ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ವೈಪರೀತ್ಯ: ನವದೆಹಲಿಯಲ್ಲಿ ಭೂ ಸ್ಪರ್ಶ ಮಾಡದ ವಿಮಾನಗಳು

|
Google Oneindia Kannada News

ನವದೆಹಲಿ, ಜೂನ್ 9 : ಇಲ್ಲಿ ಸುರಿದ ಮಳೆಯಿಂದಾಗಿ ಹಲವು ಮಂದಿಗೆ ಸಮಸ್ಯೆಯಾಯಿತು. ಶನಿವಾರ ಸಂಜೆ ಮೋಡ ದಟ್ಟೈಸಿತು. ಧೂಳಿನಿಂದ ಕೂಡಿದಂಥ ಮಳೆಯ ಸಿಂಚನ. ದೆಹಲಿ ತಲುಪಬೇಕಿದ್ದ ಎಲ್ಲ ವಿಮಾನಗಳನ್ನು ಒಂದೋ ಬೇರೆ ಕಡೆಗೆ ತೆರಳುವಂತೆ ಸೂಚಿಸಲಾಯಿತು ಅಥವಾ ವಾಪಸ್ ಕಳುಹಿಸಲಾಯಿತು.

ಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನ

ಗಂಟೆಗೆ ಎಪ್ಪತ್ತೆರಡು ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಗಾಳಿಗೆ ಐನೂರು ಮೀಟರ್ ನಷ್ಟು ದೂರದಲ್ಲಿದ್ದಂಥ ವಸ್ತುಗಳು ಕೂಡ ಕಾಣದಂಥಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು. ಹವಾಮಾನ ಇಲಾಖೆಯು ಶುಕ್ರವಾರವೇ ಈ ಬಗ್ಗೆ ಸೂಚನೆಯನ್ನು ನೀಡಿತ್ತು. ಶನಿವಾರ ಸಂಜೆಯ ಹೊತ್ತಿಗೆ ಎಪ್ಪತ್ತರಿಂದ ಎಂಬತ್ತು ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತದೆ ಹಾಗೂ ಜತೆಗೆ ಅಲ್ಪ ಪ್ರಮಾಣದ ಮಳೆಯಾಗುತ್ತದೆ ಎಂದು ತಿಳಿಸಿತ್ತು.

Flight

ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಗರಿಷ್ಠ 40.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗುತ್ತದೆ. ಕನಿಷ್ಠ 32 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಭಾನುವಾರ ಕೂಡ ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಲಾಗಿದ್ದು, ಮೂವತ್ತೊಂದರಿಂದ ಮೂವತ್ತೊಂಬತ್ತು ಡಿಗ್ರಿ ಮಧ್ಯೆ ಉಷ್ಣಾಂಶ ಇರಲಿದೆ ಎಂದು ತಿಳಿಸಲಾಗಿದೆ.

English summary
Saturday evening brought respite for many in the national capital with rainfall. Weatherman had predicted rain and thunderstorm. As dust storm and rain hit the capital, all flights to Delhi have been held back or diverted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X