• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಬಂಗಲೆ ಕಥೆ ಏನು? ಸಂಸದರಿಗೆ ಬಂಗಲೆ ಹಂಚಿಕೆ ಹೇಗೆ?

|

ನವದೆಹಲಿ, ಜೂನ್ 11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸ ನಂ. 12, ತುಘಲಕ್ ಲೇನ್ ಬಂಗಲೆ ಸೇರಿದಂತೆ 12 ಸಂಸದರ ಬಂಗಲೆ ಖಾಲಿ ಮಾಡಲು ಲೋಕಸಭಾ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ

ಈಗ ಹಂಚಿಕೆಯಾಗಲು ಸಿದ್ಧವಾಗಿರುವ ಬಂಗಲೆ, ಮನೆ, ಫ್ಲಾಟ್ ಗಳು ಎಷ್ಟು? ಯಾವ ಯಾವ ಶ್ರೇಣಿಯ ಬಂಗಲೆಗಳಿರಲಿವೆ? ಎಂಬುದರ ಸವಿವರ ಇಲ್ಲಿದೆ.

2004ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಬಳಿಕ ಈ ಬಂಗಲೆಯನ್ನು ಅಧಿಕೃತ ನಿವಾಸ ಮಾಡಿಕೊಂಡಿದ್ದರು. Type 8 ಕೆಟಗೆರಿಗೆ ಸೇರಿರುವ ಈ ಬಂಗಲೆ ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಿರುತ್ತದೆ.

ರಾಹುಲ್ ಗಾಂಧಿ 'ಬಂಗಲೆ' ಕಿತ್ತುಕೊಳ್ಳಲಿರುವ ಕೇಂದ್ರ ಸರ್ಕಾರ

ಈಗ ನೀಡಿರುವ ಅಧಿಸೂಚನಂತೆ ವಿವಿಧ ಶ್ರೇಣಿಯ ಬಂಗಲೆಗಳ ತೆರವಿಗೆ ಸೂಚಿಸಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸೋಲು ಕಂಡಿದ್ದು, ಕೇರಳದ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

12 ಬಂಗಲೆಗಳನ್ನು ಖಾಲಿ ಮಾಡಲು ಸೂಚನೆ ನೀಡಿರುವುದಲ್ಲದೆ, 517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡಲು ಪಟ್ಟಿ ಪ್ರಕಟಿಸಲಾಗಿದೆ. ಲೋಕಸಭೆ ಸಮಿತಿಯಿಂದ ತಯಾರಾದ ಈ ಪಟ್ಟಿಯಲ್ಲಿ ಇರುವ ಬಂಗಲೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಹುಲ್ ಗಾಂಧಿ ಅವರ ಬಂಗಲೆ ಹೊಸಬರಿಗೆ ಹಂಚಿಕೆಯಾಗಲು ಲಭ್ಯವಿದೆ ಎಂದು ಅಧಿಸೂಚನೆಯಲ್ಲಿದೆ.

517ಮನೆಗಳನ್ನು ಈ ಬಾರಿ ಆಯ್ಕೆಗೆ ಸೂಚಿಸಲಾಗಿದೆ

517ಮನೆಗಳನ್ನು ಈ ಬಾರಿ ಆಯ್ಕೆಗೆ ಸೂಚಿಸಲಾಗಿದೆ

517ಮನೆಗಳನ್ನು ಈ ಬಾರಿ ಆಯ್ಕೆಗೆ ಸೂಚಿಸಲಾಗಿದೆ. ಸಣ್ಣ, ಮಧ್ಯಮ ಗಾತ್ರದ ಫ್ಲಾಟ್ ಸೇರಿದಂತೆ ರಾಹುಲ್ ಅವರ ಅಧಿಕೃತ ನಿವಾಸವಾಗಿರುವ ತುಘಲಕ್ ಲೇನ್ ಬಂಗಲೆ ಕೂಡಾ ಆಯ್ಕೆಗೆ ಲಭ್ಯವಿರಲಿದೆ. ಸದ್ಯಕ್ಕೆ ಹಂಗಾಮಿ ಸ್ಪೀಕರ್ ಆದವರು ನೂತನ ಸಂಸದರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ನಂತರ ನೂತನ ಸ್ಪೀಕರ್ ಆಯ್ಕೆಯಾದ ಬಳಿಕ ಸಮಿತಿ ನೀಡಿದ ಪಟ್ಟಿ ಅನ್ವಯ ಸಂಸದರಿಗೆ ಹೊಸ ಬಂಗಲೆಗಳು ಆಯ್ಕೆಗೆ ಲಭ್ಯವಾಗಲಿದೆ.

