ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ವಾನ್ NDA ತೊರೆಯುತ್ತಾರಾ? ಕುತೂಹಲ ಕೆರಳಿಸಿದ ಶಾ ಭೇಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮತ್ತು ಎಲ್ ಜಿಪಿ(ಲೋಕ ಜನಶಕ್ತಿ ಪಕ್ಷ)ಯ ಮುಖಂಡ ರಾಮ್ ವಿಲಾಸ್ ಪಾಸ್ವಾಮ್ ಮತ್ತವರ ಪುತ್ರ ಚಿರಾಗ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಶಾ ಅವರನ್ನು ಭೇಟಿಯಾದ ಅವರು, ಬಿಹಾರದಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಷಯಕ್ಕಿಂತ ಹೆಚ್ಚಾಗಿ ರಾಜ್ಯಸಭೆಯಲ್ಲಿ ಎಲ್ ಜಿಪಿ ಗೆ ನೀಡುತ್ತೇನೆಂದಿದ್ದ ಸೀಟುಗಳನ್ನು ಬಿಜೆಪಿ ನೀಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

'ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!''ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!'

ಎನ್ ಡಿಎ ಯನ್ನು ತೊರೆಯುವ ಕುರಿತ ವದಂತಿಯನ್ನು ಅವರು ತಳ್ಳಿಹಾಕಿದರು. ಅಮಿತ್ ಶಾ-ಪಾಸ್ವಾನ್ ಭೇಟಿಯ ಸಮಯದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಜೊತೆಯಲ್ಲಿದ್ದರು.

Ram Vilas Paswan and son Chirag meet Amit Shah

ಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆ

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಈಗಾಗಲೇ ಆರ್ ಎಲ್ ಎಸ್ ಪಿ ಹೊರನಡೆದಿದ್ದು, ಪಕ್ಷದ ಮುಖಂಡ ಉಪೇಂದ್ರ ಕುಶ್ವಾಹ ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಮಾತ್ರವಲ್ಲ, ಸಂಭಾವ್ಯ ಮಹಾಘಟಬಂಧನದಲ್ಲಿ ಕಅಯಜೋಡಿಸುವುದಾಗಿ ಘೋಷಣೆಯನ್ನೂ ಮಾಡಿ, ಗುರುವಾರ ದೆಹಲಿಯಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿದ್ದರು. ಪಾಸ್ವಾನ್ ಅವರೂ ಎನ್ ಡಿಎ ತೊರೆಯುವುದು ಒಳಿತು ಎಂಬ ಸಲಹೆಯನ್ನೂ ಅವರು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Union Minister Ram Vilas Paswan and his son Chirag Paswan met BJP president Amit Shah in Delhi on Thursday in an attempt to tackle a growing conflict between the allies just months before the general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X