ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ : ಡಿವಿಎಸ್ ಸಾಧನೆ ಫೇಸ್ಬುಕ್, ಟ್ವಿಟ್ಟರ್ ನಲ್ಲೂ ಲೈವ್

By Mahesh
|
Google Oneindia Kannada News

ನವದೆಹಲಿ, ಜು.8: ಕನ್ನಡಿಗ ಡಿವಿ ಸದಾನಂದ ಗೌಡ ಅವರು ಕೇಂದ ರೈಲ್ವೆ ಸಚಿವರಾಗಿ ಮಂಗಳವಾರ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರಪ್ರಥಮ ಬಾರಿಗೆ ರೈಲ್ವೆ ಇಲಾಖೆ ಸಾಮಾಜಿಕ ಜಾಲ ತಾಣಗಳ ಮೂಲಕ ಬಜೆಟ್ ಅಪ್ದೇಟ್ ನೀಡಲು ಮುಂದಾಗಿದೆ.

ಸದಾನಂದ ಗೌಡ ಅವರು ಬೆಳಗ್ಗೆ 9.30ರ ಸುಮಾರಿಗೆ ಹೊರಡುವ ಮುನ್ನ ಮಾತನಾಡುತ್ತಾ 'ಆಧುನೀಕತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಈ ಬಾರಿ ಸಾರ್ವಜನಿಕರು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಅಭಿವೃದ್ದಿ ಪಡಿಸಲು ಸರ್ಕಾರ​ ಚಿಂತಿಸಿದೆ ಎಂದರು. [ರೈಲ್ವೆ ಬಜೆಟ್ ಲೈವ್ : ಸದಾನಂದ ಗೌಡರ ಚೊಚ್ಚಲ ಬಜೆಟ್]

ರೇಲ್ವೆ ಬಜೆಟ್ ಮಂಡನೆಯಾದ ಕೂಡಲೇ ಫೇಸ್ಬುಕ್ ಮತ್ತು ಟ್ವಿಟ್ಟರ್(@RailMinIndia) ನಲ್ಲಿ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ಇಲಾಖೆ ಹಾಕಲಿದೆ. ಜನರಿಗೆ ಎಲ್ಲ ಮಾಹಿತಿ ಕೂಡಲೇ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸದಾನಂದ ಗೌಡ ತಿಳಿಸಿದ್ದಾರೆ.[ಡಿವಿಎಸ್ ರಿಂದ ಏನು ನಿರೀಕ್ಷೆಯಿದೆ?]

Railway Minister Sadananda Gowda goes social with maiden budget

ಪ್ರಧಾನಿ ಮೋದಿಯವರ ಆಶಯದಂತೆ ಬಜೆ ಟ್ ನ ಸಂಪೂರ್ಣ ವಿವರಗಳು ಜನ ಸಾಮಾನ್ಯರ ಕೈ ತಲುಪಲು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಚಿವ ಸದಾನಂದ ಗೌಡ ಅವರು ಕೂಡಾ ತಮ್ಮ ಟ್ವಿಟ್ಟರ್ ಐಡಿ (@DVSBJP) ಮೂಲಕ ಅಪ್ದೇಟ್ ನೀಡುತ್ತಿದ್ದಾರೆ. ಅದಲ್ಲದೆ 022-4501 5555 ಎಂಬ ಸಂಖ್ಯೆಗೆ ಕರೆ ಮಾಡಿ ಬಜೆಟ್ ಬಗ್ಗೆ ತಿಳಿದುಕೊಳ್ಳಬಹುದು. [ರೈಲ್ವೆ ಬಜೆಟ್ : ಸದಾನಂದ ಗೌಡರ ಚೊಚ್ಚಲ ಬಜೆಟ್]

ಒನ್ ಇಂಡಿಯಾ ಸಂಸ್ಥೆ ಕೂಡಾ ತನ್ನ ಟ್ವಿಟ್ಟರ್ ಐಡಿ (@OneindiaKannada) ಹಾಗೂ ಫೇಸ್ ಬುಕ್ ಪುಟದಲ್ಲಿ ಕಾಲ ಕಾಲಕ್ಕೆ ಅಪ್ಡೇಟ್ ನೀಡಲಾಗುತ್ತದೆ ತಪ್ಪದೇ ವೀಕ್ಷಿಸಿ..ರೈಲ್ವೆ ಬಜೆಟ್ ನ ಲೈವ್ ಅಪ್ದೇಟ್ ಪುಟ ಇನ್ನೇನು ಬರಲಿದೆ ನಿರೀಕ್ಷಿಸಿ [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ರೈಲ್ವೆ ನಿಲ್ದಾಣಗಳ ಆಧುನೀಕರಣ, ಸಾವಿರಾರು ಹೊಸ ರೈಲ್ವೆ ಬೋಗಿಗಳ ನಿರ್ಮಾಣ, ಸ್ವಚ್ಛತೆ, ಸುರಕ್ಷ್ತತೆ, ರೈಲು ಮತ್ತು ರೈಲ್ವೇ ಹಳಿಗಳ ದೋಷ ಪತ್ತೆಗೆ ಎಕ್ಸ್ ರೇ ಸಿಸ್ಟಮ್​ ಅಳವಡಿಸಲು ಚಿಂತನೆ, ಮಹಿಳಾ ದೌರ್ಜನ್ಯ, ಕ್ರೈಂಗಳನ್ನು ತಡೆಯಲು ಕ್ರಮ ಮುಂತಾದವು ಚೊಚ್ಚಲ ಬಜೆಟ್ ನ ಆದ್ಯತೆಯಾಗಲಿದೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.

English summary
Rail Budget 2014: Railway Minister Sadananda Gowda goes social with maiden budget. For the first time Railways minister is going to post live updates of his budget on Facebook and Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X