• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿಗೆ ವಿಮಾನ, ಯೋಧರಿಗೆ ಬುಲೆಟ್‌ ಪ್ರೂಫ್ ರಹಿತ ವಾಹನ ಕುರಿತು ರಾಹುಲ್ ಮಾತು

|

ನವದೆಹಲಿ,ಅಕ್ಟೋಬರ್ 10: ಯೋಧರಿಗೆ ಬುಲೆಟ್ ರಹಿತ ವಾಹನ ನೀಡಿದ್ದು, ದೇಶ ಕಾಯುವ ಸೈನಿಕರಿಗೆ ಕನಿಷ್ಠ ಭದ್ರತೆಯೂ ಇಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮೋದಿಯವರಿಗೆ 8400 ಕೋಟಿ ಬೆಲೆ ಬಾಳುವ ವಿಮಾನ ಬೇಕು, ಆದರೆ ಸೈನಿಕರು ಮಾತ್ರ ಬುಲೆಟ್ ಪ್ರೂಫ್ ಇಲ್ಲದ ವಾಹನದಲ್ಲಿ ಓಡಾಡಬೇಕು.

ಮೋದಿ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಗೆ ಕೆರಳಿದ ಬಿಜೆಪಿ ನಾಯಕರು

ಸೈನಿಕರನ್ನುನ ಸ್ಮಶಾನಕ್ಕೆ ಕಳುಹಿಸುತ್ತಿದ್ದು, ಸರ್ಕಾರ ಮಾತ್ರ ಮೋದಿಗೆ ವಿಮಾನಕ್ಕೆ 8400 ಕೋಟಿ ರೂ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇದು ನ್ಯಾಯವೇ? ಕಳೆದ ವರ್ಷ ಪುಲ್ವಾಮಾ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸೈನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಂಪಿವಿಗಳನ್ನು ಖರೀದಿಸುವುದಾಗಿ ಸಿಆರ್‌ಪಿಎಫ್ ಹೇಳಿದೆ.

ಎಲ್ಲಾ ಸಿಆರ್‌ಪಿಎಫ್ ಯೋಧರು ಮತ್ತು ಅಧಿಕಾರಿಗಳು ವಾಣಿಜ್ಯ ವಿಮಾನವನ್ನು ಬಳಕೆ ಮಾಡಬಹುದು ಎಂದು ಘೋಷಿಸಿತ್ತು.ಭಾರತಕ್ಕಿರುವ ಅಪಾಯ ಪ್ರಧಾನಿಗೆ ಅರ್ಥವಾಗುತ್ತಿಲ್ಲ. ಅವರ ಸುತ್ತಲಿರುವವರಿಗೆ ಯಾರಿಗೂ ಹೇಳಲು ಧೈರ್ಯವಿಲ್ಲ ಎಂದು ಹೇಳಿದ್ದರು.

ಇದಕ್ಕೆ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿ ಭಾರತೀಯ ರಾಜಕೀಯದಲ್ಲಿ ಒಬ್ಬ ವ್ಯಕ್ತಿ ತನ್ನ ಅಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಪ್ರಧಾನಿ ಮೋದಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಕೆರಳಿದ್ದರು.

ಪವನ ಯಂತ್ರಗಳಿಂದ ವಿದ್ಯುತ್ ಜತೆಗೆ ಶುದ್ಧ ಕುಡಿಯುವ ನೀರು ಹಾಗೂ ಆಮ್ಲಜನಕವನ್ನೂ ತಯಾರಿಸುವಂತಹ ವಿಧಾನಗಳ ಬಗ್ಗೆ ಗಮನಹರಿಸಬಹುದು ಎಂಬ ಪ್ರಧಾನಿ ಹೇಳಿಕೆಗೆ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

ರಾಹುಲ್ ಗಾಂಧಿ ಟ್ವೀಟ್ ಮಾಡಿ' ನಮ್ಮ ಪ್ರಧಾನಿಯವರಿಗೆ ಏನೂ ಅರ್ಥವಾಗುತ್ತಿಲ್ಲ ಎಂಬುದೇ ಭಾರತಕ್ಕಿರುವ ನಿಜವಾದ ಅಪಾಯ. ವಿಷಯ ಏನೆಂದರೆ ಅವರಿಗೆ ಸಲಹೆ ನೀಡುವ ಧೈರ್ಯವಿರುವಂಥವರು ಅವರ ಸುತ್ತ ಯಾರೂ ಇಲ್ಲ ಎಂದು ಹೇಳಿದ್ದರು. ಈ ಟ್ವೀಟ್ ಜತೆಗೆ ಪ್ರಧಾನಿ ಮೋದಿ ಪವನ ವಿದ್ಯುತ್ ಉತ್ಪಾದಕ ಕಂಪನಿಯ ಸಿಇಒ ಅವರೊಂದಿಗಿನ ಸಂವಾದದ ವಿಡಿಯೋ ತುಣಕನ್ನು ಕೂಡ ಹಾಕಿದ್ದರು.

English summary
Congress leader Rahul Gandhi on Saturday shared a video targeting Prime Minister Narendra Modi. In this video, some soldiers sitting inside a truck alleged that their officer was playing with their lives by sending them in a non-bulletproof truck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X