• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಮತ್ತೆ ಕಣ್ಮಿಟುಕಿಸಿದ ರಾಹುಲ್, 'ನೆರವು' ಬೇಡಿದ ಬಿಜೆಪಿ!

|
   ಮತ್ತೆ ಕಣ್ಮಿಟುಕಿಸಿದ ರಾಹುಲ್, 'ನೆರವು' ಬೇಡಿದ ಬಿಜೆಪಿ! | Oneindia Kannada

   ನವದೆಹಲಿ, ಜನವರಿ 05: ಮುಂಗಾರು ಅಧಿವೇಶನದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿ ತಬ್ಬಿಬ್ಬು ಮಾಡಿ, ನಂತರ ಕಣ್ಮಿಟುಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚಳಿಗಾಲದ ಅಧಿವೇಶನದಲ್ಲೂ ಕಣ್ಮಿಟುಕಿಸಿ ಸುದ್ದಿಯಾಗಿದ್ದಾರೆ!

   ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?

   ರಫೇಲ್ ಡಿಲ್ ಕುರಿತಂತೆ ಎಐಎಡಿಎಂಕೆ ಸಂಸದ ಮತ್ತು ಲೋಕಸಭೆಯ ಉಪ ಸ್ಪೋಕರ್ ಎಂ ತಂಬಿ ದುರೈ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮಾತುಕೇಳಿ ಉದ್ವೇಗಕ್ಕೊಳಗಾದ ರಾಹುಲ್ ಗಾಂಧಿ ಟೇಬಲ್ ತಟ್ಟಿ, ನಂತರ ತಮ್ಮ ಪಕ್ಕದಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಣ್ಮಿಟುಕಿಸಿದರು.

   ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಅಮಿತ್ ಮಾಳವೀಯ, 'ರಾಹುಲ್ ಗಾಂಧಿ ಮತ್ತೆ ಕಣ್ಮಿಟುಕಿಸಿದ್ದಾರೆ. ಅದೂ ರಫೇಲ್ ಡಿಲ್ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ! ಅವರಿಗೆ ನಿಜಕ್ಕೂ ನೆರವಿನ ಅಗತ್ಯವಿದೆ ಎನ್ನಿಸುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

   ರಾಹುಲ್ ಗಾಂಧಿ ಮತ್ತೊಮ್ಮೆ ಕಣ್ಮಿಟುಕಿಸಿದ ವಿಡಿಯೋ ಸಹ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

   2018 ರ ಜುಲೈ ತಿಂಗಳಿನಲ್ಲಿ ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ಮೋದಿ ಅವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ, ನಂತರ ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಕಣ್ಮಿಟುಕಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

   ಸಂಸತ್ತನ್ನು ಏನೆಂದುಕೊಂಡಿದ್ದಾರೆ?

   ಜನರು ಸಾರ್ವಜನಿಕ ಸ್ಥಳಗಳಲ್ಲಿ ಮತ್ತೊಬ್ಬರನ್ನು ರೇಗಿಸಲು, ಅಣಕಿಸಲು ಕಣ್ಮಿಟುಕಿಸುತ್ತಾರೆ. ಬಹುಷ ರಾಹುಲ್ ಗಾಂಧಿ ಅವರೂ ಸಂಸತ್ತನ್ನು ಸಾರ್ವಜನಿಕ ಕಾರ್ಯಕ್ರಮ ನಡೆವ ಸ್ಥಳ ಎಂದುಕೊಂಡಿರಬೇಕು. ಅದಕ್ಕೆಂದೇ ಈ ರೀತಿ ಕಣ್ಮಿಟುಕಿಸಿ ವಾತಾವರಣ ಹಾಳುಗೆಡವುತ್ತಿದ್ದಾರೆ ಎಂದಿದ್ದಾರೆ ವಕೀಲ್ ಭಾರತಿ ಎಂಬುವವರು.

   ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು

   ಇನ್ನೇನು ನಿರೀಕ್ಷಿಸಲು ಸಾಧ್ಯ?

   ಉಪಯೋಗವಿಲ್ಲದ ವಿಷಯ. ಇವರಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಆರತಿ ಗುಪ್ತಾ.

   ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!

   ಇದು ಸಹಜ

   ಅವರನ್ನು ಬಿಟ್ಟುಬಿಡಿ. ಐವತ್ತು ವರ್ಷದ ಆಸುಪಾಸಿನಲ್ಲಿ ಬ್ರಹ್ಮಾಚಾರಿಯಾಗಿದ್ದರೆ ಹೀಗಾಗುವುದು ಸಹಜ ಎಂದು ಕಿಚಾಯಿಸಿದ್ದಾರೆ ವೇಣು ಗೋಪಾಲ್.

   ಯಾರಿಗೆ ಸೀರಿಯಸ್ನೆಸ್ ಇಲ್ಲ?

   ಲೋಕಸಭೆಯಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದರೂ ಸಂಸತ್ತಿಗೆ ಹಾಜರಾಗದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿರಿಯಸ್ನೆಸ್ ಇದೆಯಾ? ಅವರಿಗೇ ಗಾಂಭೀರ್ಯ ಇಲ್ಲದ ಮೇಲೆ ವಿರೋಧ ಪಕ್ಷದವರಿಂದ ಸಿರಿಯಸ್ ನೆಸ್ ನಿರೀಕ್ಷಿಸುವುದು ಎಷ್ಟು ಸರಿ ಎಂದಿದ್ದಾರೆ ಪವನ್ ಪೀಟರ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Months after hogging headlines for his wink at Parliament, Congress President Rahul Gandhi winked again in the Lok Sabha during a heated debate on Rafale deal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more