ತಾತ್ಕಾಲಿಕವಾಗಿ ನೆಲೆ ಸಿಗಲಿದೆ

ತಾತ್ಕಾಲಿಕವಾಗಿ ನೆಲೆ ಸಿಗಲಿದೆ

250ಕ್ಕೂ ಅಧಿಕ ಹೊಸ ಸಂಸದರಿಗೆ ತಾತ್ಕಾಲಿಕ ನೆಲೆ ನೀಡಲಾಗುತ್ತದೆ. ರಾಜ್ಯ ಭವನ, ವೆಸ್ಟರ್ನ್ ಕೋರ್ಟ್ ನಲ್ಲಿ ಸಂಸದರು ನೆಲೆಸಬಹುದಾಗಿದ್ದು, ತಮಗೆ ಮನೆ/ ಬಂಗಲೆ ಹಂಚಿಕೆಯಾದ ಬಳಿಕ ಅಲ್ಲಿಗೆ ತೆರಳಬಹುದಾಗಿದೆ. ಇದಕ್ಕಾಗಿ ವಸತಿ ಅರ್ಜಿ ತುಂಬಬೇಕು. ಅನುಭವ ಹಾಗೂ ವಸತಿ ಸಮಿತಿಯ ನಿಯಮಕ್ಕನುಸಾರವಾಗಿ ಹಂಚಿಕೆ ಪಟ್ಟಿ ತಯಾರಾಗಲಿದೆ.ವಿವಿಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಯಾರಿಗೆ ಯಾವ ಬಂಗಲೆ ಎಂಬುದನ್ನು ಅಂತಿಮಗೊಳಿಸಲಾಗುತ್ತದೆ.

ಒಟ್ಟಾರೆ, ಎಷ್ಟು ಮನೆ, ಬಂಗಲೆ, ಫ್ಲಾಟ್ ಲಭ್ಯ

ಒಟ್ಟಾರೆ, ಎಷ್ಟು ಮನೆ, ಬಂಗಲೆ, ಫ್ಲಾಟ್ ಲಭ್ಯ

ಲೋಕಸಭೆ ಈ ಬಾರಿ 517 ಬಂಗಲೆ, 37 ಅವಳಿ ಫ್ಲಾಟ್ ಗಳು, 93 ಸಿಂಗಲ್ ಫ್ಲಾಟ್, 96 ಬಹುಮಹಡಿ ಫ್ಲಾಟ್, 32 ಮನೆಗಳನ್ನು ಸಂಸದರ ನಿವಾಸಕ್ಕಾಗಿ ನೀಡುತ್ತಿದೆ. ಸೆಂಟ್ರಲ್ ದೆಹಲಿ, ನಾರ್ಥ್ ಅವಿನ್ಯೂ, ಸೌತ್ ಅವಿನ್ಯೂ, ಮೀನಾ ಬಾಗ್, ಬಿಶಂಭಾರ್ ದಾಸ್ ಮಾರ್ಗ್, ಬಾಬಾ ಖರಾಕ್ ಸಿಂಗ್ ಮಾರ್ಗ್, ವಿಠಲ್ ಭಾಯಿ ಪಟೇಲ್ ಹೌಸ್ ಹಾಗೂ ತಿಲಕ್ ಮಾರ್ಗ್ ನಲ್ಲಿ ಈ ಮನೆ/ಬಂಗಲೆಗಳಿವೆ. ಯಾವ ಮನೆ ಎಲ್ಲಿದೆ ಯಾರಿಗೆ ಯಾವ ಮನೆ ಸೇರಲಿದೆ ಎಂಬುದರ ಸವಿವರ ಪಟ್ಟಿ ಶೀಘ್ರದಲ್ಲೇ ಹೊರಬರಲಿದೆ.

