ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದಲ್ಲಿ ಮತ್ತೆ ಮಳೆ, ಗಾಳಿ ಅಬ್ಬರ ಸಾಧ್ಯತೆ

By Nayana
|
Google Oneindia Kannada News

ನವದೆಹಲಿ, ಮೇ 13: ಮುಂದಿನ ಎರಡು ದಿನಗಳ ಕಾಲ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿರುಗಾಳಿ, ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾರದ ಹಿಂದಷ್ಟೇ ಧೂಳು ಸುನಾಮಿಯಿಂದ ತತ್ತರಿಸಿದ್ದ ರಾಜಸ್ತಾನ ಮತ್ತೊಮ್ಮೆ ಧೂಳಿನ ಬಿರುಗಾಳಿ ಸಿಲುಕುವ ಅಪಾಯ ಇದೆ ಎಂದು ಎಚ್ಚರಿಸಲಾಗಿದೆ.

ಬಿರುಗಾಳಿಯ ಭೀಕರತೆಯಿಂದ ಹೊರ ಬಾರದ ಉತ್ತರ ಭಾರತ ಬಿರುಗಾಳಿಯ ಭೀಕರತೆಯಿಂದ ಹೊರ ಬಾರದ ಉತ್ತರ ಭಾರತ

ಮೆಡಿಟರೇನಿಯನ್ ಸಮುದ್ರದ ಪಶ್ಚಿಮದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕಣಿವೆ ರಾಜ್ಯದಲ್ಲಿ ಭಾರಿ ಮಳೆ ಸುರಿಯಲಿದೆ. ತದನಂತರ ಅದರ ಮುಂದುವರೆದ ಪರಿಣಾಮ ಇತರ ರಾಜ್ಯಗಳನ್ನು ಆವರಿಸಲಿದೆ. ಗಂಟೆಗೆ 50ರಿಂದ 70ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.

Rain and hasty wind again in North India

ಭಾರಿ ಮಳೆ ಸಾಧ್ಯತೆ: ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್. ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾಖಂಡ್‌ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬಿರುಗಾಳಿ ಸಹಿತ ಮಳೆ ಸಾಧ್ಯತೆ: ಪಂಜಾಬ್‌, ಹರಿಯಾಣ, ಛತ್ತೀಸ್‌ಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ವಿಧರ್ಬ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರಾವಳಿ, ಕನಾಟಕ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ ಮತ್ತು ಕೇರಳದಲ್ಲಿ ಬಿರುಗಾಳಿಯಿಂದ ಕೂಡಿದ ಮಳೆ ಸಾಧ್ಯತೆ ಇದೆ.

English summary
Indian Meteorological Department has forecasted that there is again hasty wind and heavy rain northern part of India for the next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X