ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸದಸ್ಯನಿಂದ ಲೈಂಗಿಕ ಕಿರುಕುಳ ಕೇಸ್, ರಮ್ಯಾ ಪ್ರತಿಕ್ರಿಯೆ ಏನು?

By Mahesh
|
Google Oneindia Kannada News

Recommended Video

ಕಾಂಗ್ರೆಸ್ ಸದಸ್ಯನಿಂದ ಲೈಂಗಿಕ ಕಿರುಕುಳ ಕೇಸ್, ರಮ್ಯಾ ಪ್ರತಿಕ್ರಿಯೆ ಏನು? | Oneindia kannada

ನವದೆಹಲಿ, ಜುಲೈ 04: ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ದೆಹಲಿ ಘಟಕದ ಹಾಲಿ ಸಿಬ್ಬಂದಿಯೊಬ್ಬರಿಂದ ಮಾಜಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಯನ್ನು ಮಾಜಿ ಸಂಸದೆ ರಮ್ಯಾ ಅವರು ತಳ್ಳಿ ಹಾಕಿದ್ದಾರೆ.

ಎಐಸಿಸಿ ಸಾಮಾಜಿಕ ಜಾಲ ತಾಣ ಹಾಗೂ ಡಿಜಿಟಲ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಈ ಕುರಿತಂತೆ ಟ್ವೀಟ್ ಮಾಡಿ, ಮಾಜಿ ಉದ್ಯೋಗಿ ಆರೋಪಗಳಲ್ಲಿ ಹುರುಳಿಲ್ಲ. ಹಾಲಿ ಉದ್ಯೋಗಿ ಪರ 39 ಜನ ಇತರೆ ಸದಸ್ಯರು ಸಹಿ ಹಾಕಿ, ಸನ್ನಡತೆಯ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

Ramya

ಏನಿದು ಪ್ರಕರಣ: ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ರಮ್ಯಾ ಅವರ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವ್ಯಕ್ತಿ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ತಮಗಾದ ನೋವಿನ ಬಗ್ಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದೆ ಎಂದಿದ್ದಾರೆ. ಈ ಬಗ್ಗೆ ರಮ್ಯಾ ಅವರು ಯಾವುದೇ ಕ್ರಮ ಜರುಗಿಸದ ಕಾರಣ, ವಿಧಿ ಇಲ್ಲದೆ ಪೊಲೀಸರ ನೆರವು ಕೋರಿದ್ದಾರೆ.

ದೆಹಲಿಯ ನಾರ್ಥ್ ಅವಿನ್ಯೂ ಪೊಲೀಸ್ ಠಾಣೆಯಲ್ಲಿ ಚಿರಾಗ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354 ಎ ಹಾಗೂ 509ರ ಅನ್ವಯ ಎಫ್ಐಆರ್ ಹಾಕಲಾಗಿದೆ.

English summary
AICC Social Media and Digital Communiations chairperson Ramya alias Divya Spandana has clarified about the news on allegations against one of her Social media team workers by an ex worker. North avenue Police in Delhi are investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X