ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆ ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಜನ ಸಾಮಾನ್ಯರ ಲೂಟಿ ಎಂದ ರಾಹುಲ್

|
Google Oneindia Kannada News

ನವದೆಹಲಿ,ಫೆಬ್ರವರಿ 15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಡುಗೆ ಇಂಧನ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಜನಸಾಮಾನ್ಯರ ಲೂಟಿ ಮಾಡುತ್ತಿದೆ. ಇದು ಇಬ್ಬರ ಅಭಿವೃದ್ಧಿ ಮಾತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಾಕಿಂಗ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ.ಇದರ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಮಾಡಲಾಗಿದೆ.

Rahul Gandhi Slams Centre Over LPG cylinder Price Hike

ಇದಕ್ಕೂ ಮುನ್ನ ರಾಗುಲ್ ಗಾಂಧಿ, ಹೊಸ ಕೃಷಿ ಕಾಯ್ದೆಮೂಲಕ ದೇಶದ ಸಂಪತ್ತನ್ನು ತಮ್ಮ ಉದ್ಯಮಿಗಳಿಗೆ ಹಂಚುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಭಾರತದಲ್ಲಿ ಇಂಧನ ಬೆಲೆ ಏರಿಕೆಯ ಜೊತೆಗೆ ಎಲ್ ಪಿಜಿ(ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ ದರದಲ್ಲಿ 50 ರೂಪಾಯಿ ಏರಿಕೆಯಾಗಿದೆ. ಸೋಮವಾರದಿಂದಲೇ ಪರಿಷ್ಕೃತ ದರವು ಜಾರಿಗೆ ಬರಲಿದೆ. ನವದೆಹಲಿಯಲ್ಲಿ ಪ್ರಸ್ತುತ 14.2 ಕೆಜಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಾಲ್ಕನೇ ದಿನಕ್ಕೆ ಎಲ್ ಪಿಸಿ ಸಿಲಿಂಡರ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಫೆಬ್ರವರಿ.04ರಂದು ದೇಶದ ಮಹಾನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 719 ರೂಪಾಯಿ ಆಗಿತ್ತು.

ವಾಣಿಜ್ಯ ಉಪಯೋಗಕ್ಕಾಗಿ ಬಳಸುವ 19 ಕೆಜಿ ತೂಕದ ಸಿಲಿಂಡರ್ ಬೆಲೆಯನ್ನೂ ಸಹ ಏರಿಕೆ ಮಾಡಲಾಗಿದೆ. ಒಂದು ವಾಣಿಜ್ಯ ಉಪಯೋಗಿ ಸಿಲಿಂಡರ್ ಬೆಲೆಗೆ 184 ರೂ. ಹೆಚ್ಚಿಸಲಾಗಿದ್ದು, 1349 ರೂಪಾಯಿಯಿಂದ 1533 ರೂಪಾಯಿಗೆ ಏರಿಕೆಯಾಗಿತ್ತು.

English summary
Congress Leader Rahul Gandhi on Monday took a dig at the Central government over the liquefied petroleum gas domestic cylinder price hike in Delhi and said that the government is looting from the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X