ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ರಾಹುಲ್ ಎಚ್ಚರಿಸಿದ್ದರು, ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತಾ?

|
Google Oneindia Kannada News

ದೆಹಲಿ, ಮಾರ್ಚ್ 13: ಕಳೆದ ಡಿಸೆಂಬರ್‌ ತಿಂಗಳಲ್ಲಿ ಕೊರೊನಾ ವೈರಸ್‌ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಿತು. ಅಲ್ಲಿಂದ ಆರಂಭವಾದ ಈ ವೈರಾಣು ಚೀನಾದಲ್ಲಿ ನರಬಲಿ ತೆಗೆದುಕೊಂಡಿದೆ. ಚೀನಾದ ಸ್ಥಿತಿ ನೋಡಿ ಅದಾಗಲೇ ಬೇರೆ ದೇಶಗಳು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ತಮ್ಮ ದೇಶಕ್ಕೆ ಕೊರೊನಾ ಹರಡುವವರೆಗೂ ಕಾದು ಈಗ ಏನು ಮಾಡುವುದು ಎಂದು ಯೋಚಿಸುಂತಾಗಿದೆ.

Recommended Video

Rahul Gandhi had warned the Modi government about the coronavirus a month ago

ಭಾರತದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಾವಿನ ಭಯ ಕಾಡುತ್ತಿದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಹಾಗೂ ಆಯಾ ರಾಜ್ಯಗಳ ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಿಸಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಜರುಗಿಸುತ್ತಿದ್ದಾರೆ. ಆದರೂ ಕೊರೊನಾ ಸೋಂಕು ಹರಡುವುದು ತಡೆಯಲು ಸಾಧ್ಯವಾಗುತ್ತಿಲ್ಲ.

ಭವಿಷ್ಯಕ್ಕೆ ಹೆದರಿ ಹೋದ, ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ: ರಾಹುಲ್ ಗಾಂಧಿಭವಿಷ್ಯಕ್ಕೆ ಹೆದರಿ ಹೋದ, ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ: ರಾಹುಲ್ ಗಾಂಧಿ

ಇದು ಭಾರತದ ಆರ್ಥಿಕ ವ್ಯವಸ್ಥೆ ಮೇಲೂ ಭಾರಿ ಪರಿಣಾಮ ಬೀರುತ್ತಿದೆ. ಈಗ ವಿಷಯ ಏನಪ್ಪಾ ಅಂದ್ರೆ, ಒಂದು ತಿಂಗಳ ಮುಂಚೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೊನಾ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು. ಅಂದು ರಾಗಾ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಈಗಿನ ಸ್ಥಿತಿ ನೋಡಿ ಹೇಳಬಹುದು. ಅಷ್ಟಕ್ಕೂ, ರಾಹುಲ್ ಗಾಂಧಿ ತಿಂಗಳ ಮುಂಚೆ ಹೇಳಿದ್ದೇನು? ಮುಂದೆ ಓದಿ...

ಫೆಬ್ರವರಿ 2ರಂದು ಟ್ವೀಟ್ ಮಾಡಿದ್ದ ರಾಹುಲ್

ಫೆಬ್ರವರಿ 2ರಂದು ಟ್ವೀಟ್ ಮಾಡಿದ್ದ ರಾಹುಲ್

ಫೆಬ್ರವರಿ 2 ರಂದು ಕೊರೊನಾ ವೈರಸ್‌ ಬಗ್ಗೆ ಟ್ವಿಟ್ಟರ್‌ನಲ್ಲಿ ಎಚ್ಚರಿಕೆಯ ಸಂದೇಶ ನೀಡಿದ್ದ ರಾಹುಲ್ ಗಾಂಧಿ ''ಕರೋನಾ ವೈರಸ್ ನಮ್ಮ ಜನರಿಗೆ ಮತ್ತು ನಮ್ಮ ಆರ್ಥಿಕತೆಗೆ ಅತ್ಯಂತ ಗಂಭೀರ ಅಪಾಯ ತರಲಿದೆ. ಆದರೆ ಸರ್ಕಾರ ಕೊರೊನಾವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನನಗೆ ಅನಿಸುತ್ತಿದೆ. ಸಮಯಕ್ಕೆ ಅಗತ್ಯ ಕ್ರಮ ಅವಶ್ಯಕ'' ಎಂದು ಮುನ್ಸೂಚನೆ ನೀಡಿದ್ದರು.

