ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆದ ವಸುಂಧರಾ ರಾಜೇ

By Vanitha
|
Google Oneindia Kannada News

ನವದೆಹಲಿ, ಜೂ, 27 : ನೀತಿ ಆಯೋಗದ ಚರ್ಚೆಯಲ್ಲಿ ಪಾಲ್ಗೊಳ್ಳಲು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ದೆಹಲಿ ಪಯಣ ಬೆಳೆಸಿ ಕುತೂಹಲ ಹುಟ್ಟಿಸಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಭೆಯ ಚರ್ಚೆಯಲ್ಲಿ ಪಾಲ್ಗೊಳ್ಳದೆ ವಾಪಸ್ ಮರಳಿದ್ದಾರೆ.

ಲಲಿತ್ ಮೋದಿ ವಿವಾದದಲ್ಲಿದ್ದ ರಾಜೇ ಅವರು ಜೂ. 27 ರಿಂದ ಜು. 2 ರವರೆಗೆ ಲಂಡನ್ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ನೀತಿ ಆಯೋಗ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಮ್ಮ ನಿರ್ಧಾರ ಬದಲಿಸಿದ್ದರು. ಬೆಳಿಗ್ಗೆ 9.30 ರವೇಳೆಗೆ ದೆಹಲಿ ತಲುಪಿದ್ದು, ಅಲ್ಲಿ ಕೇವಲ ೪ ಗಂಟೆಗಳ ಕಾಲ ತಮ್ಮ ಸಮಯ ಕಳೆದಿದ್ದಾರೆ. [ದೆಹಲಿ ಪ್ರಯಾಣದಿಂದ ಕುತೂಹಲ ಹುಟ್ಟಿಸಿದ ರಾಜೇ]

Raje leaves Delhi without meeting BJP top brass

ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಬಿಜೆಪಿ ಮುಖಂಡರು ಅವರ ವಾದವನ್ನು ಆಲಿಸಿ ಅಹವಾಲನ್ನು ಸ್ವೀಕರಿಸಿದ್ದಾರೆ. ಸಂಪೂರ್ಣ ಬೆಂಬಲ ಸೂಚಿಸಿರುವ ಬಿಜೆಪಿ ವರಿಷ್ಟರು, ರಾಜ್ಯದಲ್ಲಿ ಬಹಳ ಕಾಲ ಆಡಳಿತ ನಡೆಸಿದ ಪ್ರಸಿದ್ಧ ನಾಯಕರುಗಳ ಪಟ್ಟಿಗೆ ಅವರನ್ನು ಸೇರಿಸಿದ್ದಾರೆ.

ನೀತಿ ಆಯೋಗ ಸಭೆಯಲ್ಲಿ ಉಪಮುಖ್ಯಮಂತ್ರಿಗಳ ಜೊತೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವರಲ್ಲದೆ ಉತ್ತರ ಪ್ರದೇಶ, ಕೇರಳ, ನಾಗಲ್ಯಾಂಡ್ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

English summary
Rajastan chief minister vasundhara raje reached at 9.30 a.m. She attend meeting NITI aayoga meeting. She is spending only 4 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X