ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿ

By Manjunatha
|
Google Oneindia Kannada News

ನವದೆಹಲಿ, ಜುಲೈ 20: ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರಂಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ್ದ ಭಾಷಣವನ್ನೇ ಪುನರಾವರ್ತಿಸಿದರಾದರೂ ಆ ನಂತರ ವೇಗ ಪಡೆದುಕೊಂಡು ಮೋದಿ ವಿರುದ್ಧ ಹರಿಹಾಯ್ದರು.

ಅಪನಗದೀಕರಣ, ಜಿಎಸ್‌ಟಿ, ನಿರುದ್ಯೋಗ ಸಮಸ್ಯೆ, ಪ್ರತಿ ಖಾತೆಗೆ 15 ಲಕ್ಷ ಇನ್ನೂ ಹಲವು ವಿಷಯಗಳನ್ನು ಸಂಸತ್‌ ಮುಂದಿಟ್ಟ ರಾಹುಲ್ ಗಾಂಧಿ ಆ ನಂತರ ರಫೇಲ್ ಮತ್ತು ಮೋದಿ ಅವರ ಚೀನಾ ಭೇಟಿ ಬಗ್ಗೆ ಬೆಂಕಿ ಉಗುಳಿದರು.

LIVE: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮೋದಿ ನೋಡಲಾರರು : ರಾಹುಲ್ LIVE: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮೋದಿ ನೋಡಲಾರರು : ರಾಹುಲ್

ಮೋದಿ ಅವರ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು ತಮ್ಮ ಬ್ಯುಸಿನೆಸ್ ಗೆಳೆಯರ ಜೇಬು ತುಂಬಿಸಲು ಆಡಳಿತ ನಡೆಸುತ್ತಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಆರೋಪ ಮಾಡಿದರು. ರಾಹುಲ್ ಅವರ ಆರೋಪಕ್ಕೆ ಆಡಳಿತ ಪಕ್ಷ ಸದಸ್ಯರು ತೀವ್ರ ವಿರೋಧ ಮಾಡಿದರು.

Rahul Gandhi speech in Parliment during no confidence motion

ರಾಹುಲ್ ಗಾಂಧಿ ಅವರು ಮಾತನಾಡಲು ಆರಂಭ ಮಾಡಿದಾಗಲಿಂದಲೂ ಬಿಜೆಪಿ ಸದಸ್ಯರು ಅಡ್ಡಿ ಪಡಿಸುತ್ತಲೇ ಇದ್ದರು. ಲೋಕಸಭಾ ಸ್ಪೀಕರ್ ಸುಮಿತ್ರ ಮಹಜನ್ ಅವರು ಎರಡೂ ಪಕ್ಷದ ಸದಸ್ಯರನ್ನು ಸಮಾಧಾನಪಡಿಸುವಲ್ಲಿ ನಿರತರಾಗಿದ್ದರು.

English summary
AICC president Rahul Gandhi gives fiery speech at parliament during no confidence motion. He said Modi filling his business friends pocket not farmers and youths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X