ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಮಾಜಿ ಅಧಿಕಾರಿ ನಾಗೇಶ್ವರ ರಾವ್ ಆಸ್ತಿಗಳ ಮೇಲೆ ಪೊಲೀಸರ ದಾಳಿ

|
Google Oneindia Kannada News

ನವದೆಹಲಿ, ಫೆಬ್ರವರಿ 9: ಇತ್ತೀಚೆಗಷ್ಟೇ ಸಿಬಿಐ ಮಧ್ಯಂತರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಎಂ. ನಾಗೇಶ್ವರ ರಾವ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಕೋಲ್ಕತಾ ಪೊಲೀಸರು ದಾಳಿ ನಡೆಸಿದ್ದಾರೆ.

ನಿಮ್ಮನ್ನು ದೇವರೇ ಕಾಪಾಡಬೇಕು: ಸಿಬಿಐ ಮಾಜಿ ಅಧಿಕಾರಿ ಮೇಲೆ ಸುಪ್ರೀಂಕೋರ್ಟ್ ಸಿಡಿಮಿಡಿನಿಮ್ಮನ್ನು ದೇವರೇ ಕಾಪಾಡಬೇಕು: ಸಿಬಿಐ ಮಾಜಿ ಅಧಿಕಾರಿ ಮೇಲೆ ಸುಪ್ರೀಂಕೋರ್ಟ್ ಸಿಡಿಮಿಡಿ

ಕೋಲ್ಕತಾ ಪೊಲೀಸರು ಶುಕ್ರವಾರ ಎರಡು ಕಡೆ ದಾಳಿ ನಡೆಸಿದ್ದು, ಅದರಲ್ಲಿ ಸಾಲ್ಟ್‌ ಲೇಕ್‌ನಲ್ಲಿರುವ ನಾಗೇಶ್ವರ ರಾವ್ ಅವರ ಪತ್ನಿಯ ಆಂಜೆಲಿನಾ ಮರ್ಚೆಂಟೈಲ್ ಪ್ರೈ ಲಿ. ಸೇರಿದೆ.

ಸಿಬಿಐ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ ಸಿಬಿಐ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ

ಪ್ರಾಥಮಿಕ ವರದಿಗಳ ಪ್ರಕಾರ ಎಎಂಪಿಎಲ್ ಕಂಪೆನಿ ರಾವ್ ಅವರ ಪತ್ನಿ ಮನ್ನೆಮ್ ಸಂಧ್ಯಾ ಅವರಿಗೆ ಸೇರಿದ್ದಾಗಿದೆ. ಆದರೆ, ಈ ವರದಿಯನ್ನು ನಾಗೇಶ್ವರ ರಾವ್ ತಳ್ಳಿಹಾಕಿದ್ದಾರೆ. ಈ ಸಂಸ್ಥೆ ತಮ್ಮ ಕುಟುಂಬದ ಸದಸ್ಯರಿಗೆ ಸೇರಿದ್ದಲ್ಲ. ಈ ಬಗ್ಗೆ 2018ರ ಅಕ್ಟೋಬರ್ 30ರಂದು ಪತ್ರಿಕಾ ಹೇಳಿಕೆಯನ್ನು ಸಹ ನೀಡಲಾಗಿತ್ತು ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

Raids carried out at properties linked to former CBI chief Nageshwar Rao

ಅಲ್ಲದೆ, ಸರ್ಕಾರಕ್ಕೆ ನನ್ನ ವಾರ್ಷಿಕ ಆಸ್ತಿಪಾಸ್ತಿ ವಿವರಗಳ ಸಲ್ಲಿಕೆ ವೇಳೆ ನನ್ನ ಕುಟುಂಬ ಮತ್ತು ನನ್ನ ಎಲ್ಲ ಆಸ್ತಿ ಮಾಹಿತಿಗಳನ್ನು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

English summary
Kolkata police conducted raids at two different locations, reported ANI. One of the locations is allegedly Nageshwar Rao's wife's company Angelina Mercantile Pvt Ltd at Salt Lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X