ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್‌ಗಾಂಧಿ ಹತ್ಯೆ ಪ್ರಕರಣ: ಆರೋಪಿಯ ಪೆರೋಲ್ ವಿಸ್ತರಣೆ

|
Google Oneindia Kannada News

ನವದೆಹಲಿ, ನವೆಂಬರ್ 27: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಆರೋಪಿಗೆ ನೀಡಿದ್ದ ಪೆರೋಲ್ ಅವಧಿಯನ್ನು ಸುಪ್ರೀಂಕೋರ್ಟ್ ವಿಸ್ತರಿಸಿದೆ.

ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಜಿ ಪೆರಾರಿವಾಳನ್ ವೈದ್ಯಕೀಯ ತಪಾಸಣೆಗಾಗಿ ನೀಡಿದ್ದ ಪೆರೋಲ್‌ ಅನ್ನು ವಿಸ್ತರಿಸಲಾಗಿದೆ.

ರಾಜೀವ್ ಹತ್ಯೆ ಕುರಿತಂತೆ ಬೆಚ್ಚಿಬೀಳಿಸುವ ಸತ್ಯಸಂಗತಿ!ರಾಜೀವ್ ಹತ್ಯೆ ಕುರಿತಂತೆ ಬೆಚ್ಚಿಬೀಳಿಸುವ ಸತ್ಯಸಂಗತಿ!

ಶಸ್ತ್ರ ಚಿಕಿತ್ಸೆಗಾಗಿ ಪೆರೋಲ್‌ ಅನ್ನು 90 ದಿನಗಳ ಕಾಲ ವಿಸ್ತರಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು, ಆದರೆ ಅರ್ಜಿದಾರ ಮತ್ತು ತಮಿಳುನಾಡು ಸರ್ಕಾರ ಪರ ವಕೀಲ ವಾದವನ್ನು ಗಮನದಲ್ಲಿಟ್ಟುಕೊಂಡು ಪೆರೋಲ್‌ ಅನ್ನು ಕೇವಲ ಒಂದು ವಾರದ ಮಟ್ಟಿಗೆ ವಿಸ್ತರಿಸಲಾಗಿದೆ.

Rajiv Gandhi Assassination Case: SC Extends By A Week Parole Of Perarivalan Serving Life

ವೈದ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ಪೆರಾರಿವಾಳನ್ ಪೊಲೀಸ್ ಬೆಂಗಾವಲು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು. ಈ ಹಿಂದೆಯೂ ನವೆಂಬರ್ 23ರವರೆಗೆ ಪೆರೋಲ್ ವಿಸ್ತರಿಸಲಾಗಿತ್ತು. ಇದೀಗ ವೈದ್ಯಕೀಯ ಕಾರಣಗಳಿಂದ ಮತ್ತೆ ಒಂದು ವಾರ ವಿಸ್ತರಿಸಲಾಗಿದೆ.

ರಾಜೀವ್ ಗಾಮಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ನೇತೃತ್ವದ ನಿಯೋಗವು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಒತ್ತಾಯಿಸಿದೆ.

ರಾಜ್ಯ ಸಂಪುಟವು 2018ರಲ್ಲಿ ಅಪರಾದಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು. ಅಪರಾಧಿಗಳಾದ ನಳಿನಿ, ಆಕೆಯ ಪತಿ ಮುರುಗನ್, ಸಂತನ್, ಎಜಿ ಪೆರಿವಾಳನ್, ಜಯಕುಮಾರ್, ರಾಬರ್ಟ್, ಪಿ ರವಿಚಂದ್ರನ್ ಅವರ ಬಿಡುಗಡೆಗೆ ತಮಿಳುಣಾಡು ಸರ್ಕಾರ ಒತ್ತಾಯಿಸುತ್ತಿದೆ.

English summary
The Supreme Court Friday extended by one week the parole of AG Perarivalan, serving life term in Rajiv Gandhi assassination case, for medical treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X