ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ನೂತನ ಉಪಸಭಾಪತಿಯಾಗಿ ಹರಿವಂಶ ಸಿಂಗ್ ಆಯ್ಕೆ

|
Google Oneindia Kannada News

Recommended Video

ರಾಜ್ಯಸಭೆ ನೂತನ ಉಪಸಭಾಪತಿಯಾಗಿ ಹರಿವಂಶ ನಾರಾಯಣ್ ಸಿಂಗ್ ಆಯ್ಕೆ | Oneindia Kannada

ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.

ಉಪಸಭಾಪತಿಯಾಗಿದ್ದ ಪಿ ಜೆ ಕುರಿಯನ್ ಅವರ ಅಧಿಕಾರಾವಧಿ ಜುಲೈ 1 ರಂದು ಪೂರ್ಣಗೊಂಡಿದ್ದು, ಆ ಸ್ಥಾನಕ್ಕಾಗಿ ಇಂದು ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆದಿತ್ತು.

LIVE: ರಾಜ್ಯಸಭಾ ಉಪಸಭಾಪತಿಯಾಗಿ NDA ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆLIVE: ರಾಜ್ಯಸಭಾ ಉಪಸಭಾಪತಿಯಾಗಿ NDA ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆ

ಎನ್ ಡಿಎ ಯಿಂದ ಹರಿವಂಶ ಸಿಂಗ್, ಯುಪಿಎ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಕೆ ಹರಿಪ್ರಸಾದ್ ಕಣದಲ್ಲಿದ್ದರು.

Rajya Sabha Deputy chairman election: NDA Candidate Harivansh Narayan Singh wins

ಎನ್ ಡಿಎ ಅಭ್ಯರ್ಥಿ ಹರಿವಂಶ ಸಿಂಗ್ 125 ಮತ ಚಲಾವಣೆಯಾದರೆ, ಯುಪಿಎ ಅಭ್ಯರ್ಥಿ ಹರಿಪ್ರಸಾದ್ ಪರ 105 ಮತಗಳು ಬಂದಿವೆ.

ನೂತನ ಉಪಸಭಾಪತಿ ಆಯ್ಕೆಯನ್ನು ಘೋಷಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಹರಿವಂಶ ಸಿಂಗ್ ಅವರನ್ನು ಅಭಿನಂದಿಸಿದರು.

"125 ಮತಗಳನ್ನು ಪಡೆದು ಉಪಸಭಾಪತಿಯಾಗಿ ಆಯ್ಕೆಯಾದ ಹರಿವಂಶ ನಾರಾಯಣ ಸಿಂಗ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮತ್ತು ಸಂಸತ್ತಿನ ಉಭಯ ಸದನಗಳು ಜನತೆಯ ನಂಬಿಕೆಯನ್ನು ಉಳಿಸಿಕೊಂಡಿವೆ" ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆ ಉಪಸಭಾಪತಿ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ(3 ಮತಗಳಿದ್ದವು) ಬಹಿಷ್ಕರಿಸಿದ್ದರೆ, ಕೊನೆಯ ಕ್ಷಣದಲ್ಲಿ ಟಿಆರ್ ಎಸ್ ಪಕ್ಷ ತನ್ನ ಬೆಂಬಲವನ್ನು ಎನ್ ಡಿಎ ಅಭ್ಯರ್ಥಿಗೆ ನೀಡಿತು.

English summary
Rajya Sabha Deputy chairman election: NDA Candidate Harivansh Narayan Singh elected as Rajya Sabha Deputy Chairman with 125 votes, UPA's BK Hariprasad got 105 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X