್ಣಗೊಂಡ ನಂತರ ಷೇರು ಮಾರಾಟ ಆಹ್ವಾನ ಸಮುಕ್ತಗೊಳಿಸುವ ಮನವಿಯನ್ನು ನಿರ್ಧರಿಸುವುದಾಗಿ ನ್ಯಾಯಾಲಯ ತಿಳಿಸಿತು.

2,562 ಕೋಟಿ ರೂ ದಂಡ ಪಾವತಿಸಿ

2,562 ಕೋಟಿ ರೂ ದಂಡ ಪಾವತಿಸಿ

ಒಂದು ದಶಕಕ್ಕೂ ಹಿಂದೆ ಸಿಂಗ್ ಸಹೋದರರು ಸ್ಥಾಪಿಸಿದ್ದ ರಾನ್ ಬಾಕ್ಸಿ ಸಂಸ್ಥೆಯನ್ನು ಜಪಾನಿನ ಕಂಪೆನಿಗೆ 2008ರಲ್ಲಿ 3.2 ಬಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿದ ಬಳಿಕ 2016ರಲ್ಲಿ ಡಾಯಿಚಿ ಸಾಂಕ್ಯೋ ನ್ಯಾಯಾಂಗ ನಿಂದನೆಯ ದಾವೆ ಹೂಡಿತ್ತು. ಅದರಂತೆ ಸಿಂಗ್ ಸಹೋದರರು ಕಂಪೆನಿಗೆ 2,562 ಕೋಟಿ ರೂ. ಪಾವತಿಸುವಂತೆ ಸೂಚಿಸಲಾಗಿತ್ತು.

ವಾಸ್ತವ ಮುಚ್ಚಿಟ್ಟು ಕಂಪೆನಿ ಮಾರಾಟ

ವಾಸ್ತವ ಮುಚ್ಚಿಟ್ಟು ಕಂಪೆನಿ ಮಾರಾಟ

ರಾನ್‌ಬಾಕ್ಸಿ ತಯಾರಕಾ ಘಟಕಗಳು ಅಮೆರಿಕದ ಆಹಾರ ಹಾಗೂ ಔಷಧ ಆಡಳಿತದಿಂದ ತನಿಖೆ ಎದುರಿಸುತ್ತಿವೆ ಎಂಬುದು ಸೇರಿದಂತೆ ಅನೇಕ ವಾಸ್ತವ ಸಂಗತಿಗಳನ್ನು ಮುಚ್ಚಿಟ್ಟು ಸಿಂಗ್ ಸಹೋದರರು ತಮಗೆ ಕಂಪೆನಿಯನ್ನು ಮಾರಾಟ ಮಾಡಿದ್ದಾರೆ ಎಂದು ಡಾಯಿಚಿ ಆರೋಪಿಸಿದೆ.

ವಾಹನಕ್ಕೆ ಫ್ಯಾನ್ಸಿ ನಂಬರ್ ಕೊಡಿಸುತ್ತೇನೆಂದು ನಾಮ ಹಾಕಿದ ಆಸಾಮಿವಾಹನಕ್ಕೆ ಫ್ಯಾನ್ಸಿ ನಂಬರ್ ಕೊಡಿಸುತ್ತೇನೆಂದು ನಾಮ ಹಾಕಿದ ಆಸಾಮಿ

ದಂಡ ವಿಧಿಸಿದ್ದ ನ್ಯಾಯಮಂಡಳಿ

ದಂಡ ವಿಧಿಸಿದ್ದ ನ್ಯಾಯಮಂಡಳಿ

ಸಿಂಗಪುರದಲ್ಲಿ ಈ ಹೂಡಲಾಗಿದ್ದ ದಾವೆಯ ವಿಚಾರಣೆಗೆ ನ್ಯಾಯಮಂಡಳಿಯೊಂದನ್ನು ಸ್ಥಾಪಿಸಲಾಗಿತ್ತು. ನ್ಯಾಯಮಂಡಳಿಯು ಸಿಂಗ್ ಸಹೋದರರು ದಂಡ ಪಾವತಿಸುವಂತೆ ಸೂಚಿಸಿತ್ತು. ಇದನ್ನು ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ನ್ಯಾಯಾಲಯದ ಆದೇಶವನ್ನು ಪಾಲಿಸದ ಸಿಂಗ್ ಸಹೋದರರ ವಿರುದ್ಧ ಡಾಯಿಚಿ ಸುಪ್ರೀಂಕೊರ್ಟ್ ಮೆಟ್ಟಿಲೇರಿತ್ತು.

ಶಿವಿಂದರ್ ಸಿಂಗ್ ಬಂಧನ

ಶಿವಿಂದರ್ ಸಿಂಗ್ ಬಂಧನ

ರಾನ್‌ಬಾಕ್ಸಿಯನ್ನು ಮಾರಾಟ ಮಾಡಿದ ಬಳಿಕ ಸಿಂಗ್ ಸಹೋದರರು ರೆಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್ ಕಂಪೆನಿಯನ್ನು ಹುಟ್ಟುಹಾಕಿದ್ದರು. ಬಳಿಕ ತಮ್ಮದೇ ಸಂಸ್ಥೆಯಲ್ಲಿ ಅಕ್ರಮ ವಹಿವಾಟು ನಡೆಸಿ ನೂರಾರು ಕೋಟಿ ರೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ಸುಮಾರು 740 ಕೋಟಿ ರೂ. ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಶಿವಿಂದರ್ ಅವರನ್ನು ದೆಹಲ ಪೊಲೀಸರು ಬಂಧಿಸಿದ್ದರು.

English summary
Supreme Court on Friday pronounced ex Ranbaxy promoters Malvinder Singh and Shivinder Singh guilty in case of contempt of court filed by Japanese firm Daiichi Sankyo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X