ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಗುಂಡಿನ ದಾಳಿ; ಆರೋಪಿಯ ಫೇಸ್‌ಬುಕ್‌ ಸ್ಟೇಟಸ್‌ಗಳು

|
Google Oneindia Kannada News

ನವದೆಹಲಿ, ಜನವರಿ 30 : ವಿಧಾನಸಭೆ ಚುನಾವಣೆ ಕಾವಿನ ನಡುವೆಯೇ ದೆಹಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಸಿಎಎ ವಿರೋಧಿಸಿ ಜಾಮಿಯ ವಿಶ್ವವಿದ್ಯಾಲಯದ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.

ಗುರುವಾರ ನಡೆದ ಗುಂಡಿನ ದಾಳಿಯಿಂದಾಗಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಗುಂಡಿನ ದಾಳಿ ಬಗ್ಗೆ ಮತ್ತು ದಾಳಿ ನಡೆಸುವಾಗ ಪೊಲೀಸರು ಸಮೀಪದಲ್ಲಿದ್ದರೂ ಸುಮ್ಮನಿದ್ದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಫೈರಿಂಗ್ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಫೈರಿಂಗ್

ದೆಹಲಿಯಲ್ಲಿ ಗುಂಡಿನ ದಾಳಿ ನಡೆಸಿದ Rambhakt Gopal ಫೇಸ್‌ಬುಕ್‌ ಪ್ರೊಫೈಲ್‌ಗಳಲ್ಲಿನ ಪೋಸ್ಟ್‌ಗಳು ಗಮನ ಸೆಳೆಯುತ್ತಿವೆ. ಇಂದು ಮುಂಜಾನೆಯಿಂದ ಆತ ಅನೇಕ ಪೋಸ್ಟ್‌ಗಳನ್ನು ಹಾಕಿದ್ದು, ಈಗ ಅದಕ್ಕೆ ಕಮೆಂಟ್‌ಗಳ ಸುರಿಮಳೆಗಳು ಬರುತ್ತಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?

'ಇಲ್ಲಿ ನಾನೊಬ್ಬನೇ ಹಿಂದೂ' ಎಂದು ಹಿಂದಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಗೋಪಾಲ್, "ನನ್ನ ಮನೆಯನ್ನು ನೋಡಿಕೊಳ್ಳಿ" ಎಂದು ಫೇಸ್‌ಬುಕ್ ಮೂಲಕ ಕರೆ ನೀಡಿದ್ದಾನೆ. ಗುಂಡಿನ ದಾಳಿಗೂ ಮುನ್ನ ಫೇಸ್‌ ಬುಕ್ ಲೈವ್ ಸಹ ಮಾಡಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆ: ಪ್ರಧಾನಿಗೆ ಪಿ.ಚಿದಂಬರಂ ಡಿಫರೆಂಟ್ ಸಲಹೆ ಪೌರತ್ವ ತಿದ್ದುಪಡಿ ಕಾಯ್ದೆ: ಪ್ರಧಾನಿಗೆ ಪಿ.ಚಿದಂಬರಂ ಡಿಫರೆಂಟ್ ಸಲಹೆ

ಗುಂಡಿನ ದಾಳಿ ನಡೆಸಿದವನು ಯಾರು?

ಗುಂಡಿನ ದಾಳಿ ನಡೆಸಿದವನು ಯಾರು?

ದೆಹಲಿ ಪೊಲೀಸ್ ಮೂಲಗಳ ಪ್ರಕಾರ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗುಂಡಿನ ದಾಳಿ ನಡೆಸಿದ್ದು ರಾಮ್ ಭಗತ್ ಗೋಪಾಲ್ ಶರ್ಮಾ. 19 ವರ್ಷ ವಯಸ್ಸಿನ ಆರೋಪಿ ಉತ್ತರ ಪ್ರದೇಶದ ಬುದ್ಧ ನಗರದ ನಿವಾಸಿ.

