ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್: ಜೇಟ್ಲಿಗೆ deadline ನೆನಪಿಸಿದ ರಾಹುಲ್ ಗಾಂಧಿ!

|
Google Oneindia Kannada News

ನವದೆಹಲಿ, ಆಗಸ್ಟ್ 30: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ದಿನೇ ದಿನೇ ಒಂದಿಲ್ಲೊಂದು ಟ್ವೀಟ್ ಮಾಡುತ್ತಿರುವ ರಾಹುಲ್ ಗಾಂಧಿ, ಇಂದು ಸಹ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕಾಲೆಳೆದಿದ್ದಾರೆ.

ರಫೇಲ್ ಡೀಲ್‌ ಬಗ್ಗೆ ಮಾತನಾಡಿದ ಜೇಟ್ಲಿಗೆ ಟ್ವೀಟ್ ಟಾಂಗ್ ಕೊಟ್ಟ ರಾಹುಲ್ರಫೇಲ್ ಡೀಲ್‌ ಬಗ್ಗೆ ಮಾತನಾಡಿದ ಜೇಟ್ಲಿಗೆ ಟ್ವೀಟ್ ಟಾಂಗ್ ಕೊಟ್ಟ ರಾಹುಲ್

"ಪ್ರೀತಿಯ ಜೇಟ್ಲಿ ಅವರೇ, ರಫೇಲ್ ಡೀಲ್ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಲು ನೀವು ನೀಡಿದ ಡೆಡ್ ಲೈನ್ ಗೆ ಇನ್ನು 6 ಗಂಟೆ ಮಾತ್ರ ಸಮಯವಿದೆ. ಯುವ ಭಾರತ ಕಾಯುತ್ತಿದೆ. ಆದರೆ ನನಗೆ ಗೊತ್ತು ನೀವು ಈ ಕುರಿತು ಮೋದಿಜೀ ಮತ್ತು ಅನಿಲ್ ಅಂಬಾನಿಜೀ ಅವರನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದೀರಿ. ನಿಮ್ಮ ಮಾತನ್ನು ಏಕೆ ಅವರು ಕೇಳಬೇಕು ಮತ್ತು ನಿಮ್ಮ ಬೇಡಿಕೆಗೆ ಏಕೆ ಒಪ್ಪಿಗೆ ನೀಡಬೇಕು ಎಂಬುದನ್ನು ಅರ್ಥಮಾಡಿಸುತ್ತಿದ್ದೀರಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!

ಫ್ರಾನ್ಸ್ ನೊಂದಿಗೆ ಭಾರತ ಮಾಡಿಕೊಂಡಿರುವ ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿರುವ ಕಾಂಗ್ರೆಸ್ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದೆ. ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

ರಫೆಲ್ ಡೀಲ್: ಕಾಂಗ್ರೆಸ್ಸಿಗೆ ರಿಲಯನ್ಸ್ ನಿಂದ ಖಡಕ್ ವಾರ್ನಿಂಗ್ರಫೆಲ್ ಡೀಲ್: ಕಾಂಗ್ರೆಸ್ಸಿಗೆ ರಿಲಯನ್ಸ್ ನಿಂದ ಖಡಕ್ ವಾರ್ನಿಂಗ್

Rahul reminds deadline to form JPC to FM Arun Jaitley

ನಿನ್ನೆಯಷ್ಟೇ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ಅವರಿಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ಜೇಟ್ಲಿಯವರೇ, ರಫೇಲ್ ದರೋಡೆ ಬಗ್ಗೆ ದೇಶದ ಗಮನವನ್ನು ಮತ್ತೊಮ್ಮೆ ಸೆಳೆಯುತ್ತಿರುವುದ್ದೀರಿ. ಈ ಕುರಿತು ತನಿಖೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ ರಚಿಸಿದರೆ ಹೇಗೆ? ಸಮಸ್ಯೆ ಎಂದರೆ ನಿಮ್ಮ ಮಹಾನ್ ನಾಯಕರು ತಮ್ಮ ಗೆಳೆಯನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. 24 ಗಂಟೆ ಒಳಗೆ ಉತ್ತರಿಸಿ, ನಾವು ಕಾಯುತ್ತಿರುತ್ತೇವೆ' ಎಂದಿದ್ದರು.

English summary
Congress president Rahul Gandhi reminds deadline to form Joint parliamentary committee(JPC) to Finance minister Arun Jaitley on his twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X