ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್

|
Google Oneindia Kannada News

ನವದೆಹಲಿ, ಮೇ 21: "ನೀವು ಯಾವತ್ತಿಗೂ ನನ್ನ ಹೀರೋ..." ಇದು ಪ್ರಿಯಾಂಕಾ ಗಾಂಧಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರನ್ನು ನೆನೆದು ಭಾವುಕವಾಗಿ ಬರೆದ ಸಾಲು.

ಇಂದು (ಮೇ 21) ರಾಜೀವ್ ಗಾಂಧಿ ಅವರ 28 ನೇ ಪುಣ್ಯತಿಥಿಯ ನಿಮಿತ್ತ ತಮ್ಮ ತಂದೆಯನ್ನು ನೆನೆದ ರಾಹುಲ್ ಗಾಂಧಿ ಅವರೂ ಭಾವುಕರಾಗಿ ಕೆಲವು ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.

1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?

ಜೊತೆಗೆ ಇತ್ತೀಚೆಗಷ್ಟೇ ರಾಜೀವ್ ಗಾಂಧಿ ನಿಧನರಾಗುವ ಸಂದರ್ಭದಲ್ಲಿ ನಂ.1 ಭ್ರಷ್ಟರಾಗಿದ್ದರು ಎಂಬ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಮಾಡಿದ್ದಾರೆ.

ಇಂದು ಟ್ವಿಟ್ಟರ್ ನಲ್ಲಿ #RememberingRajivGandhi ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಆಗಿದ್ದು, ರಾಜೀವ್ ಗಾಂಧಿ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ.

ನೀವೇ ನನ್ನ ಹೀರೋ

ಹರಿವಂಶ ರೈ ಬಚ್ಚನ್ ಅವರ ಅಗ್ನಿಪಥ್ ಎಂಬ ಹಿಂದಿ ಪದ್ಯದೊಂದಿಗೆ ತಮ್ಮ ತಂದೆಯೊಂದಿಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಪ್ರಿಯಾಂಕಾ ಗಾಂಧಿ ವಾದ್ರಾ . ಎಷ್ಟೇ ಅಡೆತಡೆಗಳಿರಿ, ಸಂಕಷ್ಟಗಳಿರಲಿ, ವಿರೋಧವಿರಲಿ, ನೀನೆಂದಿಗೂ ನಿಲ್ಲದಿರು, ಅಗ್ನಿಯ ಪಥದಲ್ಲಿ ಮುಂದೆ ಸಾಗುತ್ತಿರು ಎಂಬರ್ಥದ ಈ ಪದ್ಯವನ್ನು ಅವರು ಟ್ವೀಟ್ ಮಾಡಿ, "ಎಂದಿಗೂ ನೀವೇ ನನ್ನ ಹೀರೋ" ಎಂದಿದ್ದಾರೆ.

Array

ಅವರು ನನಗೆ ಪ್ರೀತಿಸುವುದನ್ನು ಕಲಿಸಿದರು

"ನನ್ನ ತಂದೆ ಒಬ್ಬ ಸಭ್ಯ, ಅಕ್ಕರೆಯ, ಕರುಣಾಮಯಿ ವ್ಯಕ್ತಿ. ಅವರು ನನಗೆ ಪ್ರತಿಯೊಬ್ಬರನ್ನೂ ಗೌರವಿಸುವುದು ಮತ್ತು ಪ್ರೀತಿಸುವುದನ್ನು ಹೇಳಿಕೊಟ್ಟರು. ಯಾರನ್ನೂ ದ್ವೇಷಿಸಬೇಡ, ಬದಲಾಗಿ ಕ್ಷಮಿಸು ಎಂಬುದನ್ನು ಕಲಿಸಿದರು. ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಪುಣ್ಯ ಸ್ಮರಣೆಯಂದು ನಾನು ಅವರನ್ನು ಪ್ರೀತಿ ಮತ್ತು ಹೆಮ್ಮೆಯಿಂದ ಸ್ಮರಿಸುತ್ತೇನೆ"- ರಾಹುಲ್ ಗಾಂಧಿ

ರಾಜೀವ್ ಗಾಂಧಿ ಹತ್ಯೆ ತನಿಖೆ ರಹಸ್ಯ ಬಹಿರಂಗರಾಜೀವ್ ಗಾಂಧಿ ಹತ್ಯೆ ತನಿಖೆ ರಹಸ್ಯ ಬಹಿರಂಗ

ಸ್ಮರಿಸಿದ ಮೋದಿ

"ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ನಮನಗಳು"- ನರೇಂದ್ರ ಮೋದಿ

ಮೇ 21 ರಂದು ರಾಜೀವ್ ಹತ್ಯೆ

ಮೇ 21 ರಂದು ರಾಜೀವ್ ಹತ್ಯೆ

ರಾಜೀವ್ ಗಾಂಧಿ ಅವರು ತಮ್ಮ 47ನೇ ವಯಸ್ಸಿನಲ್ಲಿ(20 ಆಗಸ್ಟ್ 1944- 21 ಮೇ 1991) ತಮಿಳುನಾಡಿನ ಚೆನ್ನೈ ಬಳಿಯ ಶ್ರೀಪೆರುಂಬುದುರ್ ಎಂಬಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಅವರನ್ನು ಬಾಂಬ್ ಸ್ಫೋಟಿಸಿ ಕೊಲ್ಲಲಾಗಿತ್ತು. ಭಾರತದ ಆರನೇ ಪ್ರಧಾನಿಯಾಗಿದ್ದ ಅವರು ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

English summary
Congress president Rahul Gandhi and his sister Priyanka Gandhi Vadra paid tribute to former PM and their father Rajiv Gandhi on his 28th death anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X