ರಾಗಾ ಎಚ್ಚರಿಕೆ ನಿರ್ಲಕ್ಷ್ಯಿಸಿದ ಮೋದಿ

ರಾಗಾ ಎಚ್ಚರಿಕೆ ನಿರ್ಲಕ್ಷ್ಯಿಸಿದ ಮೋದಿ

ತಿಂಗಳ ಹಿಂದೆಯೇ ವಿರೋಧ ಪಕ್ಷದ ನಾಯಕ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ್ದರು, ಮೋದಿ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡಿತಾ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಒಂದು ವೇಳೆ ಚೀನಾದಲ್ಲಿ ಕೊರೊನಾ ಭೀಕರತೆ ನೋಡಿದ ತಕ್ಷಣ, ಭಾರತದಲ್ಲಿ ಎಚ್ಚರಿಕೆ ವಹಿಸಿದ್ದರೆ ಬಹುಶಃ ಇಂದಿನ ಸ್ಥಿತಿ ನಮ್ಮ ದೇಶಕ್ಕೆ ಬರುತ್ತಿರಲಿಲ್ಲ ಎನ್ನುವುದು ಹಲವು ಅಭಿಪ್ರಾಯ.

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

ಮತ್ತೆ ಕೊರೊನಾ ಟ್ವೀಟ್ ನೆನಪಿಸಿದ ರಾಹುಲ್

ಮತ್ತೆ ಕೊರೊನಾ ಟ್ವೀಟ್ ನೆನಪಿಸಿದ ರಾಹುಲ್

ಒಂದು ತಿಂಗಳ ಹಿಂದೆ ನಾನು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿರುವ ರಾಹುಲ್ ಗಾಂಧಿ, ಇಂದು ಮತ್ತೊಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಕೊರೊನಾ ವೈರಸ್ ದೊಡ್ಡ ಸಮಸ್ಯೆ. ಸಮಸ್ಯೆಯನ್ನು ನಿರ್ಲಕ್ಷ್ಯಿಸುವುದು ಪರಿಹಾರವಲ್ಲ. ಇದಕ್ಕೆ ಬಲವಾದ ಕ್ರಮ ತೆಗೆದುಕೊಳ್ಳದಿದ್ದರೆ ಭಾರತದ ಆರ್ಥಿಕತೆ ನಾಶವಾಗುತ್ತದೆ. ಸರ್ಕಾರ ಮೂರ್ಖತನದಿಂದ ವರ್ತಿಸುತ್ತಿದೆ'' ಎಂದು ಕಿಡಿಕಾರಿದ್ದಾರೆ.

ಕೊರೊನಾದಲ್ಲಿ ರಾಹುಲ್ ರಾಜಕೀಯ

ಕೊರೊನಾದಲ್ಲಿ ರಾಹುಲ್ ರಾಜಕೀಯ

ರಾಹುಲ್ ಗಾಂಧಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ''ಕೊರೊನಾ ತಡೆಯಲು ಕೇಂದ್ರ ಸರ್ಕಾರ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಕೊರೊನಾ ವಿಷಯದಲ್ಲಿ ಇಡೀ ದೇಶ ಒಟ್ಟಾಗಿ ನಿಂತಿರುವಾಗ ರಾಹುಲ್ ಗಾಂಧಿ ಮಾತ್ರ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ'' ಎಂದು ತಿರುಗೇಟು ನೀಡಿದ್ದಾರೆ.

ಭಾರತದಲ್ಲಿ ಒಟ್ಟು ಪ್ರಕರಣ ಎಷ್ಟು?

ಭಾರತದಲ್ಲಿ ಒಟ್ಟು ಪ್ರಕರಣ ಎಷ್ಟು?

ಮಾರ್ಚ್ 12ನೇ ತಾರೀಖಿನವರೆಗೂ ಭಾರತದಲ್ಲಿ ಒಟ್ಟು 72 ಕೊರೊನಾ ಕೇಸ್‌ಗಳು ದಾಖಲಾಗಿದೆ. ಇದರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಇದುವರೆಗೂ ಐದು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತವಾಗಿ ತಿಳಿಸಿದೆ.

English summary
Congress leader Rahul Gandhi had warned the Modi government about the coronavirus a month ago. that tweet went to viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X