ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾ ವೆಬ್‌ಸೈಟ್‌ಗೆ ಸಚಿವ ರಾಜನಾಥ್‌ಸಿಂಗ್ ಚಾಲನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಏರೋ ಇಂಡಿಯಾ 2021 ವೆಬ್‌ಸೈಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಚಾಲನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 2021ರ ಫೆಬ್ರವರಿ 3ರಿಂದ 7ರವರೆಗೆ ಏರೋ ಇಂಡಿಯಾ ನಡೆಯಲಿದ್ದು, https://aeroindia.gov.in ವೆಬ್‌ಸೈಟ್‌ಗೆ ಚಾಲನೆ ದೊರೆತಿದೆ.

ವೆಬ್​ಸೈಟ್​ನಲ್ಲಿ ರಕ್ಷಣಾ ಸಚಿವಾಲಯದ ಇತ್ತೀಚಿನ ನೀತಿ, ನಿಯಮಗಳು, ಹೊಸ ಯೋಜನೆಗಳ ವಿವರಗಳು ಲಭ್ಯ ಇವೆ. ವಾಣಿಜ್ಯ ಮತ್ತು ಇತರೆ ಉದ್ದೇಶದ ವಿಸಿಟರ್ಸ್​ ಪ್ರದರ್ಶನ ಟಿಕೆಟ್​ಗಳನ್ನು ಆನ್​ಲೈನ್ ಮೂಲಕವೇ ಖರೀದಿಸಬಹುದಾಗಿದೆ. ಪ್ರದರ್ಶನ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿರುವ ಕೋವಿಡ್ ನಿಯಮಗಳು ಚಾಲ್ತಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.

Aero india

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು 13ನೇ ಆವೃತ್ತಿಯ ಪ್ರದರ್ಶನವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಆನ್​ಲೈನ್ ಸೇವೆಗಳನ್ನೂ ಈ ವೆಬ್​ಸೈಟ್ ಮೂಲಕ ಪಡೆಯಬಹುದಾಗಿದೆ. ಪ್ರದರ್ಶಕರು ಈ ಸೈಟ್​ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲೇ ಮುಂದಿನ 'ಏರೋ ಇಂಡಿಯಾ 2021' ದಿನಾಂಕ ಪ್ರಕಟಬೆಂಗಳೂರಿನಲ್ಲೇ ಮುಂದಿನ 'ಏರೋ ಇಂಡಿಯಾ 2021' ದಿನಾಂಕ ಪ್ರಕಟ

ಪ್ರದರ್ಶನ ಸ್ಥಳ ಮುಂಗಡ ಕಾಯ್ದಿರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನುಸಾರ ಪ್ರದರ್ಶನ ಸ್ಥಳ ವಿತರಣೆಯಾಗಲಿದೆ. ಅಕ್ಟೋಬರ್ 31ರೊಳಗೆ ಮುಂಗಡ ಕಾಯ್ದಿರಿಸುವವರಿಗೆ ವಿನಾಯಿತಿ ಸಿಗಲಿದೆ.

Recommended Video

Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada

1996 ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

English summary
Defence Minister Rajnath Singh on Friday launched the website of Aero India 2021, which will be held between February 3-7, 2021.ಏರೋ ಇಂಡಿಯಾ 2021 ವೆಬ್‌ಸೈಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X