• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಮಳೆ: 11 ಮಂದಿಯ ಪೈಕಿ ರಕ್ಷಣಾ ಸಚಿವರ ವಿಮಾನ ಮಾರ್ಗ ಬದಲು: ವರದಿ

|
Google Oneindia Kannada News

ನವದೆಹಲಿ ಮೇ 21: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಶುಕ್ರವಾರ ಸಂಜೆ ಮಳೆಯಾಗಿದ್ದು ದೆಹಲಿ ವಿಮಾನ ನಿಲ್ದಾಣದಿಂದ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಮಾರ್ಗ ಬದಲಿದ ಕನಿಷ್ಠ 11 ವಿಮಾನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನವೂ ಸೇರಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಕೆಲವು ವಿಮಾನಗಳನ್ನು ಲಕ್ನೋ ಮತ್ತು ಜೈಪುರಕ್ಕೆ ತಿರುಗಿಸಲಾಯಿತು ಮತ್ತು ದೆಹಲಿಯಲ್ಲಿ ಹಾರಾಟದ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ.

ನವೀಕರಿಸಿದ ವಿಮಾನ ಮಾಹಿತಿಗಾಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. "ಹವಾಮಾನ ಬದಲಾವಣೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಪರಿಣಾಮ ಬೀರುತ್ತವೆ. ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ವಿನಂತಿಸಲಾಗಿದೆ" ಎಂದು ದೆಹಲಿ ವಿಮಾನ ನಿಲ್ದಾಣವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

ಮಧ್ಯಾಹ್ನ ಆರಂಭವಾದ ಮಳೆ ನಂತರ ಸಂಜೆಯ ವೇಳೆಗೆ ವೇಗ ಪಡೆದುಕೊಂಡಿದ್ದು, ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ತಾಪಮಾನ ಕಡಿಮೆಯಾಗಿದೆ. ಒಣ ಮತ್ತು ಧೂಳಿನ ರಸ್ತೆಗಳಲ್ಲಿ ಮಳೆಯಿಂದಾಗಿ ಹೈರಾಣಗಿದ್ದ ಅನೇಕ ದೆಹಲಿ ನಿವಾಸಿಗಳಿಗೆ ಮಳೆಯಿಂದಾಗಿ ಕೊಂಚ ನೆಮ್ಮದಿ ತಂದಿದೆ. ಜೊತೆಗೆ ಶನಿವಾರ ಗುಡುಗು ಸಹಿತ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾಗಶಃ ಮೋಡ ಕವಿದ ವಾತಾವರಣ ಮತ್ತು ಮಳೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ತಾಪಮಾನವನ್ನು ಯಂತ್ರಣದಲ್ಲಿಟ್ಟುಕೊಳ್ಳುವ ಸಾಧ್ಯತೆಯಿದೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಚಂಡಮಾರುತದ ಸಂಚಾರ ಶನಿವಾರದಂದು ಮಧ್ಯಂತರ ಗುಡುಗು ಸಹಿತ ಮಳೆಗೆ ಕಾರಣವಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಶ್ಚಿಮಾತ್ಯ ಹವಮಾನ ಬದಲಾವಣೆ ಭಾನುವಾರದಿಂದ ವಾಯುವ್ಯ ಭಾರತದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಗೆ ಕಾರಣವಾಗುತ್ತದೆ. ಇದರಿಂದಾಗಿ ಮಂಗಳವಾರದ ವೇಳೆಗೆ ದೆಹಲಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.

New Delhi rain: Defence Ministers Flight Among 11 Diverted: Report

"ಮುಂದಿನ ದಿನಗಳಲ್ಲಿ ಪಾಶ್ಚಿಮಾತ್ಯದಲ್ಲಿ ಹವಮಾನ ಬದಲಾವಣೆಯಿಂದಾಗಿ ತಾಪಮಾನದಿಂದ ಕೊಂಚ ವಿರಾಮ ಸಿಗುವ ಸಾಧ್ಯತೆ ಇದೆ. ಯಾವುದೇ ಶಾಖದ ಅಲೆಯು ಒಂದು ವಾರದವರೆಗೆ ಇರಲು ಸಾಧ್ಯತೆಯಿಲ್ಲ" ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ಸ್ಕೈಮೆಟ್‌ನ ಉಪಾಧ್ಯಕ್ಷ (ಹವಾಮಾನ ಬದಲಾವಣೆ) ಮಹೇಶ್ ಪಲಾವತ್ ತಿಳಿಸಿದ್ದಾರೆ.

   RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada

   English summary
   Defence Minister Rajnath Singh's flight is among at least 11 flights that were diverted from the Delhi airport on Friday evening after heavy rain and thunderstorm in the national capital and surrounding areas.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X