ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭಾ ಚುನಾವಣೆ ಫಲಿತಾಂಶ: ಸೋಲು-ಗೆಲುವಿನ ವಿವರ

|
Google Oneindia Kannada News

ನವದೆಹಲಿ ಜೂ. 11: ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ 16 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಈ ಗೆಲುವಿಗಾಗಿ ಬಿಜೆಪಿ ಪಕ್ಷವು ಅಡ್ಡ ಮತದಾನ ಸೇರಿದಂತೆ ಚುನಾವಣೆ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಇತ್ತ ರಾಜಸ್ಥಾನ ರಾಜ್ಯದಲ್ಲಿ ಮೂರು ಸ್ಥಾನ ಗಿಟ್ಟಿಸಿಕೊಂಡ ಕಾಂಗ್ರೆಸ್‌ ಪಕ್ಷಕ್ಕೆ ಹರಿಯಾಣದಲ್ಲಿ ಹಿನ್ನೆಡೆಯಾಗಿದೆ.

ಚುನಾವಣೆ ಫಲಿತಾಂಶ ಕುರಿತ 10ಅಂಶಗಳು ಈ ಕೆಳಗಿನಂತಿವೆ:

1. ಸಂಸತ್ತಿನ ಮೇಲ್ಮನೆಯಾದ ಲೋಕಸಭೆಗೆ ಒಟ್ಟು ನಾಲ್ಕು ರಾಜ್ಯದಿಂದ ಬಿಜೆಪಿಯ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್, ಮಾಜಿ ರಾಜ್ಯ ಸಚಿವ ಅನೀಲ್ ಬಾಂಡೆ ಮತ್ತು ಧನಂಜಯ ಮಹಾದೀಕ್ ಅವರು ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ ಸಹ ತಮ್ಮ ನಾಯಕರಾದ ರಣದೀಪ್ ಸುರ್ಜೆವಾಲ ಮತ್ತು ಜಯರಾಮ್ ರಮೇಶ್‌ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಆದರೆ ಮಾಜಿ ಕೇಂದ್ರ ಸಚಿವ ಅಜಯ್ ಮಾಕನ್ ರವನ್ನು ಆರಿಸಿ ತರುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ.

2. ಮಹಾರಾಷ್ಟ್ರದಲ್ಲಿ ವಿರೋಧಪಕ್ಷ ಬಿಜೆಪಿಯ ಕಠಿಣ ಸ್ಪರ್ಧೆ ನಡೆವೆಯು ಶಿವಸೇನೆಯ ಸಂಜಯ್‌ ರಾವುಯ್ ರಾವುತ್, ಶರದ್ ಪವಾರ್ ನೇತೃತ್ವದ ಎನ್‌ ಸಿಪಿ ಪಕ್ಷದ ಪ್ರಫಲ್ ಪಟೇಲ್‌ ಹಾಗೂ ಪ್ರತಾಪ್ ಘರ್ಹಿ ಅವರು ಒಟ್ಟು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಗೆಲುವಿನ ನಗೆ ಬೀರಿದರು.

Rajya Sabha election result: parties won and lost details

3. ಶುಕ್ರವಾರ ಸಂಜೆ ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು "ಚುನಾವಣೆಗಳು ನಡೆಯುವುದು ಕೇವಲ ಹೋರಾಟಕ್ಕಾಗಿ ಅಲ್ಲ, ಗೆಲುವಿಗಾಗಿ. ಜೈ ಮಹರಾಷ್ಟ್ರ" ಎಂದು ಟ್ವಿಟ್ ಮಾಡಿದ್ದಾರೆ.

4, ಹರಿಯಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ತೀವ್ರತೆರನಾದ ಪೈಪೋಟಿ ನಡೆಯಿತು. ಬಿಜೆಪಿ ನಾಯಕ ಕೃಷನ್‌ ಲಾಲ್ ಪಾನ್ ವಾರ್ ಮತ್ತು ಬಿಜೆಪಿ ಬೆಂಬಲಿಸಿದ್ದ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರು ವಿಜಯ ಸಾಧಿಸಿದರು. ಇದು ಹರಿಯಾಣದಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆಗೆ ಕಾರಣವಾಯಿತು. ಇದಕ್ಕೆ ಚುನಾವಣೆಯಲ್ಲಿ ಬಿಜೆಪಿಯು ಕೀಳುಮಟ್ಟದ ರಾಜಕೀಯ ಮಾಡಿದ್ದೆ ಕಾರಣ, ಇದೆಲ್ಲವನ್ನು ನೋಡಿದರೆ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದಾಗಿದೆ ಎಂದು ಕಾಂಗ್ರೆಸ್ ನ ಅಜಯ್ ಮಾಕನ್ ಪ್ರತಿಕ್ರಿಯಿಸಿದರು.

5. ನೆರೆಯ ರಾಜಸ್ತಾನ್ ದಲ್ಲಿನ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಬಿಜೆಪಿಯ ಅಡ್ಡ ಮತದಾನ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕಾಂಗ್ರೆಸ್‌ ಸಫಲವಾಗಿದೆ. ಬಾಕಿ ಒಂದು ಸ್ಥಾನ ಬಿಜೆಪಿ ಪಾಲಾಗಿದೆ.

