ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆ ಮಗನ ಭಾವನಾತ್ಮಕ ನಂಟಿಗೆ ಜೀವ ತುಂಬಿದ ಚಿತ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್, 08: ಒಂದು ಫೋಟೋ ತಂದೆ ಮಗನ ನಡುವಿನ ಬಾಂಧವ್ಯವನ್ನು ಹೇಳುವಂತಿತ್ತು. ಗುರುವಾರ ರಾತ್ರಿ 9 ಗಂಟೆ ವೇಳೆಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಸುದ್ದಿ ದೇಶಾದ್ಯಂತ ಹರಡಿತು.

ಕೇಂದ್ರ ಸಚಿವರಾಗಿ, ಬಿಜೆಪಿ ಮುಖಂಡರಾಗಿ ಸರಳ, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನ ಸುದ್ದಿಯನ್ನು ಸ್ವತಃ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರು ವ್ಯಕ್ತಪಡಿಸಿರುವ ರೀತಿ ಮನ ಮಿಡಿಯುವಂತಿತ್ತು.

ಟ್ವಿಟರ್ ನಲ್ಲಿ ಪೋಸ್ಟ್ ಆಗಿದ್ದ ಇದೊಂದು ಫೋಟೋ ತಂದೆ ಮಗನ ನಡುವಿನ ನಂಟನ್ನು ಸಾರಿ ಹೇಳುವಂತಿತ್ತು. ಪುಟ್ಟ ಕಂದನನ್ನು ಕೈಯಲ್ಲಿ ಎತ್ತಿ ಹಿಡಿದ ತಂದೆಯ ಪ್ರೀತಿಗೆ ಇದೊಂದು ಭಾವಚಿತ್ರ ಭಾವನೆಗಳಿಗೆ ಜೀವ ತುಂಬುವಂತಿತ್ತು. ಚಿರಾಗ್ ಪಾಸ್ವಾನ್ ಅವರ ಟ್ವಿಟರ್ ಖಾತೆಯ ವಾಲ್ ಪೋಸ್ಟ್ ನಲ್ಲಿ ಕಂಡು ಬಂದ ಇದೊಂದು ಫೋಟೋ ತಂದೆ ಅಗಲಿಕೆಯಲ್ಲಿ ಮಗನ ಮನಸ್ಸು ಎಷ್ಟು ನೊಂದಿರುವುದು ಎಂಬುದನ್ನು ಸಾರಿ ಸಾರಿ ಹೇಳುವಂತಿತ್ತು.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

Ram Vilas Paswan Passes Away: Son Chirag Tweets Emotional note

ಅಪ್ಪಾ ಐ ಮಿಸ್ ಯು:

"ಅಪ್ಪಾ.. ಇಂದು ನೀವು ವಾಸ್ತವವಾಗಿ ಈ ಜಗತ್ತಿನಲ್ಲಿ ಇಲ್ಲ. ಆದರೆ ನನಗೆ ಗೊತ್ತಿದೆ. ನೀವು ಎಲ್ಲೇ ಇದ್ದರೂ ನನ್ನ ಜೊತೆಯಲ್ಲೇ ಇರುತ್ತೀರಾ ಎಂಬ ವಿಶ್ವಾಸವಿದೆ. Miss You Papa". ಫೋಟೋದ ಮೇಲಿನ ಇದೊಂದು ಸಾಲು ತಂದೆ ಸಾವಿನ ನೋವಿಗೆ ಸಾಕ್ಷಿಯಾಯಿತು. ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನ ಬೆನ್ನಲ್ಲೇ ಅವರ ಮಗ ಹಾಗೂ ಲೋಕ ಜನಶಸ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಮಾಡಿದ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಮನ ಮುಟ್ಟುವಂತಿದೆ.

ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಸಚಿವರು ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು ಖಾತೆ ಸಚಿವ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರು ಸೆಪ್ಟೆಂಬರ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ರಾಮ್ ವಿಲಾಸ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.

English summary
Union Minister Ram Vilas Paswan Death; Son Chirag Paswan Tweets Will Miss You Papa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X