ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಗೆ ಯುದ್ಧ ವಿಮಾನ ಉಡುಗೊರೆ ಕೊಟ್ಟ ರಾಜೀವ್ ಚಂದ್ರಶೇಖರ್

|
Google Oneindia Kannada News

ನವದೆಹಲಿ, ಫೆಬ್ರವರಿ 14 : 1947ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಕದನದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡಿದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಡಿಸಿ 3 ಡಕೋಟ ಯುದ್ಧ ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದ್ದಾರೆ.

ದೆಹಲಿಯ ಆಕಾಶ್ ಏರ್ ಫೋರ್ಸ್ ಮೆಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಅವರೊಂದಿಗೆ ಉಡುಗೊರೆ ಒಪ್ಪಂದಕ್ಕ ರಾಜೀವ್ ಚಂದ್ರಶೇಖರ್ ಸಹಿ ಹಾಕಿದರು. ರಾಜೀವ್ ಚಂದ್ರಶೇಖರ್ ಅವರ ತಂದೆ ವಾಯುದಳದಲ್ಲಿ ಏರ್ ಕಮಾಂಡರ್ ಆಗಿದ್ದ ಎಂಕೆ. ಚಂದ್ರಶೇಖರ್ ಅವರು ಖುದ್ದು ಈ ಸಂದರ್ಭದಲ್ಲಿ ಖುದ್ದು ಉಪಸ್ಥಿತರಿದ್ದರು. ಎಂಕೆ. ಅವರು ಡಕೋಟದ ಫೈಲಟ್ ಆಗಿ ಕಾರ್ಯ ನಿರ್ವಹಿಸಿದ್ದರು.

ಡಿಸಿ3 ಡಕೋಟ ವಿಮಾನ ಸಂಖ್ಯೆ ವಿಪಿ ೯೦೫ಗೆ ಪರಶುರಾಮ ಎಂಬ ಹೆಸರಿಡಲಾಗಿದೆ. ಇದೇ ವಿಮಾನ 1947 ರ ಅಕ್ಟೋಬರ್ 27 ರಂದು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಒಂದು ಸಿಖ್ ರೆಜಿಮೆಂಟ್ ಅನ್ನು ಸಾಗಿಸಿತ್ತು.

Rajeev Chandrasekhar Gifts a restored DC 3 Dakota to IAF

ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಡಕೋಟ ನ್ನ ಬಾಲ್ಯದ ಒಂದು ಭಾಗವಾಗಿತ್ತು. ನ್ನ ತಂದೆ ಈ ವಿಮಾನವನ್ನು ದೇಶದೆಲ್ಲೆಡೆ ಹಾರಿಸಿದ್ದರು. ಇಂದು ಡಿಸಿ 3 ಡಕೋಟವನ್ನು ಭಾರತೀಯ ವಾಯುಸೇನೆಗೆ ಉಡುಗೊರೆಯಾಗಿ ನೀಡುವ ಮೂಲಕ ನನ್ನ ತಂದೆಯ ಕನಸು ಸಾಕಾರಗೊಳ್ಲುವಲ್ಲಿ ನಾನು ಸಹಾಯ ಮಾಡಿದಂತಾಗಿದೆ ಎಂದು ಹೇಳಿದರು.

Rajeev Chandrasekhar Gifts a restored DC 3 Dakota to IAF

ವಿಮಾನಕ್ಕೆ ಚಿರಂಜೀವಿ ಸೈನಿಕನಾಗರುವ ವಿಷ್ಣುವಿನ 6 ನೇ ಅವತಾರವಾದ ಪರಶುರಾಮ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು. ಗುಜರಿ ಸೇರಿದ್ದ ವಿಮಾನವನ್ನು ಉಡುಗೊರೆಯಾಗಿ ನೀಡುವ ಮೂಲಕ ಡಕೋಟ ವನ್ನು ಚಲಾಯಿಸಿದ ಎಲ್ಲ ವಾಯುಸೇನೆ ಸೈನಿಕರು ಮತ್ತವರ ಕುಟುಂಬದವರಿಗೆ ಸಮರ್ಪಿಸುತ್ತೇನೆ ಎಂದು ನಿವೃತ್ತ ಏರ್ ಕಮಾಂಡರ್ ಎಂಕೆ. ಚಂದ್ರಶೇಖರ್ ಹೇಳಿದರು.

English summary
DC3 Dakota -The Aircraft that saved Jammu Kashmir in 1947 and in countless other mission is back in the Indian Airforce. Rajyasabha MP Rajeev Chandrasekhar gifts a restored Dakota to Chief of Air staff in signing ceremony Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X