ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಹೇಳಿದ್ದೇನು?

|
Google Oneindia Kannada News

Recommended Video

ರಾಜೀನಾಮೆ ನಿಡ್ತಾರ ರಾಹುಲ್..? ಸೋಲಿನ ಬಳಿಕ ರಾಹುಲ್ ಮೊದಲ ಪ್ರತಿಕ್ರಿಯೆ..?

ನವದೆಹಲಿ, ಮೇ 23: ಸೋತ ಬಳಿಕ ಮಾಧ್ಯಮಗಳ ಮುಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಗೆದ್ದ ಬಿಜೆಪಿ ಮತ್ತು ಮೋದಿ ಅವರನ್ನು ಮನಃಪೂರ್ವಕವಾಗಿ ಅಭಿನಂದಿಸಿದರು.

ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನರೇ ಮಾಲೀಕರು, ಅವರ ತೀರ್ಪನ್ನು ನಾವು ಸ್ವೀಕರಿಸುತ್ತೇವೆ, ಅವರು ಸ್ಪಷ್ಟವಾಗಿ ತಮ್ಮ ನಿರ್ಣಯ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳುಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು

ನಮ್ಮದು ವಿಚಾರಧಾರೆಯ ಹೋರಾಟ, ಬಿಜೆಪಿಯ ವಿಚಾರಧಾರೆಗಿಂತಲೂ ಭಿನ್ನವಾದ ವಿಚಾರಧಾರೆಯನ್ನು ಕಾಂಗ್ರೆಸ್ ಹೊಂದಿದೆ. ನಮ್ಮ ವಿಚಾರಧಾರೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ರಾಹುಲ್ ಹೇಳಿದರು.

ದೇಶದಾದ್ಯಂತ ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಗೆದ್ದವರಿಗೆ ಅಭಿನಂದನೆಗಳು ಆದರೆ ಸೋತ ಅಭ್ಯರ್ಥಿಗಳು ಭಯ ಗೊಳ್ಳುವುದು ಬೇಡ, ವಿಶ್ವಾಸಕಳೆದುಕೊಳ್ಳುವುದು ಬೇಡ ಮತ್ತೊಮ್ಮೆ ಪ್ರಯತ್ನ ಮಾಡೋಣ ಎಂದು ರಾಹುಲ್ ಹೇಳಿದರು.

ಅಮೇಥಿಯ ಜನರ ನಿರ್ಣಯದ ಬಗ್ಗೆ ಗೌರವ

ಅಮೇಥಿಯ ಜನರ ನಿರ್ಣಯದ ಬಗ್ಗೆ ಗೌರವ

ಅಮೇಥಿ ಫಲಿತಾಂಶದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರಿಗೆ ಗೆಲುವಾಗಿದೆ, ಅದು ಜನರ ತೀರ್ಪು ನಾನದನ್ನು ಒಪ್ಪುತ್ತೇನೆ, ಆದರೆ ಸ್ಮೃತಿ ಅವರು ಅಮೇಥಿಯ ಜನರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ವರ್ಕಿಂಗ್ ಕಮಿಟಿ ಜೊತೆ ಚರ್ಚೆ: ರಾಹುಲ್

ವರ್ಕಿಂಗ್ ಕಮಿಟಿ ಜೊತೆ ಚರ್ಚೆ: ರಾಹುಲ್

ಅಧ್ಯಕ್ಷರ ಸ್ಥಾನ ಬದಲಾವಣೆ ಆಗುತ್ತದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಮ್ಮ ವರ್ಕಿಂಗ್ ಕಮಿಟಿಯ ಜೊತೆ ನಾವು ಚುನಾವಣೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತೇವೆ, ಅದೂ ನಮಗೂ ವರ್ಕಿಂಗ್ ಕಮಿಟಿಗೂ ಬಿಟ್ಟ ವಿಚಾರ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಚುನಾವಣೆ ಬಗ್ಗೆ ಈಗ ಮಾತು ಬೇಡ: ರಾಹುಲ್

ಚುನಾವಣೆ ಬಗ್ಗೆ ಈಗ ಮಾತು ಬೇಡ: ರಾಹುಲ್

ಸೋಲಿನ ಬಗ್ಗೆ ಆಗಲಿ ಅಥವಾ ಚುನಾವಣಾ ಪ್ರಕ್ರಿಯೆ ಬಗ್ಗೆ ಆಗಲಿ ಯಾವುದೇ ಟಿಪ್ಪಣಿ ನೀಡಲು ನಿರಾಕರಿಸಿದ ಅವರು, ಇಂದು ದೇಶಕ್ಕೆ ಪ್ರಧಾನಿ ಆಯ್ಕೆ ಆಗಿದ್ದಾರೆ. ಇಂದು ಜನರು ತೀರ್ಪು ಸಂಭ್ರಮಿಸುವ ಹೊತ್ತು, ಈ ಸಮಯದಲ್ಲಿ ನಾನು ಸೋಲು ಅಥವಾ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ ಎಂದು ರಾಹುಲ್ ಹೇಳಿದರು.

ಪ್ರೀತಿ ಎಂದೂ ಸೋಲದು:ರಾಹುಲ್

ಪ್ರೀತಿ ಎಂದೂ ಸೋಲದು:ರಾಹುಲ್

ಸೋಲಿನ ಬಗ್ಗೆ ಪದೇ ಪದೇ ಪ್ರಶ್ನೆಗಳು ಬಂದಾಗ 'ಪ್ರೀತಿಗೆ ಎಂದೂ ಸೋಲಾಗುವುದಿಲ್ಲ' ನಾವು ಮೊದಲೇ ಹೇಳಿದ್ದೆವು, ಎದುರಾಳಿಗಳು ನಮ್ಮ ಮೇಲೆ ಕಲ್ಲು ಎಸೆದರೂ, ನನ್ನ ಬಗ್ಗೆ ಎಷ್ಟೇ ಕೀಳಾಗಿ ಮಾತನಾಡಿದರೂ ನಾವು ಪ್ರೀತಿಯಿಂದಲೇ ವ್ಯವಹಿರಿಸುತ್ತೇವೆಂದು ಅದರಂತೆ ಮಾಡಿದ್ದೇವೆ ಹಾಗೂ ಚುನಾವಣೆ ಎದುರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್ ನ ಗಾಂಧಿ ಕುಟುಂಬದಿಂದ ನಾಯಕತ್ವ ಹೊರಬರಲು ಸೂಕ್ತ ಕಾಲ!; ಇವೆಲ್ಲ ಜನರೇ ಹೇಳಿದ ಪಾಠಗಳು ಕಾಂಗ್ರೆಸ್ ನ ಗಾಂಧಿ ಕುಟುಂಬದಿಂದ ನಾಯಕತ್ವ ಹೊರಬರಲು ಸೂಕ್ತ ಕಾಲ!; ಇವೆಲ್ಲ ಜನರೇ ಹೇಳಿದ ಪಾಠಗಳು

English summary
AICC president Rahul Gandhi said we accept peoples mandate, we will respect that. He congratulated PM Narendra Modi and BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X