ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಸಿಬಿಐ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದ ರಾಕೇಶ್ ಅಸ್ಥಾನ ವಿರುದ್ಧದ ಲಂಚ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಸೇರಿದಂತೆ ಒಟ್ಟು 11 ವಿವಿಧ ಹುದ್ದೆಯ ಅಧಿಕಾರಿಗಳನ್ನು ಸಿಬಿಐ ವರ್ಗಾವಣೆ ಮಾಡಿದೆ.

ಸಿಬಿಐ ವಿವಾದ ಭುಗಿಲೆದ್ದ ಬೆನ್ನಲ್ಲೇ ಸರ್ಕಾರ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್ ರಾವ್ ಅವರನ್ನು ನೇಮಿಸಿದ್ದು, ಈಗ ಸಂಸ್ಥೆಗೆ ಚಿಕಿತ್ಸೆ ನೀಡುವ ಸಲುವಾಗಿ ಭಾರಿ ಬದಲಾವಣೆ ಮಾಡಲಾಗಿದೆ.

ರಾಕೇಶ್ ಅಸ್ಥಾನ ಹಣ ಕೀಳುವ ದಂಧೆಗಿಳಿದಿದ್ದರು : ಹೈಕೋರ್ಟ್ ಗೆ ಸಿಬಿಐ ರಾಕೇಶ್ ಅಸ್ಥಾನ ಹಣ ಕೀಳುವ ದಂಧೆಗಿಳಿದಿದ್ದರು : ಹೈಕೋರ್ಟ್ ಗೆ ಸಿಬಿಐ

ಅಧಿಕಾರಿಗಳ ವರ್ಗಾವಣೆಯ ಆದೇಶವನ್ನು ನಿರ್ದೇಶಕರ ಅನುಮೋದನೆಯಂತೆ ಮಾಡುತ್ತಿರುವುದಾಗಿ ಸಿಬಿಐ ಜಂಟಿ ನಿರ್ದೇಶಕ ಎನ್.ಎಂ. ಸಿಂಗ್ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಯಾರು, ಎಲ್ಲಿಗೆ ವರ್ಗ?
* ನವದೆಹಲಿಯ ಎಸಿ III ಮತ್ತು ಬಿಎಸ್&ಎಫ್‌ಸಿಯ ಎಚ್‌ಓಬಿ/ಡಿಐಜಿ ಮನೀಶ್ ಕುಮಾರ್ ಸಿನ್ಹಾ ಅವರನ್ನು ನಾಗಪುರದ ಎಸಿಬಿಯ ಡಿಐಜಿ/ಎಚ್‌ಓಬಿಯನ್ನಾಗಿ ವರ್ಗಾಯಿಸಲಾಗಿದೆ.

Rakesh Asthana case CBI Transfered dig, sp, dg

* ತರು ಗೌಬಾ, ವಲಯ ಡಿಐಜಿ/ಎಚ್‌ಓಬಿ, ಚಂಡೀಗಡ. ನವದೆಹಲಿಯ ಡಿಐಜಿ/ಎಚ್‌ಓಬಿಯ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

* ಎಸ್‌ಸಿ-Iರ ಡಿಐಜಿ/ಎಚ್‌ಓಬಿ ಜಸ್ಬೀರ್ ಸಿಂಗ್ ಅವರಿಗೆ ದೆಹಲಿಯ ಬಿಎಸ್&ಎಫ್‌ಸಿಯ ಹೆಚ್ಚುವರಿ ಎಚ್‌ಓಬಿ ಹೊಣೆಗಾರಿಕೆ ನೀಡಲಾಗಿದೆ.

* ಡಿಡಿಯ ಡಿಐಜಿ/ಎಸ್‌ಯು-I ಆಗಿರುವ ಅನೀಶ್ ಪ್ರಸಾದ್ ಅವರನ್ನು ಎಸ್‌ಯು-I ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ರಾಕೇಶ್ ಅಸ್ಥಾನ ಕೈಲಿದ್ದ ಮಲ್ಯ ಕೇಸ್ ಕತೆ ಏನಾಗಲಿದೆ?ರಾಕೇಶ್ ಅಸ್ಥಾನ ಕೈಲಿದ್ದ ಮಲ್ಯ ಕೇಸ್ ಕತೆ ಏನಾಗಲಿದೆ?

* ಇಓ-Iರ ಡಿಐಜಿ.ಎಚ್‌ಓಬಿ ಕೆ.ಆರ್. ಚೌರಾಸಿಯಾ ಅವರಿಗೆ ಡಿಐಜಿ/ಎಸ್‌ಯು-I ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

* ಚಂಡಿಗಡದ ಇಓ-IIIಯ ಎಚ್‌ಓಬಿ/ಎಸ್‌ಸಿಬಿ ಅಧಿಕಾರಿ ರಾಮ್ ಗೋಪಾಲ್ ಅವರಿಗೆ ಚಂಡಿಗಡದ ಎಚ್‌ಓಬಿ/ಎಸಿಬಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

* ನವದೆಹಲಿಯ ಇಓ-IIIರ ಎಸ್‌ಪಿ ಸತೀಶ್ ಡಾಗರ್ ಅವರನ್ನು ನವದೆಹಲಿಯ ಎಸಿ-IIIರ ಎಸ್‌ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

* ನವದೆಹಲಿಯ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾ ಅವರನ್ನು ನವದೆಹಲಿಯ ಎಂಡಿಎಂಎಯ ಎಚ್‌ಓಜೆಡ್/ಜೆಡಿ ಹುದ್ದೆಗೆ ವರ್ಗಾಯಿಸಲಾಗಿದೆ.

ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ

* ನವದೆಹಲಿಯ ಚಂಡಿಗಡ ಕೇಂದ್ರ ಕಚೇರಿಯ ಎಚ್‌ಓಜೆಡ್/ಜೆಡಿ ಎ.ಸಾಯಿ ಮನೋಹರ್ ಅವರಿಗೆ ನವದೆಹಲಿಯ ಎಸ್‌ಐಟಿ ಮತ್ತು ಟಿಎಫ್‌ಸಿ ವಲಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

* ಎಚ್‌ಓಜೆಡ್/ಜೆಡಿ ವಿ. ಮುರುಗೇಶನ್ ಅವರಿಗೆ ನವದೆಹಲಿಯ ಎಸಿ-I (ಕೇಂದ್ರ ಕಚೇರಿ) ಎಚ್‌ಓಜೆಡ್/ಜೆಡಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

* ನವದೆಹಲಿಯ ಇಓ-IIIರ ಡಿಐಜಿ/ಎಚ್‌ಓಬಿ ಅಮಿತ್ ಕುಮಾರ್ ಅವರನ್ನು ಜೆಡಿ (ಪಿ) ಕಚೇರಿಯ ಹೆಚ್ಚುವರಿ ಹೊಣೆಗಾರಿಕೆಗೆ ನಿಯೋಜಿಸಲಾಗಿದೆ.

English summary
CBI has transfered its 11 officers to other centres who were probing the case against Rakesh Asthana's case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X