ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರೀತಿಯಲ್ಲಿ ಹುಚ್ಚರಾಗಿ ಟ್ಯಾಟೂ ಹಾಕಿಸಿಕೊಳ್ಳಬಾರದು': ರಾಖಿ ಸಲಹೆ

|
Google Oneindia Kannada News

'ಪ್ರೀತಿಯಲ್ಲಿ ಹುಚ್ಚರಾಗಿ ಟ್ಯಾಟೋ ಹಾಕಿಸಿಕೊಳ್ಳಬಾರದು' ಎಂದು ಹೇಳುವ ಮೂಲಕ ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ದೇಹದ ಮೇಲಿದ್ದ ಮಾಜಿ-ಪತಿಯ ಟ್ಯಾಟೂ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ರಾಖಿ ಸಾವಂತ್ ಮತ್ತು ರಿತೇಶ್ ತಮ್ಮ ಬಿಗ್ ಬಾಸ್ ದಿನಗಳಲ್ಲಿ ಯಾವಾಗಲೂ ನೋಡುಗರ ಗಮನ ಸೆಳೆಯುತ್ತಿದ್ದರು. ಅವರ ಮಾತು ಹಾಗೂ ರಾಖಿ ಸಾವಂತ್ ಚೇಷ್ಟೆಗಳವರೆಗೆ ಇಬ್ಬರೂ ಬಿಗ್‌ ಬಾಸ್‌ನಲ್ಲಿ ಚರ್ಚೆಯಲ್ಲಿದ್ದರು. ವಾಸ್ತವವಾಗಿ BB 15ರ ಗ್ರ್ಯಾಂಡ್ ಫಿನಾಲೆಯಲ್ಲಿ ರಾಖಿ ಮತ್ತು ರಿತೇಶ್ ಅವರ ಲಿಪ್-ಲಾಕ್ ಯಾರೂ ಕೂಡ ಮರೆತಿಲ್ಲ. ಅದಾಗಲೇ ಫೆಬ್ರವರಿ 2022 ರಂದು ರಾಖಿ ಮತ್ತು ರಿತೇಶ್ 3 ವರ್ಷಗಳ ಒಗ್ಗಟ್ಟಿನ ಜೀವನಕ್ಕೆ ಬ್ರೇಕ್ ಹಾಕಿರುವುದಾಗಿ ಘೋಷಿಸಿದರು. ಇದೀಗ ರಾಖಿ ತನ್ನ ಸೊಂಟದ ಮೇಲಿದ್ದ ರಿತೇಶ್ ಟ್ಯಾಟೂವನ್ನು ತೆಗೆದಿದ್ದಾಳೆ.

ರಿತೇಶ್‌ನ ಟ್ಯಾಟೂವನ್ನು ತೆಗೆಸಿದ ರಾಖಿ

ರಾಖಿ ಸಾವಂತ್ ಮತ್ತು ಅವರ ಪತಿ ರಿತೇಶ್ ಮೂರು ವರ್ಷಗಳ ನಂತರ ಬೇರೆಯಾಗಿದ್ದಾರೆ. ಫೆಬ್ರವರಿ 2022 ರಲ್ಲಿ ಅಧಿಕೃತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಘೋಷಿಸಿದ್ದರು. ರಾಖಿ ಈಗ ತನ್ನ ಮಾಜಿ ಗಂಡನ ಹೆಸರನ್ನು ತನ್ನ ದೇಹದಿಂದ ತೆಗೆದುಹಾಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರಿತೇಶ್ ಅವರ ಟ್ಯಾಟೂವನ್ನು ತೆಗೆದುಹಾಕುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ "ಆಜ್ ಮೇ ಅಪ್ನಾ ಯೇ ರಿತೇಶ್ ಟ್ಯಾಟೂ ನಿಕಲ್ನೆ ವಾಲಿ ಹೂನ್" (ಇಂದು ನಾನು ನನ್ನ ಈ ರಿತೇಶ್ ಟ್ಯಾಟೂವನ್ನು ತೆಗೆಸುತ್ತಿದ್ದೇನೆ) ಎಂದು ಹೇಳಿದ್ದಾರೆ.

