ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಸ್ಫೋಟಕ ಬೆಳವಣಿಗೆಯೊಂದರಲ್ಲಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮಹತ್ವದ ಕಾಗದ ಪತ್ರಗಳನ್ನು ಸಂಗ್ರಹಿಸುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಿಬಿಐ ಮುಖ್ಯಸ್ಥ ಹುದ್ದೆಯೊಂದ ಅಲೋಕ್ ಕುಮಾರ್ ವರ್ಮಾ ಅವರನ್ನು ತೆಗೆದುಹಾಕುವುದರ ಹಿಂದೆ ರಫೇಲ್ ಡೀಲ್ ಕಾರಣವಾಗಿದೆ. ಎಂದು ಹೇಳಿಕೊಂಡಿರುವ ರಾಹುಲ್ ಗಾಂಧಿ ರಫೇಲ್ ಡೀಲ್‌ಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿದ ಅಲೋಕ್ ವರ್ಮಾ ಅವರನ್ನು ಕಡ್ಡಾಯವಾಗಿ ರಜೆಯ ಮೇಲೆ ಕಳುಹಿಸುವ ಮೂಲಕ ರಫೇಲ್ ಡೀಲ್‌ಗೆ ಅಡ್ಡಿಪಡಿಸಿದ ಎಲ್ಲರನ್ನೂ ಮುಗಿಸುವ ಹುನ್ನಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ

ಅಷ್ಟೇ ಅಲ್ಲದೆ ದೇಶದ ಸಂವಿಧಾನ ಸಂಕಷ್ಟದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಮಂತ್ರಿಗಳ ಉದ್ದೇಶ ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿರುವ ರಾಹುಲ್' ಜೋ ಭೀ ರಫೇಲ್ ಕೆ ಈರ್ದ್-ಗಿರ್ದ್ ಆಯೇಗಾ-ಹಠಾ ದಿಯಾ ಜಾಯೇಗಾ, ಮಿಠಾ ದಿಯಾ ಜಾಯೇಗಾ' ಎಂದು ಲೇವಡಿ ಮಾಡಿದ್ದಾರೆ.

ರಫೇಲ್ ಯುದ್ದ ವಿಮಾನದ ಬೆಲೆ ಹೇಳಿ, ಐದು ಕೋಟಿ ಗೆಲ್ಲಿ: ಕಾಂಗ್ರೆಸ್ ಆಫರ್ರಫೇಲ್ ಯುದ್ದ ವಿಮಾನದ ಬೆಲೆ ಹೇಳಿ, ಐದು ಕೋಟಿ ಗೆಲ್ಲಿ: ಕಾಂಗ್ರೆಸ್ ಆಫರ್

ಸಿಬಿಐ ವಿವಾದಕ್ಕೆ ಹೊಸ ತಿರುವು ದೊರೆತಿದೆ, ಹಾಲಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಲಾಗಿದ್ದು ಅವರ ಜಾಗಕ್ಕೆ ನಾಗೇಶ್ವರ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ನಾಗೇಶ್ವರ ರಾವ್ ಅವರು ತಕ್ಷಣದಿಂದಲೇ ಸಿಬಿಐ ಪ್ರಭಾರ ನಿರ್ದೇಶಕರ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

Rahul says Alok Verma was collecting documents on Rafael deal

ಬಂಧನ ಭೀತಿ : ಕೋರ್ಟ್ ಮೊರೆ ಹೋದ ಸಿಬಿಐನ ನಂ. 2ಗೆ ಮಿಶ್ರಫಲ ಬಂಧನ ಭೀತಿ : ಕೋರ್ಟ್ ಮೊರೆ ಹೋದ ಸಿಬಿಐನ ನಂ. 2ಗೆ ಮಿಶ್ರಫಲ

ಸಿಬಿಐ ವಿಶೇಷ ನಿರ್ದೇಶಕ ರಾಜೇಶ್ ಅಸ್ತಾನ ಅವರ ವಿರುದ್ಧ ಲಂಚ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ ಬಳಿಕ ಸಿಬಿಐ ನಲ್ಲಿ ಆಂತರಿಕ ಜಗಳ ತಾರಕ್ಕೇರಿತ್ತು. ರಾಕೇಶ್ ಅಸ್ತಾನ ಅವರನ್ನು ರಜೆ ಮೇಲೆ ಕಳುಹಿಸಬಹುದು ಅಥವಾ ಅಮಾನತು ಮಾಡಬಹುದು ಎಂಬ ಕುತೂಹಲವೂ ಇತ್ತು. ಆದರೆ ರಾಕೇಶ್ ಅಸ್ತಾನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಅಲೋಕ್ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮೂಲಕ ಸಿಬಿಐ ಆಂತರಿಕ ಕಲಹಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

English summary
In an interesting development, AICC chief Rahul Gandhi has tweeted that CBI chief Alok Verma was busy with collecting documents on Rafael deal and certainly he was removed from the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X