ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯೊಬ್ಬ ರೈತ, ಕಾರ್ಮಿಕನೂ ಇಲ್ಲಿ ಸತ್ಯಾಗ್ರಹಿ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜನವರಿ 03: ಪ್ರತಿಯೊಬ್ಬ ರೈತ, ಕಾರ್ಮಿಕನೂ ಇಲ್ಲಿ ಸತ್ಯಾಗ್ರಹಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರ ಪ್ರತಿಭಟನೆಯನ್ನು ರಾಹುಲ್ ಗಾಂಧಿ ಚಂಪಾರನ್ ಪ್ರತಿಭಟನೆಗೆ ಹೋಲಿಸಿದ್ದಾರೆ.ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಮುಂದುವರಿದಿರುವ ರೈತರ ಪ್ರತಿಭಟನೆಯನ್ನು ಬ್ರಿಟಿಷ್ ಆಡಳಿತ ಸಮಯದಲ್ಲಿ ನಡೆದ ಚಂಪಾರನ್ ಪ್ರತಿಭಟನೆಗೆ ಹೋಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ರೈತರೂ ಸತ್ಯಾಗ್ರಹಿಯಾಗಿದ್ದು ಅವರ ಹಕ್ಕುಗಳನ್ನು ಅವರು ಪಡೆದೇ ತೀರುತ್ತಾರೆ ಎಂದಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ!ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ!

ಆದರೆ, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ರೈತ ಕಾರ್ಮಿಕನೂ ಕೂಡ ಸತ್ಯಾಗ್ರಹಿಯಾಗಿದ್ದು ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಅದನ್ನು ಅವರು ಪಡೆದೇ ತೀರುತ್ತಾರೆ ಎಂದಿದ್ದಾರೆ.

Rahul Gandhi Says Every Farmer-Labourer Part Of Movement A Satyagrahi

ಚಂಪಾರನ್ ರೀತಿಯ ದುರಂತವನ್ನು ದೇಶ ಎದುರಿಸಲಿದೆ. ಆ ಸಮಯದಲ್ಲಿ ಬ್ರಿಟಿಷರು ಕಂಪೆನಿ ಬಹದ್ದೂರರಾಗಿದ್ದರೆ, ಇಂದು ಮೋದಿ ಮತ್ತು ಅವರ ಸ್ನೇಹಿತರು ಕಂಪೆನಿ ಬಹದ್ದೂರರಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ಎನ್ ಡಿಎ ಸರ್ಕಾರವನ್ನು ತಿವಿದಿದ್ದಾರೆ.

ರೈತರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸುತ್ತಲೇ ಬಂದಿದ್ದು, ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದೆ.

ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆಯಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತ ವಿರುದ್ಧ ರೈತರು ನಡೆಸಿದ್ದ ಪ್ರತಿಭಟಟನೆಯನ್ನು ಚಂಪಾರನ್ ಚಳವಳಿ ಎಂದು ಕರೆಯಲಾಗುತ್ತದೆ.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ 1917ರ ಚಂಪಾರನ್ ಸತ್ಯಾಗ್ರಹ ಪ್ರಮುಖವಾದದ್ದು. ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ಚಂಪಾರನ್ ಸತ್ಯಾಗ್ರಹ ನಡೆದಿದ್ದು, ಭಾರತದ ಇತಿಹಾಸದಲ್ಲಿ ಪ್ರಮುಖವಾದದ್ದಾಗಿದೆ.

English summary
Congress leader Rahul Gandhi on Sunday compared the ongoing farmers' protests against the three new Central agriculture-related laws with the Champaran agitation during the British rule, and said every farmer-labourer part of the current movement is a ''satyagrahi'' and they will take their rights back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X