ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಸಮರಕ್ಕೆ ರೈಲ್ವೆ ಸಾಥ್, 4800 ಪಿಪಿಇ ಕಿಟ್ ತಯಾರಿಸಲು ಸಜ್ಜು

|
Google Oneindia Kannada News

ದೆಹಲಿ, ಏಪ್ರಿಲ್ 13: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಆರೋಗ್ಯ ಇಲಾಖೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಇದೀಗ, ಆರೋಗ್ಯ ಇಲಾಖೆಗೆ ಭಾರತೀಯ ರೈಲ್ವೆ ಜೊತೆಯಾಗಿ ನಿಂತಿದೆ.

ಕೊವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಪಿಪಿಇ (PPE-Personal Protective Equipment) ಕಿಟ್ ತಯಾರಿಸಲು ರೈಲ್ವೆ ಮುಂದಾಗಿದ್ದು, ಡಿಆರ್‌ಡಿಒ (Defence Research and Development Organisation) ಸಂಸ್ಥೆಯಿಂದ ಅನುಮತಿ ಕೂಡ ಪಡೆದುಕೊಂಡಿದೆ.

ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸ್ಫೋಟಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸ್ಫೋಟ

ಐಸೋಲೇಶನ್ ವಾರ್ಡ್ ಮತ್ತು ಐಸಿಯು ಘಟಕದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಉಪಯುಕ್ತವಾಗಲಿದ್ದು, ಸುಮಾರು 4800 ಪಿಪಿಇ ಕಿಟ್ ತಯಾರಿಸಲು ರೈಲ್ವೆ ಸಜ್ಜಾಗಿದೆ.

Railway To Make 4800 Personal Protective Equipment For Railway Doctors

ಈಗಾಗಲೇ ಉತ್ತರ ರೈಲ್ವೆ ಪಿಪಿಇ ಕಿಟ್ ತಯಾರಿಸುವ ಕೆಲಸ ಆರಂಭಿಸಿದೆ. ಕೇಂದ್ರ ರೈಲ್ವೆ ಮಂಡಳಿ ಸೂಚನೆಯ ಮೆರೆಗೆ ಪಂಜಾಬ್‌ನಲ್ಲಿ ತಯಾರಿಕೆ ಕೆಲಸ ಪ್ರಾರಂಭವಾಗಿದೆ. ಇದೀಗ, ದಕ್ಷಿಣ ರೈಲ್ವೆ ಕೂಡ ಪಿಪಿಇ ಕಿಟ್ ತಯಾರಿಕೆಗೆ ಮುಂದಾಗಿದೆ.

ಬಳ್ಳಾರಿ ಜಿಲ್ಲೆ ಕೊರೊನಾ ವಾರಿಯರ್ಸ್ ಗೆ ಮಾಸ್ಕ್, ಸ್ಯಾನಿಟೈಸರ್ ಕೊರತೆಬಳ್ಳಾರಿ ಜಿಲ್ಲೆ ಕೊರೊನಾ ವಾರಿಯರ್ಸ್ ಗೆ ಮಾಸ್ಕ್, ಸ್ಯಾನಿಟೈಸರ್ ಕೊರತೆ

ವಿಡಿಯೋ ಮೂಲಕ ಸಿಬ್ಬಂದಿಗೆ ಕಿಟ್ ತಯಾರಿಕೆ ಕುರಿತು ತರಬೇತಿ ನೀಡಲಾಗುವುದು. ಪಿಪಿಇ ಕಿಟ್ ತಯಾರಿಕೆ ಸಾಮಾಗ್ರಿಗಳು ಪಂಜಾಬ್‌ನಿಂದ ಹುಬ್ಬಳ್ಳಿ ಮತ್ತು ಮೈಸೂರಿಗೆ ಬರಲಿದೆ. ವಸ್ತುಗಳ ತಲುಪಿದ ಬಳಿಕ ಈ ಎರಡು ಕಾರ್ಯಗಾರದಲ್ಲಿ ಕಿಟ್ ತಯಾರಿಕೆ ಆರಂಭವಾಗುತ್ತೆ.

English summary
South Western Railway to make 4800 Personal Protective Equipment for Railway doctors and paramedics to fight against COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X