ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಭವನದಲ್ಲಿ ಮತ್ತೊಂದು ಕೊರೊನಾ ಸೋಂಕು, ಮಹಡಿ ಸೀಲ್‌ಡೌನ್

|
Google Oneindia Kannada News

ದೆಹಲಿ, ಮೇ 29: ಸಂಸತ್ ಭವನದಲ್ಲಿ ಕಾರ್ಯನಿರ್ವಹಿಸುವ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಶುಕ್ರವಾರ ರಾಜ್ಯಸಭೆ ಕಾರ್ಯದರ್ಶಿ ಖಚಿತಪಡಿಸಿದ್ದಾರೆ.

Recommended Video

30% ಕೊರೋನಾಗೆ ಖರ್ಚಾಗಿದೆ ಇನ್ನೂ 800 ಕೋಟಿ ಇದ್ಯಂತೆ | BC Patil | Oneindia Kannada

ಸೋಂಕು ದೃಢವಾಗುತ್ತಿದ್ದಂತೆ ಆತ ಕೆಲಸ ಮಾಡುತ್ತಿದ್ದ ಮಹಡಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಚೇರಿ ಪೂರ್ತಿ ರೋಗನಿವಾರಕ ಔಷಧಿ ಸಿಂಪಡಣೆ ಮಾಡಲಾಗಿದೆ ಎಂದು ಆಡಳಿತ ಸಿಬ್ಬಂದಿ ತಿಳಿಸಿದ್ದಾರೆ.

ರಾಜ್ಯಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿ ಮತ್ತು ಮಕ್ಕಳು ಕೂಡ ಕೊವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದವರ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಗೃಹ ಇಲಾಖೆ ಫೇಸ್‌ಬುಕ್‌ ಖಾತೆಯಲ್ಲಿ 'ಗುಂಡಿನ ಪಾರ್ಟಿ': ಪೇಚಿಗೆ ಸಿಲುಕಿದ ಅಮಿತ್ ಶಾಗೃಹ ಇಲಾಖೆ ಫೇಸ್‌ಬುಕ್‌ ಖಾತೆಯಲ್ಲಿ 'ಗುಂಡಿನ ಪಾರ್ಟಿ': ಪೇಚಿಗೆ ಸಿಲುಕಿದ ಅಮಿತ್ ಶಾ

ರಾಜ್ಯಸಭೆಯ ಸಂಪಾದಕೀಯ ಮತ್ತು ಅನುವಾದ (ಇ ಮತ್ತು ಟಿ) ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯಲ್ಲಿ ರೋಗ ಲಕ್ಷಣ ಕಂಡು ಬಂದಿತ್ತು. ಮುನ್ನೆಚ್ಚರಿಕೆಯಿಂದ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ಮಾಡಿದ ಒಂದು ವಾರದ ಬಳಿಕ ಸೋಂಕು ತಗುಲಿರುವುದು ದೃಢವಾಗಿದೆ.

Rajya Sabha Senior Officer Tested COVID19 Positive

ಸಂಸತ್ತಿನ ಅನೆಕ್ಸ್ ಕಟ್ಟಡದ ಐದನೇ ಮಹಡಿಯಲ್ಲಿರುವ ಮೇ 12 ರವರೆಗೆ ಅಧಿಕಾರಿ ಕಚೇರಿಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಅನೆಕ್ಸ್ ಕಟ್ಟಡವು ಮುಖ್ಯ ಸಂಸತ್ತಿನ ಕಟ್ಟಡದಿಂದ ಸುಮಾರು 100 ಮೀಟರ್ ದೂರದಲ್ಲಿದೆ. ಇದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.

ಇನ್ನು ಲಾಕ್‌ಡೌನ್‌ ಹಿನ್ನೆಲೆ ಸಂಸತ್ ಭವನದ ಕಚೇರಿಗಳು ಮುಚ್ಚಲಾಗಿತ್ತು. ಲಾಕ್‌ಡೌನ್‌ 2.0 ಅವಧಿ ಮುಗಿದ ನಂತರ ಮೇ 3 ರಿಂದ ಮೂರನೇ ಒಂದು ಭಾಗದಷ್ಟು ಸಿಬ್ಬಂದಿಗಳೊಂದಿಗೆ ಸಂಸತ್ತು ಕಾರ್ಯ ಪ್ರಾರಂಭ ಮಾಡಿತ್ತು. ಇದಕ್ಕೂ ಮುಂಚೆ ಏಪ್ರಿಲ್‌ ತಿಂಗಳಲ್ಲಿ ಕೆಲಸದಾಕೆಗೆ ಸಂಸತ್ ಭವನದ ಪ್ರವೇಶ ದ್ವಾರದ ಬಳಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು.

English summary
Rajya Sabha senior officer tested coronavirus positive. Rajya Sabha secretariat officer confirms the news
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X