ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ರಾಜ್ಯಸಭೆಯ 73 ಸ್ಥಾನಗಳಿಗೆ ಚುನಾವಣೆ

|
Google Oneindia Kannada News

ನವದೆಹಲಿ, ಜನವರಿ 4: ಭಾರತೀಯ ಸಂಸದೀಯ ವ್ಯವಸ್ಥೆಯ ಮೇಲ್ಮನೆ ಎನಿಸಿಕೊಂಡಿರುವ ರಾಜ್ಯಸಭೆಯ 73 ಸ್ಥಾನಗಳು 2020ರಲ್ಲಿ ತೆರವಾಗಲಿದ್ದು ಚುನಾವಣೆ ನಡೆಯಲಿದೆ.

ಹಾಲಿ ರಾಜ್ಯಸಭೆಯಲ್ಲಿ ಈಗಾಗಲೇ ನಾಲ್ಕು ಸ್ಥಾನಗಳು ಖಾಲಿಯಾಗಿದ್ದು, ಈ ವರ್ಷ ಹೊಸದಾಗಿ 69 ಸದಸ್ಯರು ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ಈ ಸ್ಥಾನಗಳಿಗೆ ವರ್ಷಂಪೂರ್ತಿ ಚುನಾವಣೆ ನಡೆಯಲಿದೆ.

ಕೇಂದ್ರ ಸಚಿವರಾದ ಹರ್‌ದೀಪ್ ಸಿಂಗ್ ಪುರಿ, ರಾಮ್‌ದಾಸ್ ಅಠಾವಳೆ, ಹಿರಿಯ ರಾಜಕಾರಣಿಗಳಾದ ಶರದ್ ಪವಾರ್, ದಿಗ್ವಿಜಯ್ ಸಿಂಗ್ ಹಾಗೂ ವಿಜಯ್ ಗೋಯೆಲ್ ಕೂಡ ನಿವೃತ್ತಿಯಾಗುವ ಪಟ್ಟಿಯಲ್ಲಿದ್ದಾರೆ.

parliament

250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸದ್ಯ ಬಿಜೆಪಿ83 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ 46 ಸದಸ್ಯರನ್ನು ಹೊಂದಿದ್ದಾರೆ. ಈ ವರ್ಷ ಖಾಲಿಯಾಗುತ್ತಿರುವ 69 ಸದಸ್ಯರಲ್ಲಿ 18 ಜನ ಬಿಜೆಪಿಯವರಾಗಿದ್ದಾರೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು?: ರಾಜ್ಯವಾರು ಚುನಾವಣೆ ನಡೆಯುವುದರಿಂದ ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಆಧರಿಸಿ ಸದಸ್ಯರ ಪ್ರಕ್ರಿಯೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಕೆಲ ರಾಜ್ಯಗಳ ಅಧಿಕಾರವನ್ನು ಬಿಜೆಪಿ ಕಳೆದುಕೊಂಡಿರುವುದರಿಂದ ಹೆಚ್ಚುವರಿ ಸೀಟುಗಳನ್ನು ಗಳಿಸಿ ರಾಜ್ಯಸಭೆ ಸಂಖ್ಯೆ ಹೆಚ್ಚಿಸಿಕೊಳ್ಳುವ ಒತ್ತಾಸೆಯ ಮೇಲೆ ಪರಿಣಾಮ ಬೀರಲಿದೆ.

ಆದರೆ ಕಾಂಗ್ರೆಸ್ ಅಲ್ಪ ಮಟ್ಟಿನ ಯಶಸ್ಸು ಗಳಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣವೇನೆಂದರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಸರ್ಕಾರ ಹೊಂದಿರುವುದು ಕಾಂಗ್ರೆಸ್‌ಗೆ ಲಾಭವಾಗಬಹುದು.

ರಾಜ್ಯ-ಖಾಲಿಯಾಗಲಿರುವ ಸ್ಥಾನ
ಉತ್ತರ ಪ್ರದೇಶ-10, ಮಹಾರಾಷ್ಟ್ರ-7, ತಮಿಳುನಾಡು-6, ಪಶ್ಚಿಮ ಬಂಗಾಳ-5, ಬಿಹಾರ-5, ಗುಜರಾತ್-4, ಕರ್ನಾಟಕ-4, ಆಂಧ್ರಪ್ರದೇಶ-4, ಒಡಿಶಾ-4, ರಾಜಸ್ಥಾನ-3, ಮಧ್ಯಪ್ರದೇಶ-3, ತೆಲಂಗಾಣ-2, ಹರ್ಯಾಣ-2, ಛತ್ತೀಸ್‌ಗಢ-2, ಉತ್ತರಾಖಂಡ್-1,ಹಿಮಾಚಲಪ್ರದೇಶ-1, ಮಿಜೋರಾಂ-1, ಮೇಘಾಲಯ-1, ಮಣಿಪುರ-1, ಅರುಣಾಚಲಪ್ರದೇಶ-1.

English summary
73 Rajya sabha members will retire in 2020, BJP will loose large number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X