• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ''ಶ್ರೀರಾಮಚಂದ್ರ''

|

ನವದೆಹಲಿ, ಮಾರ್ಚ್ 18: "ರಾಮಾಯಣ" ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಸೇರಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆಯಾಗಿದ್ದಾರೆ.

ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್‌ನವರಾಗಿದ್ದು, 1987ರಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ಅವರ "ರಾಮಾಯಣ" ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದರು. ಆ ಪಾತ್ರದಿಂದ ಅರುಣ್ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದರು.

ಪಶ್ಚಿಮ ಬಂಗಾಳ: ಬಿಜೆಪಿಯಿಂದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಪಶ್ಚಿಮ ಬಂಗಾಳ: ಬಿಜೆಪಿಯಿಂದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹಿಂದಿ, ಒಡಿಯಾ, ಭೋಜಪುರಿ, ತೆಲುಗು, ಭ್ರಜ್ ಭಾಷೆಯ ಹಲವು ಟಿ.ವಿ.ಕಾರ್ಯಕ್ರಮಗಳ ನಿರೂಪಕರಾಗಿಯೂ ಅರುಣ್ ಕಾರ್ಯನಿರ್ವಹಿಸಿದ್ದಾರೆ. 1992ರಲ್ಲಿ ಯುಗೊ ಸಾಕೋ ಇಂಡೊ-ಜಪಾನ್ ಆನಿಮೇಷನ್ ಸಿನಿಮಾ "ರಾಮಾಯಣ; ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮಾ"ಗೆ ವಾಯ್ಸ್ ಓವರ್ ಕೂಡ ನೀಡಿದ್ದರು.

ಪ್ರೇಕ್ಷಕರ ಒತ್ತಾಯದ ಮೇರೆಗೆ ಲಾಕ್‌ಡೌನ್ ಸಮಯದಲ್ಲಿ "ರಾಮಾಯಣ" ಧಾರಾವಾಹಿಯನ್ನು ಮರುಪ್ರಸಾರ ಮಾಡಿದ್ದನ್ನು ಸ್ಮರಿಸಬಹುದು.

English summary
Actor Arun Govil known for Lord Ram role in the Ramayana TV series, joined the BJP in Delhi on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X