ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ಅಧಿಕಾರಿ ರಾಕೇಶ್ ಆಸ್ತಾನಾಗೆ ಹೆಚ್ಚುವರಿ ಅಧಿಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 1: ಸಿಬಿಐನಲ್ಲಿ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರೊಂದಿಗೆ ಜಗಳವಾಡುವ ಮೂಲಕ ವಿವಾದಕ್ಕೀಡಾದ ಬಳಿಕ ನಾಗರಿಕ ವಿಮಾನಯಾನ ಭದ್ರತಾ ಇಲಾಖೆಗೆ ವರ್ಗಾವಣೆಯಾಗಿದ್ದ ತನಿಖಾ ಸಂಸ್ಥೆಯ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋದ ಹೆಚ್ಚುವರಿ ಅಧಿಕಾರ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಯು ಆಸ್ತಾನಾ ಅವರನ್ನು ಮಾದಕವಸ್ತು ನಿಯಂತ್ರಣ ಬ್ಯೂರೋದ (ಎನ್‌ಸಿಬಿ) ಮಹಾ ನಿರ್ದೇಶಕರನ್ನಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ನೇಮಕ ಮಾಡಿದೆ.

ರಾಕೇಶ್ ಅಸ್ತಾನಾ ದುಬೈನಲ್ಲಿ ನನಗೆ ಬೆದರಿಕೆ ಹಾಕಿದ್ದರು ಎಂದ ಮೈಖೇಲ್ರಾಕೇಶ್ ಅಸ್ತಾನಾ ದುಬೈನಲ್ಲಿ ನನಗೆ ಬೆದರಿಕೆ ಹಾಕಿದ್ದರು ಎಂದ ಮೈಖೇಲ್

1984ರ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ ಆಸ್ತಾನಾ ಅವರು ಹೊಸ ಅಧಿಕಾರಿ ನೇಮಕವಾಗುವವರೆಗೆ ಅಥವಾ ಮುಂದಿನ ಆರು ತಿಂಗಳವರೆಗೆ ಈ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

Rakesh Asthana Given Additional Charge Narcotics Control Bureau

ಎನ್‌ಸಿಬಿಯ ಮುಖ್ಯಸ್ಥರಾಗಿದ್ದ ಅಭಯ್ ಅವರನ್ನು ಜುಲೈ 4ರಂದು ಹೈದರಾಬಾದ್ ಮೂಲದ ಸರ್ದಾರ್ ವಲ್ಲಭಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಆಗಿನಿಂದ ಈ ಹುದ್ದೆ ಖಾಲಿ ಉಳಿದಿತ್ತು.

ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಗೆ ಆಘಾತ, ಸಿಬಿಐಯಿಂದ ವರ್ಗಾವಣೆವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಗೆ ಆಘಾತ, ಸಿಬಿಐಯಿಂದ ವರ್ಗಾವಣೆ

ಸಿಬಿಐನ ಎರಡನೆ ಉನ್ನತ ಅಧಿಕಾರಿಯಾಗಿದ್ದ ಆಸ್ತಾನಾ ಮತ್ತು ಉನ್ನತ ಅಧಿಕಾರಿ ಅಲೋಕ್ ವರ್ಮಾ ಅವರ ನಡುವೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರಿ ಜಗಳ ನಡೆದಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸಿಬಿಐನ ಗೌರವವನ್ನು ಮಣ್ಣುಪಾಲು ಮಾಡಿತ್ತು. ಬಳಿಕ ಆಸ್ತಾನಾ ಅವರನ್ನು ಸಿಎಎಸ್‌ನ ಮಹಾ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಅವರು ಅದಕ್ಕೆ ಒಪ್ಪಿಕೊಳ್ಳದೆ ರಾಜೀನಾಮೆ ನೀಡಿದ್ದರು.

English summary
Former special director of CBI and Director General of Civil Aviation Security Rakesh Asthana has been given the additional charge of the Narcotics Control Bereau by the Appointments Committee on Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X