Rajya Sabha election result: parties won and lost details

6. ರಾಜಸ್ತಾನದಲ್ಲಿ ಕಾಂಗ್ರೆಸ್‌ಗೆ ದೊರೆತ ಬೃಹತ್ ಗೆಲುವಿನ ನಂತರ ಮುಖ್ಯಮಂತ್ರಿ ಅಶೋಕ್‌ ಗೆಹೆಲೋಟ್ ಅವರು 2023ರ ಚುನಾವಣೆಯಲ್ಲಿ ಇದೇ ರೀತಿ ಕಾಂಗ್ರೆಸ್‌ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿಯೂ ಸಹ ಬಿಜೆಪಿ ಸೋಲು ಅನುಭವಿಸಲಿದೆ. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಮಾಧ್ಯಮ ರಂಗದ ಸುಭಾಷ್ ಚಂದ್ರ ಅವರ ರಾಜಕೀಯ ಪ್ರವೇಶದಿಂದ ಕಣದಲ್ಲಿ ಉಭಯ ಪಕ್ಷಗಳ ಚುನಾವಣಾ ಜಗಳಕ್ಕೆ ಕಾರಣವಾಗಿದೆ ಹೇಳಿದ್ದಾರೆ.

7. ಕರ್ನಾಟಕದಲ್ಲಿ ತಾನು ಪ್ರಬಲ ಎಂಬುದನ್ನು ಪುನಃ ಸಾಬೀತುಪಡಿಸಿದಂತೆ ಬಿಜೆಪಿ ನಾಲ್ಕು ರಾಜ್ಯ ಸಭಾ ಸ್ಥಾನಗಳ ಪೈಕಿ ಮೂರರಲ್ಲಿ ವಿಜಯ ಸಾಧಿಸಿದೆ. ಒಂದು ಸ್ಥಾನ ಕಾಂಗ್ರೆಸ್‌ ಮುಡಿಗೇರಿದೆ. ರಾಜ್ಯದಲ್ಲಿನ ನಾಲ್ಕನೇ ಸ್ಥಾನ ಕುತೂಹಲ ಸೃಷ್ಟಿಯಾಗಿತ್ತು, ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿಗೆ ಕಾರಣವೂ ಆಗಿತ್ತು. ಕೊನೆಗೆ ಪ್ರತಿಪಕ್ಷ ನಾಯಕರಿಬ್ಬರ ಅಡ್ಡ ಮತದಾನದಿಂದ ಕುಪೆಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಸೋಲಿಗೆ ತುತ್ತಾಯಿತು.

8. ಮತದಾನದ ಬಳಿಕ ಸಂಜೆ ನಡೆದ ಎಣಿಕೆ ಪ್ರಕ್ರಿಯೆಯ ನಂತರ ಬಿಜೆಪಿಯ ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್‌, ನಟ ಜಗ್ಗೇಶ್‌, ಲೇಹರ್ ಸಿಂಗ್‌ ಸಿರೊಯಾ ಅವರು ತಮ್ಮ ಗೆಲುವಿನ ಕುರಿತು ಸಾರ್ವಜನಿಕವಾಗಿ ಪ್ರಕಟಿಸಿದರು. ಇತ್ತ ಕಾಂಗ್ರೆಸ್ ನ ಜೈರಾಮ್ ರಮೇಶ್ ಒಂದು ಸ್ಥಾನ ಗೆದ್ದು ಬೀಗಿದರು.

9. ಪ್ರಸ್ತುತ ಚುನಾವಣೆಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೈ ನಾಯಕ ಜೈರಾಮ್ ರಮೇಶ್ ಅವರು ರಾಜ್ಯದಿಂದ ಸಂಸತ್ ಮೇಲ್ಮನೆಗೆ ನಾಲ್ಕನೇ ಬಾರಿ ಪುನರಾಯ್ಕೆ ಆದಂತಾಗಿದೆ. ನಟ ಜಗ್ಗೇಶ್‌ ಮತ್ತು ಲೇಹರ್ ಸಿಂಗ್ ಸಿರೊಯಾ ಅವರು ರಾಜ್ಯದಿಂದ ಇದೇ ಮೊದಲ ಬಾರಿಗೆ ಮೇಲ್ಮನೆಗೆ ಆಯ್ಕೆಯಾದ ಸಂತಸದಲ್ಲಿದ್ದಾರೆ.

10. ರಾಜ್ಯಸಭೆಯಲ್ಲಿ ಒಟ್ಟು 15 ರಾಜ್ಯಗಳಿಂದ 57 ಸ್ಥಾನಗಳು ಖಾಲಿ ಇದ್ದವು. ಇದರಲ್ಲಿಗೆ ನಡೆದ ಚುನಾವಣೆಯಲ್ಲಿ 41ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಉಳಿದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

English summary
Rajy sabha election result diclered on friday evenig, bjp won three of the four states, kannada actor jaggesh and lehar singh siroya will be first time elected to upper house from karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X