Pyaar mein paagal hoke tattoo nahi karwana chahiye Rakhi Sawants advice

ಟ್ಯಾಟೂ ತೆಗೆಯುವ ಪ್ರಕ್ರಿಯೆಯಲ್ಲಿ ನೋವನ್ನು ಅನುಭವಿಸುವ ರಾಖಿ, "3 ಸಾಲ್ ಶಾದಿ ಕೆ ಬಾದ್.. ರಿತೇಶ್ ತುಮ್ ಪರ್ಮನೆಂಟ್ಲಿ ಮೇರಿ ಜಿಂದಗಿ ಸೇ ಔರ್ ಮೇರಿ ಬಾಡಿ ಸೇ ನಿಕಲ್ ಗಯೇ ಹೋ" ( ಮೂರು ವರ್ಷಗಳ ನಂತರ ರಾಕೇಶ್ ನೀನು ನನ್ನ ಜೀವನದಿಂದ ಹಾಗೂ ನನ್ನ ದೇಹದಿಂದ ಶಾಶ್ವತವಾಗಿ ಹೊರಗುಳಿಯುವೆ) ಎಂದು ಹೇಳಿದ್ದಾರೆ. ಜೊತೆಗೆ ಅವರು "ಜಿಂದಗಿ ಮೇ ಕಭಿ ಟ್ಯಾಟೂ ನಹೀ ಕರ್ವಾನಾ ಚಾಹಿಯೇ ಪ್ಯಾರ್ ಮೇ ಪಾಗಲ್ ಹೋಕೆ. ಫಿರ್ ನಿಕಲ್ನಾ ಬಹುತ್ ಮುಷ್ಕಿಲ್ ಹೋ ಜಾತಾ ಹೈ"(ಪ್ರೀತಿಯಲ್ಲಿ ಹುಚ್ಚರಾಗಿ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ನಂತರ ಅದನ್ನು ತೆಗೆದುಹಾಕಲು ಕಷ್ಟವಾಗುತ್ತದೆ) ಎಂದು ಹೇಳಿದ್ದಾರೆ.

Pyaar mein paagal hoke tattoo nahi karwana chahiye Rakhi Sawants advice

ರಿತೇಶ್ ಜೊತೆಗಿನ ಪ್ರತ್ಯೇಕತೆಯ ಕುರಿತು ರಾಖಿಯ ಅಧಿಕೃತ ಹೇಳಿಕೆ

ಪ್ರೇಮಿಗಳ ದಿನಕ್ಕೂ ಮುನ್ನ, ರಾಖಿ ಸಾವಂತ್ ತಾನು ಮತ್ತು ರಿತೇಶ್ ಬೇರೆಯಾಗಿರುವುದನ್ನು ಖಚಿತಪಡಿಸಿದ್ದಾರೆ. "ಆತ್ಮೀಯ ಸ್ನೇಹಿತರು ಮತ್ತು ಹಿತೈಷಿಗಳು ರಿತೇಶ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಲು ಬಯಸಿದ್ದೇವೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಬಹಳಷ್ಟು ಸಂಭವಿಸಿದೆ ಮತ್ತು ಕೆಲವು ವಿಷಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಕೆಲ ನಿರ್ಧಾರದ ಮೂಲಕ ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ನಾವಿಬ್ಬರೂ ಸೌಹಾರ್ದಯುತವಾಗಿ ಮುಂದುವರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಜೊತೆಗೆ ನಾವಿಬ್ಬರೂ ನಮ್ಮ ಜೀವನವನ್ನು ಪ್ರತ್ಯೇಕವಾಗಿ ಆನಂದಿಸುತ್ತೇವೆ. ಈ ಕೆಲದ ಪ್ರೇಮಿಗಳ ದಿನದ ಮೊದಲು ಆಗಬೇಕು. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ನಾನು ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ನಾನು ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು ಮತ್ತು ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ರಾಖಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

English summary
'Pyaar mein paagal hoke tattoo nahi karwana chahiye' Rakhi Sawant's advice as she removes ex-hubby's name from body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X