ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಜನ್ಮದಿನದಂದು ಪ್ರಿಯಾಂಕಾ ಗಾಂಧಿ ಭಾವುಕ ಟ್ವೀಟ್

|
Google Oneindia Kannada News

ನವದೆಹಲಿ, ಅಗಸ್ಟ್ 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ತಂದೆಯನ್ನು ನೆನೆದು ಭಾವುಕ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ತಾವು ತನ್ನ ತಂದೆಯಿಂದ ಎಲ್ಲರನ್ನೂ ಪ್ರೀತಿಸುವುದನ್ನು ಕಲಿತೆ ಎಂದಿದ್ದಾರೆ.

"ನನ್ನ ತಂದೆಯಿಂದ ನಾನು ಎಲ್ಲ ಜನರ ಕತೆಯನ್ನೂ ಸಂಯಮದಿಂದ ಕೇಳಲುವುದು ಹೇಗೆ, ಮತ್ತು ಅವರೆಲ್ಲರಿಗೂ ನಮ್ಮ ಹೃದಯದಲ್ಲಿ ಜಾಗ ನೀಡುವುದು ಹೇಗೆ ಎಂಬುದನ್ನು ಕಲಿತೆ. ಅದು ಎಷ್ಟು ಕಠಿಣ ಎಂಬುದು ನನಗೆ ಗೊತ್ತು" ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ರಾಜೀವ್ ಗಾಂಧಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

"ಯಾವುದೇ ಕಠಿಣ ಹಾದಿಯೇ ಆಗಿರಲಿ ಸದಾ ನಗುತ್ತಲೇ ಇರುವುದು ಹೇಗೆ, ಮತ್ತು ತಾಳೆಯಿಂದ ಮುನ್ನಡೆಯುವುದು ಹೇಗೆ" ಎಂಬುದನ್ನು ಅವರಿಂದ ನಾನು ಕಲಿತಿದ್ದೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

Rajiv Gandhi Birth Anniversary: Priyankga Gandhis Emotional Note On Father

ಜೊತೆಗೆ ತಂದೆಯ ಬಗೆಗಿನ ಪದ್ಯವೊಂದನ್ನು ಪೋಸ್ಟ್ ಮಾಡಿ, ರಾಜೀವ್ ಗಾಂಧಿ ಜೊತೆಗಿನ ಅಪರೂಪದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ತಮ್ಮ ತಂದೆಯ ಜನ್ಮದಿನ ಸ್ಮರಿಸಿಕೊಂಡು, "ಭಾರತವನ್ನು ಕಟ್ಟಲು ನೆರವಾದ ದೇಶಭಕ್ತ ಮತ್ತು ದೂರದೃಷ್ಟಿಯ ನಾಯಕ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನ ಇಂದು. ನನಗೆ ಅವರು ಯಾರನ್ನೂ ದ್ವೇಷಿಸುವುದನ್ನು ಕಲಿಸಲಿಲ್ಲ. ಎಲ್ಲರನ್ನೂ ಕ್ಷಮಿಸುವ, ಎಲ್ಲರನ್ನೂ ಪ್ರೀತಿಸುವುದನ್ನು ಕಲಿಸಿದ ಪ್ರೀತಿಯ ತಂದೆ ಅವರು" ಎಂದು ಟ್ವೀಟ್ ಮಾಡಿದ್ದಾರೆ.

ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್ ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್

ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟ್ ಮಾಡಿ, "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು" ಎಂದಿದ್ದಾರೆ.

ರಾಜೀವ್ ಗಾಂಧಿ ಅವರ ಜನ್ಮದಿನದ ನಿಮಿತ್ತ ಸಂಸತ್ತಿನಲ್ಲಿಂದು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಸೇರಿದಂತೆ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದರು.

English summary
Congress leader Priyanka Gandhi Vadra remembers her father Ex PM Rajiv Gandhi on his 75th birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X