ಮನೆ ಖಾಲಿ ಮಾಡಲು ಎಷ್ಟು ಸಮಯ?

ಮನೆ ಖಾಲಿ ಮಾಡಲು ಎಷ್ಟು ಸಮಯ?

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಹಾಲಿ ಸಂಸದರು ಸೋಲು ಕಂಡಿದ್ದರೆ ತಮ್ಮ ನಿವಾಸವನ್ನು ತೊರೆಯಬೇಕಾಗುತ್ತದೆ. ಅದರಂತೆ ಈ ಬಾರಿ ಮೇ 23ರಂದು 2019ರ ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಅಂದಿನಿಂದ ಒಂದು ತಿಂಗಲ ಅವಧಿಯಲ್ಲಿ ಮನೆ ಖಾಲಿ ಮಾಡಬೇಕು ಎಂಬ ನಿಯಮವಿದೆ.

ಹೊಸ ಮನೆ/ಬಂಗಲೆ ಹಂಚಿಕೆ ಮಾಡುವಾಗ, ಹಿರಿಯ ರಾಜಕಾರಣಿ, ಭದ್ರತಾ ವ್ಯವಸ್ಥೆ, ಅವರು ಮುಖ್ಯಮಂತ್ರಿಯಾಗಿದ್ದರೆ, ಶಾಸಕರಾಗಿದ್ದರೆ, ರಾಜ್ಯಪಾಲರಾಗಿದ್ದರೆ ಎಂಬ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ.

ಯಾವ ಯಾವ ಶ್ರೇಣಿಯ ಮನೆ, ಬಂಗಲೆಗಳಿವೆ

ಯಾವ ಯಾವ ಶ್ರೇಣಿಯ ಮನೆ, ಬಂಗಲೆಗಳಿವೆ

ಅತ್ಯಾಧುನಿಕ ಉನ್ನತ ಶ್ರೇಣಿಯ ಮನೆ/ಬಂಗಲೆಗಳು ಹಿರಿಯ ರಾಜಕಾರಣಿಗಳ ಪಾಲಾಗಲಿವೆ. ಒಂದು ವೇಳೆ ಇಂಥ ರಾಜಕಾರಣಿಗಳು ಹಾಲಿ ಸಂಸದರಾಗಿದ್ದು, ಮನೆ ಖಾಲಿ ಮಾಡಬೇಕಾದರೆ, ಹಿರಿತನವನ್ನು ಪರಿಗಣಿಸಿ 4 ತಿಂಗಳ ತನಕ ವಿಸ್ತರಣೆ ಮಾಡಲಾಗುತ್ತದೆ. ವೈದ್ಯಕೀಯ ನೆರವು ಪಡೆಯುತ್ತಿದ್ದರೆ 6 ತಿಂಗಳ ತನಕ ಮನೆ ಉಳಿಸಿಕೊಳ್ಳಬಹುದು.

* ಟೈಪ್ V ಹಾಗೂ ಟೈಪ್ V ಎ : ಡ್ರಾಯಿಂಗ್ ರೂಮ್, ಒಂದು ಬೆಡ್ ರೂಮ್ ಇರಲಿದೆ.

* ಟೈಪ್ V ಬಿ : ಡ್ರಾಯಿಂಗ್ ರೂಮ್, ಎರಡು ಬೆಡ್ ರೂಮ್ ಇರಲಿದೆ.

* ಟೈಪ್ V ಸಿ : ಡ್ರಾಯಿಂಗ್ ರೂಮ್, ಮೂರು ಬೆಡ್ ರೂಮ್ ಇರಲಿದೆ

* ಟೈಪ್ V ಡಿ : ಡ್ರಾಯಿಂಗ್ ರೂಮ್, ನಾಲ್ಕು ಬೆಡ್ ರೂಮ್ ಇರಲಿದೆ

ಇದಲ್ಲದೆ ಎರಡು ಫ್ಲಾಟ್ ಕಾಂಬಿನೇಷನ್ ಕೂಡಾ ಸಿಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress President Rahul Gandhi set to lose Tughlaq lane Bunglow. The Lok Sabha currently has 159 bungalows, 37 twin flats, 93 single flats, 96 multi-storey flats and 32 units of single regular accommodation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more