ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಷ್ಟ ಕಾಲದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ: ರಾಹುಲ್ ಗಾಂಧಿ ವಾಗ್ದಾಳಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಕೊರೊನಾ ಬಿಕ್ಕಟ್ಟಿನಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾವರವನ್ನು ಕೇಂದ್ರ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೊವಿಡ್ -19 ಬಿಕ್ಕಟ್ಟಿನ ಹಂತದಲ್ಲಿ ನೀಡಿದ ಭರವಸೆಗಳು ಎಲ್ಲವೂ ಹುಸಿಯಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ

21 ದಿನಗಳಲ್ಲಿ ಕೊರೊನಾವನ್ನು ನಿರ್ನಾಮ ಮಾಡುವ ಬಗ್ಗೆ ಗಾಳಿಯಲ್ಲಿ ಕೋಟೆಗಳನ್ನು ಕಟ್ಟುವುದು, ಜನರ ರಕ್ಷಣೆಗಾಗಿ ಆರೋಗ್ಯ ಸೇತು ಅಪ್ಲಿಕೇಶನ್, 20 ಲಕ್ಷ ಕೋಟಿ ಪ್ಯಾಕೇಜ್, ಯಾರೂ ನಮ್ಮ ಗಡಿಗಳನ್ನು ಅತಿಕ್ರಮಿಸಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಷ್ಟೆಲ್ಲಾ ಸುಳ್ಳು ಹೇಳಿದ್ದೀರಿ ಎಂದು.. ಕೇಂದ್ರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಸುಳ್ಳುಗಳ ಸರಮಾಲೆ

ಸುಳ್ಳುಗಳ ಸರಮಾಲೆ

ಕಾಂಗ್ರೆಸ್ ನಾಯಕ ತನ್ನ ಟ್ವೀಟ್ ಮೂಲಕ, ಕೇಂದ್ರ ಸರ್ಕಾರ ಸುಳ್ಳುಗಳ ಸರಮಾಲೆ ಹೆಣೆದಿದೆ ಎಂದಿದ್ದಾರೆ ಹಾಗೆಯೇ ಒಂದು ಸತ್ಯವೂ ಇದೆ: 'ಆಪದಾ ಮೆ ಅವಸರ್' (ವಿಪತ್ತಿನಲ್ಲಿ ಅವಕಾಶ) ಪಿಎಂ ಕೇರ್ಸ್. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಂ ಕೇರ್ಸ್ ಫಂಡ್ ಸ್ಥಾಪನೆಗೆ ವಿರೋಧ

ಪಿಎಂ ಕೇರ್ಸ್ ಫಂಡ್ ಸ್ಥಾಪನೆಗೆ ವಿರೋಧ

ಪಿಎಂ ಕೇರ್ಸ್ ಫಂಡ್ ಸ್ಥಾಪನೆಗೆ ಕಾಂಗ್ರೆಸ್ ವಿರುದ್ಧವಾಗಿದೆ ಮತ್ತು ಈ ಹಿಂದೆ ನಿಧಿಗೆ ದೇಣಿಗೆ ಕೊಟ್ಟ ದಾನಿಗಳ ಹೆಸರನ್ನು ಬಹಿರಂಗಪಡಿಸದ ಕಾರಣ ಕೇಂದ್ರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.

ಸಂಶೋಧನೆ ಉತ್ತೇಜಿಸುವ ಗುರಿ

ಸಂಶೋಧನೆ ಉತ್ತೇಜಿಸುವ ಗುರಿ

ಭಾರತದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (PM CARES) ನಿಧಿಯನ್ನು ಮಾರ್ಚ್ 2020 ರಲ್ಲಿ ರಚಿಸಲಾಯಿತು. ಈ ನಿಧಿಯು ಕೊವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸುವ, ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಮತ್ತು ರೋಗದ ಪರಿಸ್ಥಿತಿಯ ವಿರುದ್ಧ ಹೋರಾಡಲು ಸಂಶೋಧನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಭಾರತ-ಚೀನಾ ಗಡಿ ವಿಚಾರ: ಪ್ರಧಾನಿ ದೇಶದ ದಾರಿ ತಪ್ಪಿಸಿದ್ದಾರೆ

ಭಾರತ-ಚೀನಾ ಗಡಿ ವಿಚಾರ: ಪ್ರಧಾನಿ ದೇಶದ ದಾರಿ ತಪ್ಪಿಸಿದ್ದಾರೆ

ಭಾರತ-ಚೀನಾ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.ಭಾರತ ಎಂದಿಗೂ ದೇಶದ ಸೈನಿಕರ ಪರವಾಗಿಯೇ ನಿಂತಿದೆ. ಆದರೆ ಮೋದಿ ಯಾವತ್ತು ಚೀನಾದ ವಿರುದ್ಧ ನಿಲ್ಲುತ್ತಾರೆ. ಚೀನಾದಿಂದ ನಮ್ಮ ಭೂಭಾಗವನ್ನು ಯಾವಾಗ ವಾಪಸ್ ಪಡೆಯುತ್ತಾರೆ. ಚೀನಾದ ಹೆಸರು ಉಲ್ಲೇಖಿಸಲು ಭಯಪಡಬೇಡಿ ಎಂದು ರಾಹುಲ್ ಹೇಳಿದ್ದಾರೆ.

English summary
Congress leader Rahul Gandhi on Wednesday launched a fresh attack on the BJP-led Centre alleging its promises made during the COVID-19 crisis phase had failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X