ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಧಿಕೃತ! ರಾಹುಲ್ ಗಾಂಧಿ ಇನ್ನು ಕಾಂಗ್ರೆಸ್ ಅಧ್ಯಕ್ಷರಲ್ಲ!

|
Google Oneindia Kannada News

ನವದೆಹಲಿ, ಜುಲೈ 3: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ, ತಮ್ಮ ರಾಜೀನಾಮೆಯನ್ನು ಈಗ ಅಧಿಕೃತಗೊಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಿಂದ ಅವರು 'ಕಾಂಗ್ರೆಸ್ ಅಧ್ಯಕ್ಷ' ಎಂಬ ವೃತ್ತಿ ಸೂಚಕವನ್ನು ತೆಗೆದುಹಾಕಿದ್ದಾರೆ.

ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯ ಪ್ರಕಾರ ಅವರು ಈಗ ಕೇವಲ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಎಂಬ ಸೂಚಕವನ್ನು ಅವರು ತೆಗೆದುಹಾಕುವ ಮೂಲಕ ತಾವಿನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುತ್ತಿಲ್ಲ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ತಡಮಾಡದೆ ಹೊಸ ಅಧ್ಯಕ್ಷರನ್ನು ಆರಿಸಿ: ನಾಯಕರಿಗೆ ರಾಹುಲ್ ಗಾಂಧಿ ಆದೇಶ ತಡಮಾಡದೆ ಹೊಸ ಅಧ್ಯಕ್ಷರನ್ನು ಆರಿಸಿ: ನಾಯಕರಿಗೆ ರಾಹುಲ್ ಗಾಂಧಿ ಆದೇಶ

ಚುನಾವಣೆ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿದ್ದ ರಾಹುಲ್ ಗಾಂಧಿ, ಇತ್ತೀಚೆಗೆ ಅದರಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಅವರ ರಾಜೀನಾಮೆಯ ನಿರ್ಧಾರಕ್ಕೆ ಕಾಂಗ್ರೆಸ್‌ನ ಮುಖಂಡರು ಒಪ್ಪಿರಲಿಲ್ಲ. ತಮ್ಮ ನೇತೃತ್ವದಲ್ಲಿಯೇ ಪಕ್ಷ ಮುಂದುವರಿಯಬೇಕು ಎಂದು ಪಟ್ಟು ಹಿಡಿದಿದ್ದರು. ಒಂದು ವೇಳೆ ರಾಜೀನಾಮೆ ನೀಡಲೇಬೇಕು ಎಂದಿದ್ದರೆ, ಅಧ್ಯಕ್ಷ ಸ್ಥಾನಕ್ಕೆ ನೀವೇ ಸೂಕ್ತ ನಾಯಕನ ಹೆಸರು ಸೂಚಿಸಿ ಎಂದಿದ್ದರು.

rahul gandhi twitter account congress president

ಮುಖಂಡರ ಈ ಬೇಡಿಕೆಗೂ ರಾಹುಲ್ ಗಾಂಧಿ ಒಪ್ಪಿರಲಿಲ್ಲ. ಪಕ್ಷವೇ ಹೊಸ ನಾಯಕನನ್ನು ಆರಿಸಲಿದೆ ಎಂದು ತಮ್ಮ ನಿಲುವಿಗೆ ಅಂಟಿ ಕುಳಿತಿದ್ದರು. ಈಗ ತಮ್ಮ ಹುದ್ದೆ ಸೂಚಕವಾದ ಕಾಂಗ್ರೆಸ್ ಅಧ್ಯಕ್ಷ ಪದವನ್ನು ತೆಗೆದುಹಾಕಿರುವುದು ಅವರು ಅಧಿಕೃತವಾಗಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಹೇಳುತ್ತಿದೆ. ಆದರೆ, ಅತ್ತ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ರಾಹುಲ್ ರಾಜೀನಾಮೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಆತ್ಮಹತ್ಯೆ ಯತ್ನ ರಾಹುಲ್ ರಾಜೀನಾಮೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಆತ್ಮಹತ್ಯೆ ಯತ್ನ

'ನಾನು ಈಗಾಗಲೇ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಆದ್ದರಿಂದ ನಾನೀಗ ಪಕ್ಷದ ಅಧ್ಯಕ್ಷನಾಗಿ ಉಳಿದಿಲ್ಲ. ಕಾಂಗ್ರೆಸ್ ನ ಕಾರ್ಯಕಾರಿಣಿ ಸಮಿತಿ ಆದಷ್ಟು ಬೇಗ ಸಭೆ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ತಡಮಾಡದೆ ಪಕ್ಷದ ಅಧ್ಯಕ್ಷರನ್ನು ಆರಿಸಿ, ಈ ಪ್ರಕ್ರಿಯೆಯಲ್ಲಿ ನಾನು ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ' ಎಂದು ರಾಹುಲ್ ಗಾಂಧಿ ಬೆಳಿಗ್ಗೆ ಹೇಳಿದ್ದರು.

English summary
Rahul Gandhi removed 'Congress President' from his bio on his twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X