ಪ್ರತಿಭಟನಾ ಸ್ಥಳದಿಂದ ಲೈವ್

ಪ್ರತಿಭಟನಾ ಸ್ಥಳದಿಂದ ಲೈವ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯ ವಿಲಿಯಾ ವಿಶ್ವವಿದ್ಯಾಲಯದ ಬಳಿ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿದ್ದ ರಾಮ್ ಭಗತ್ ಗೋಪಾಲ್ ಶರ್ಮಾ ಫೇಸ್‌ಬುಕ್ ಲೈವ್ ಮಾಡಿದ್ದಾನೆ. ಕೇವಲ 35, 40 ಸೆಕೆಂಡ್‌ಗಳ ಲೈವ್ ಬಳಿಕ ಅದನ್ನು ಕಟ್ ಮಾಡಿದ್ದಾನೆ.

ಫೇಸ್‌ಬುಕ್ ಸ್ಟೇಟಸ್

ಫೇಸ್‌ಬುಕ್ ಸ್ಟೇಟಸ್

ಇಂದು ಬೆಳಗ್ಗೆ ಹಾಕಿರುವ ಪೋಸ್ಟ್‌ನಲ್ಲಿ ಗೋಪಾಲ್ ಶರ್ಮಾ ಫೇಸ್‌ಬುಕ್‌ನಲ್ಲಿ see first ಆಯ್ಕೆ ಮಾಡಿಕೊಳ್ಳಿ ಎಂದು ಕರೆ ನೀಡಿದ್ದಾನೆ. ಈ ಆಯ್ಕೆಯನ್ನು ಮಾಡಿಕೊಂಡರೆ ಅವರ ಪೋಸ್ಟ್ ನಿಮಗೆ ಮೊದಲು ಕಾಣುತ್ತದೆ.

ನನ್ನ ಮನೆಯನ್ನು ನೋಡಿಕೊಳ್ಳಿ

ನನ್ನ ಮನೆಯನ್ನು ನೋಡಿಕೊಳ್ಳಿ

ಗೋಪಾಲ್ ಶರ್ಮಾ ನನ್ನ ಮನೆಯನ್ನು ನೋಡಿಕೊಳ್ಳಿ, ಇಲ್ಲಿ ಯಾವ ಹಿಂದೂ ಮಾಧ್ಯಮಗಳು ಇಲ್ಲ ಎಂಬುದು ಸೇರಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದಾನೆ.

ಶೀಘ್ರದಲ್ಲೇ ಹೇಳುತ್ತೇನೆ

ಶೀಘ್ರದಲ್ಲೇ ಹೇಳುತ್ತೇನೆ

ಗುರುವಾರ ಬೆಳಗ್ಗೆ ಪೋಸ್ಟ್ ಹಾಕಿದಾಗ ಕಮೆಂಟ್‌ಗಳಲ್ಲಿ ಏಕೆ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಶೀಘ್ರದಲ್ಲೇ ಉತ್ತರ ನೀಡುತ್ತೇನೆ ಎಂದು ಗೋಪಾಲ್ ಶರ್ಮಾ ಹೇಳಿದ್ದಾನೆ.

ಎಫ್‌ಬಿಖಾತೆ ಡಿಲೀಟ್

ಎಫ್‌ಬಿಖಾತೆ ಡಿಲೀಟ್

ದೆಹಲಿಯಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಯ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಗುಂಡಿನ ದಾಳಿಗೂ ಮೊದಲು ಆರೋಪಿ ಹಲವು ಸ್ಟೇಟಸ್‌ಗಳನ್ನು ಹಾಕಿದ್ದ.

English summary
Ram Bhagat Gopal Sharma opened fire in Jamia area on January 30, 2020. Now he is in Delhi police custody. He is a resident of Jewar area of Gautam Buddha Nagar district Uttar Pradesh. Here are the his face book posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X