ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯ ವ್ಯರ್ಥ ಮಾಡದೇ, ಕೊರೊನಾ ವಿರುದ್ಧ ಹೋರಾಡಿ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್ 3: 'ಸಮಯ ವ್ಯರ್ಥ ಮಾಡದೇ ಕೊರೊನಾ ರೋಗದ ವಿರುದ್ಧ ಹೋರಾಡಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.

ನಿನ್ನೆಯಷ್ಟೊತ್ತಿಗೆ ಕೇವಲ ಮೂರು ಮಂದಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿತ್ತು, ಆದರೆ ಈಗ ಆರು ಮಂದಿಗೆ ಹರಡಿದೆ. ದಿನದಿಂದ ದಿನಕ್ಕೆ ಕೊರೊನಾ ಸಮಸ್ಯೆ ಉಲ್ಬಣವಾಗುತ್ತಿದೆ.

ಹೀಗಾಗಿ ಸಮಯ ವ್ಯರ್ಥ ಮಾಡದೇ ಕೊರೊನಾ ಹೋಗಲಾಡಿಸಲು ಏನು ಮಾಡಬೇಕು ಎಂಬುದರ ಕಡೆ ಗಮನ ನೀಡಿ ಎಂದು ಹೇಳಿದ್ದಾರೆ.

Rahul

ಇದುವರೆಗೂ ಸರ್ಕಾರವು ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆದರೆ ಇದು ಗಂಭೀರ ರೋಗವಾಗಿದೆ. ದೇಶದ ನಿಜವಾದ ನಾಯಕನೆಂದರೆ ದೇಶಕ್ಕೆ ಆಪತ್ತು ಬಂದಾಗ ತಕ್ಷಣ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮೋದಿಜೀ ಸಾಮಾಜಿಕ ಜಾಲತಾಣವನ್ನಲ್ಲ, ದ್ವೇಷವನ್ನು ಬಿಡಿ : ರಾಹುಲ್ ಗಾಂಧಿಮೋದಿಜೀ ಸಾಮಾಜಿಕ ಜಾಲತಾಣವನ್ನಲ್ಲ, ದ್ವೇಷವನ್ನು ಬಿಡಿ : ರಾಹುಲ್ ಗಾಂಧಿ

ಸಾಮಾಜಿಕ ಜಾಲತಾಣಗಳ ಜೊತೆ ಆಟವಾಡುವುದು ಬಿಟ್ಟು, ಕೊರೊನಾ ವೈರಸ್ ಹೋಗಲಾಡಿಸುವುದು ಹೇಗೆ ಎಂಬುದರ ಬಗ್ಗೆ ಗಮನಕೊಡಿ.ಇದುವರೆಗೂ ಚೀನಾದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. 80 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಉತ್ತರ ಪ್ರದೇಶದಕ್ಕೂ ಕೊರೊನಾ ವೈರಸ್ ಆವರಿಸಿದೆ. ಆಗ್ರಾದಲ್ಲಿ 6 ಮಂದಿಗೆ ಕೊರೊನಾ ರೋಗ ಇರುವುದು ಪತ್ತೆಯಾಗಿದೆ.

ಆಗ್ರಾದಲ್ಲಿ ಆರು ಮಂದಿಯ ರಕ್ತದಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಆರು ಮಂದಿಯ ರಕ್ತದಲ್ಲಿ ಭಾರಿ ಪ್ರಮಾಣದಲ್ಲಿ ವೈರಸ್ ಪತ್ತೆಯಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದೇಶದಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿ, ತೆಲಂಗಾಣ, ಜೈಪುರ ಸೇರಿದಂತೆ ಒಟ್ಟು ಆರು ಮಂದಿಯ ದೇಶಹದಲ್ಲಿ ಕೊರೊನಾ ವೈರಸ್ ಇದೆ ಎನ್ನುವುದು ದೃಢಪಟ್ಟಿದೆ. ದೆಹಲಿಯಲ್ಲಿ ದೃಢಪಟ್ಟಿರುವ ವ್ಯಕ್ತಿಯು ಆಗ್ರಾದಲ್ಲಿರುವ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Congress Leader Tweeted that "Don't waste time playing clown with social media accounts, deal with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X