ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಾವಿನಲ್ಲೂ ಗುಜರಾತ್ ಮಾದರಿ: ರಾಹುಲ್ ಗಾಂಧಿ ವ್ಯಂಗ್ಯ

|
Google Oneindia Kannada News

ನವದೆಹಲಿ,ಜೂನ್ 16: ದೇಶಾದ್ಯಂತ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವೈರಸ್ ಮುಂದಿಟ್ಟುಕೊಂಡು ಗುಜರಾತ್ ಮಾದರಿಯನ್ನು ಲೇವಡಿ ಮಾಡಿದ್ದಾರೆ.

ದೇಶಾದ್ಯಂತ ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಗಳ ಅಂಕೆ ಸಂಖ್ಯೆ ಮುಂದಿಟ್ಟುಕೊಂಡು ಗುಜರಾತ್‌ನಲ್ಲೇ ಅತಿ ಹೆಚ್ಚು ಮರಣ ಪ್ರಮಾಣವಿದೆ ಎಂಬ ಬಿಬಿಸಿ ವರದಿಯನ್ನು ಆದರಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ಲಾಕ್‌ಡೌನ್ ವಿಫಲ': ಸಾಕ್ಷಿ ಮುಂದಿಟ್ಟು ಸರ್ಕಾರಕ್ಕೆ ಚಾಟಿ ಬೀಸಿದ ರಾಹುಲ್ ಗಾಂಧಿ'ಲಾಕ್‌ಡೌನ್ ವಿಫಲ': ಸಾಕ್ಷಿ ಮುಂದಿಟ್ಟು ಸರ್ಕಾರಕ್ಕೆ ಚಾಟಿ ಬೀಸಿದ ರಾಹುಲ್ ಗಾಂಧಿ

ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ ಮಹಾರಾಷ್ಟ್ರದಲ್ಲಿ 3.73 ಇದೆ, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್‌ಗಢ ಶೇ.0.35 ರಷ್ಟಿದೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಹಾಗೂ ಬಿಜೆಪಿ ಆಡಳಿತವಿರುವ ಗುಜರಾತ್‌ನ್ನು ಕಾಂಗ್ರೆಸ್ ಆಡಳಿತವಿರುವ ಉಳಿದ ರಾಜ್ಯಗಳೊಂದಿಗೆ ರಾಹುಲ್ ಗಾಂಧಿ ಹೋಲಿಕೆ ಮಾಡಿ ಗುಜರಾತ್ ಮಾದರಿಯನ್ನು ಪ್ರಶ್ನಿಸಿದ್ದಾರೆ.

ಗುಜರಾತ್‌ನಲ್ಲಿ ಶೇ.75 ರಷ್ಟು ಭಾಗವನ್ನು ಕೊರೊನಾ ಸೋಂಕು ಆವರಿಸಿಕೊಂಡಿದೆ. ಇದುವರೆಗೆ 21,500 ಪ್ರಕರಣಗಳು ದೃಢಪಟ್ಟಿವೆ.

ಬಿಬಿಸಿ ಬರೆದಿರುವ ಲೇಖನದಲ್ಲಿ ಗುಜರಾತ್‌ ರಾಜಧಾನಿ ಅಹಮದಾಬಾದ್‌ನಲ್ಲಿನ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಸ್ಥೂಲವಾಗಿ ವಿಶ್ಲೇಷಿಸಲಾಗಿದೆ.

Rahul Questions Gujarat Model Over Corona Mortality Rate

ಸರ್ಕಾರಿ ಆಸ್ಪತ್ರೆಗಳಲ್ಲಿನ ಸಮಸ್ಯೆಯೇ ಮರಣ ಪ್ರಮಾಣ ಏರಿಕೆಯಾಗಲು ಅನಿವಾಸಿ ಭಾರತೀಯರ ಆಗಮನ ಹಾಗೂ ದೆಹಲಿ ತಬ್ಲಿಘಿ ಧಾರ್ಮಿಕ ಕಾರ್ಯಕ್ರಮ ಕಾರಣವೆಂದು ಗುಜರಾತ್ ಸರ್ಕಾರ ಹೇಳುತ್ತಿದೆ. ಆದರೆ ಇದೇ ರೀತಿ ಸಮಸ್ಯೆ ಎದುರಿಸಿದ ಕೇರಳ ಹಾಗೂ ತಮಿಳುನಾಡಿನಲ್ಲಿ ಮರಣ ಪ್ರಮಾಣ ಕಡಿಮೆ ಇದೆ ಎಂದು ಬಿಬಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಆರೇಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮಾದರಿ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಅದರ ವಿರುದ್ಧ ಅಭಿಯಾನ ನಡೆಸುತ್ತಲೇ ಇದ್ದಾರೆ, ಅದರ ಮುಂದುವರಿದ ಭಾಗವಾಗಿ ಕೊವಿಡ್ 19 ವಿಚಾರದಲ್ಲಿಯೂ ಹೀಗೆ ನಡೆದುಕೊಂಡಿದ್ದಾರೆ.

English summary
Congress Former President Rahul Gandhi Questioned Gujarat Model Over Corona Mortality Rate. Gujarat Recorded Highest Mortality Rate in the Country That is 6.25 Percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X