ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಮಾರ್ಷಲ್‌ಗಳ ಸಮವಸ್ತ್ರ ವಿವಾದ: 'ಸೇನಾ' ಟೊಪ್ಪಿಗೆ ಮುಕ್ತಿ

|
Google Oneindia Kannada News

ನವದೆಹಲಿ, ನವೆಂಬರ್ 21: ರಾಜ್ಯಸಭೆಯ ಮಾರ್ಷಲ್‌ಗಳಿಗೆ ಸೇನೆಯ ಶೈಲಿಯ ಸಮವಸ್ತ್ರ ಮತ್ತು ಟೊಪ್ಪಿ ನೀಡಿದ್ದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಮಿಲಿಟರಿ ಟೊಪ್ಪಿಯನ್ನು ಹೋಲುವ ಟೊಪ್ಪಿ ಇಲ್ಲದೆಯೇ ಗುರುವಾರ ನಡೆದ ರಾಜ್ಯಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾಣಿಸಿಕೊಂಡರು. ಸೋಮವಾರ ಕಲಾಪ ಆರಂಭವಾದ ಸಂದರ್ಭದಲ್ಲಿ ತಿಳಿನೀಲಿ ಬಣ್ಣದ ಸೇನಾ ಸಮವಸ್ತ್ರದಲ್ಲಿ ಮಾರ್ಷಲ್‌ಗಳು ಕಾಣಿಸಿಕೊಂಡಿದ್ದರು. ಇದು ತೀವ್ರ ಚರ್ಚೆ ಹುಟ್ಟುಹಾಕಿತ್ತು.

ರಾಜ್ಯಸಭೆ ಗಣರಾಜ್ಯದ ಆತ್ಮದಂತೆ: ಪ್ರಧಾನಿ ಮೋದಿರಾಜ್ಯಸಭೆ ಗಣರಾಜ್ಯದ ಆತ್ಮದಂತೆ: ಪ್ರಧಾನಿ ಮೋದಿ

ಸೇನೆಯ ಮಾಜಿ ಮುಖ್ಯಸ್ಥ ಜನರಲ್ ವೇದ್ ಪ್ರಕಾಶ್ ಮಲಿಕ್, ಇದು ಸಂಪೂರ್ಣ ಅಕ್ರಮ ಮತ್ತು ಭದ್ರತೆಗೆ ಅಪಾಯಕಾರಿ ಎಂದು ಹೇಳಿದ್ದರು. ರಾಜಕೀಯ ಮುಖಂಡರು, ಸೇನೆಯ ಮಾಜಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳ ಉಡುಪಿನ ಬಗ್ಗೆ ಪರಾಮರ್ಶೆ ನಡೆಸುವುದಾಗಿ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದರು. ಗುರುವಾರದ ಕಲಾಪದ ವೇಳೆಗೆ ಮಾರ್ಷಲ್‌ಗಳು ತಿಳಿನೀಲಿ ಬಣ್ಣದ ಸೂಟ್ ಧರಿಸಿದ್ದರೂ ಟೊಪ್ಪಿ ತೊಟ್ಟಿರಲಿಲ್ಲ.

ಸೇನಾ ಸಮವಸ್ತ್ರ ಶೈಲಿ ಇರುವುದಿಲ್ಲ

ಸೇನಾ ಸಮವಸ್ತ್ರ ಶೈಲಿ ಇರುವುದಿಲ್ಲ

ಟೊಪ್ಪಿ ಧರಿಸದೆ ಸಮವಸ್ತ್ರದೊಂದಿಗೆ ಮಾರ್ಷಲ್‌ಗಳು ಹಾಜರಾಗಿರುವುದನ್ನು ಗಮನಿಸಿದ ರಾಜ್ಯಸಭೆಯ ಸದಸ್ಯರೊಬ್ಬರು ಟೊಪ್ಪಿ ಇಲ್ಲದೆ ಮಾರ್ಷಲ್‌ಗಳು ಆಗಮಿಸಿದ್ದಾರೆ ಎಂದರು. 'ನಾನು ಮೊದಲೇ ಹೇಳಿದಂತೆ ಯಾವುದೇ ಸಮವಸ್ತ್ರದ ಶೈಲಿ ಸೇನೆಯನ್ನು ಹೋಲುವಂತೆ ಇರುವುದಿಲ್ಲ. ಇದು ಸರಳ ಸಂಗತಿ. ಇದು ನಡೆಯಬೇಕಾಗಿರುವುದು ಮತ್ತು ಅದರ ಪ್ರಕ್ರಿಯೆ ನಡೆಯುತ್ತಿದೆ' ಎಂದು ವೆಂಕಯ್ಯ ನಾಯ್ಡು ಹೇಳಿದರು. ಸಮವಸ್ತ್ರವು ಮುಂದಿನ ದಿನಗಳಲ್ಲಿ ಬದಲಾಗಲಿದೆ ಎಂಬ ಸುಳಿವು ನೀಡಿದರು.

ಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳುಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳು

ಹಳೆಯ ವಸ್ತ್ರ ಧರಿಸುವುದು ಕಷ್ಟ

ಹಳೆಯ ವಸ್ತ್ರ ಧರಿಸುವುದು ಕಷ್ಟ

ದಶಕಗಳಿಂದಲೂ ಮಾರ್ಷಲ್‌ಗಳು ಚಳಿಗಾಲದ ಅಧಿವೇಶನದಲ್ಲಿ ಬಾಂದ್ಘಾಲಾ ಶೈಲಿಯ ಉಡುಪು ಹಾಗೂ ರುಮಾಲನ್ನು ಮತ್ತು ಬೇಸಿಗೆ ಅಧಿವೇಶನದಲ್ಲಿ ಸಫಾರಿ ದಿರಿಸುಗಳನ್ನು ತೊಡುತ್ತಿದ್ದರು. ಉದ್ದನೆಯ ರುಮಾಲು ಹೆಚ್ಚು ಭಾರವಾಗಿದ್ದು, ಗಂಟೆಗಟ್ಟಲೆ ಅದನ್ನು ತೊಟ್ಟುಕೊಂಡು ನಿಲ್ಲುವುದು ಕಷ್ಟ ಎಂದು ಅನೇಕರು ದೂರಿದ್ದರು. ಈ ಕಾರಣಕ್ಕಾಗಿ ಸಮವಸ್ತ್ರದಲ್ಲಿ ಬದಲಾವಣೆ ತರಲಾಗಿತ್ತು.

ಅಧಿಕಾರಿಗಳೇ ಆಯ್ಕೆ ಮಾಡಿದ್ದು

ಅಧಿಕಾರಿಗಳೇ ಆಯ್ಕೆ ಮಾಡಿದ್ದು

'ರಾಜ್ಯಸಭೆಯ ಅನೇಕ ಹಿರಿಯ ಅಧಿಕಾರಿಗಳು ಹಲವು ಬಾರಿ ಚರ್ಚಿಸಿದ್ದರು. ನಂತರ ನಮಗೆ ವಿವಿಧ ಬಗೆಯ ಉಡುಪುಗಳ ಆಯ್ಕೆ ನೀಡಿದ್ದರು. ಅವುಗಳಲ್ಲಿ ಒಂದು ಸಮವಸ್ತ್ರವನ್ನು ಆಯ್ದುಕೊಂಡಿದ್ದೆವು. ಈ ವಿನ್ಯಾಸವನ್ನು ರಾಜ್ಯಸಭೆಯೊಳಗೇ ನಿರ್ಧರಿಸಲಾಗಿತ್ತು. ಯಾವುದೇ ಬಾಹ್ಯ ಸಂಸ್ಥೆ ಇದರಲ್ಲಿ ಒಳಗೊಂಡಿಲ್ಲ ಎಂದು ರಾಜ್ಯಸಭೆ ಕಾರ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನಾಧಿಕಾರಿಗಳ ಸಮವಸ್ತ್ರಕ್ಕೆ ಹೋಲಿಕೆ

ಸೇನಾಧಿಕಾರಿಗಳ ಸಮವಸ್ತ್ರಕ್ಕೆ ಹೋಲಿಕೆ

ಮಾರ್ಷಲ್‌ಗಳ ಹೊಸ ಸಮವಸ್ತ್ರದೊಂದಿಗೆ ನೀಡಲಾಗಿದ್ದ ಪೀಕ್ ಕ್ಯಾಪ್ ಸೇನಾ ಸಮವಸ್ತ್ರದ ಟೊಪ್ಪಿಯನ್ನೇ ಹೋಲುತ್ತಿತ್ತು. ಈ ರೀತಿಯ ಟೊಪ್ಪಿಯನ್ನು ಹಿರಿಯ ಸೇನಾಧಿಕಾರಿಗಳು ಸೇನಾ ಸಮಾರಂಭಗಳಲ್ಲಿ ಧರಿಸುತ್ತಿದ್ದರು. ಅಷ್ಟೇ ಅಲ್ಲದೆ, ಒಟ್ಟಾರೆ ಉಡುಪು ಕೂಡ ಅದನ್ನೇ ಹೋಲುತ್ತಿತ್ತು. ಹೀಗಾಗಿ ಅದರ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಸೇನೆಯ ಸಮವಸ್ತ್ರವನ್ನು ಹೋಲುವ ಉಡುಪು ಧರಿಸುವುದು ಕಾನೂನಿಗೆ ವಿರುದ್ಧ ಎಂದು ಆಕ್ಷೇಪಿಸಿದ್ದರು.

English summary
Rajya Sabha marshals on Tursday appeared without their new peak caps of military style uniform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X