ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಏಪ್ರಿಲ್ 09: "ಇದು ಒಂಟಿ ಮನುಷ್ಯನ ಧ್ವನಿ" ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆ ಇದು!

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ 10 ಮುಖ್ಯಾಂಶಗಳು ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ 10 ಮುಖ್ಯಾಂಶಗಳು

ಏಪ್ರಿಲ್ 11 ರಿಂದ ಆರಂಭವಾಗಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಸಸೋಮವಾರ ಬಿಡುಗಡೆ ಮಾಡಿತು. 'ಸಂಕಲ್ಪ ಪತ್ರ' ಎಂಬ ಹೆಸರಿನ ಈ ಪ್ರಣಾಳಿಕೆಯಲ್ಲಿ ಒಟ್ಟು 75 ಸಂಕಲ್ಪಗಳನ್ನು ಬಿಜೆಪಿ ಮಾಡಿಕೊಂಡಿದೆ. ಸ್ವಾತಂತ್ರ್ಯ ಸಿಕ್ಕು2022 ಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಪ್ಪತ್ತೈದು ಸಂಕಲ್ಪಗಳನ್ನು ಮಾಡಿಕೊಂಡಿರುವುದಾಗಿ ಹೇಳಿದೆ.

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಯಾರು, ಏನಂದರು?ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಯಾರು, ಏನಂದರು?

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, 'ಕಾಂಗ್ರೆಸ್ ಪ್ರಣಾಳಿಕೆಯನ್ನು ಚರ್ಚೆ ಮಾಡಿ ನಿರ್ಮಿಸಲಾಯಿತು. ಇದು ಭಾರತದ ಕೋಟ್ಯಂತರ ಜನರ ಧ್ವನಿ, ಶಕ್ತಿಶಾಲಿ ಮತ್ತು ವಿವೇಕಯುಕ್ತ.

Rahul Gandhi says BJP manifesto is the voice of isolated man

ಬಿಜೆಪಿ ಪ್ರಣಾಳಿಕೆಯನ್ನು ಒಂದು ಮುಚ್ಚಿದ ಕೋಣೆಯಲ್ಲಿ ತಯಾರಿಸಲಾಗಿದೆ. ಇದು ಒಂಟಿ ಮನುಷ್ಯನ ಧ್ವನಿ. ದೂರದೃಷ್ಟಿಯಿಲ್ಲದ, ದುರಹಂಕಾರದ ಪ್ರಣಾಳಿಕೆ' ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು? ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?

ಕಾಂಗ್ರೆಸ್ ಏಪ್ರಿಲ್ 2 ರಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ತಾನು ಅಧಿಕಾರಕ್ಕೆ ಕಡು ಬಡವರಿಗೆ ತಿಂಗಳಿಗೆ 6000 ರೂಪಾಯಿ ನೀಡುವ ಆದಾಯ ಖಾತ್ರಿ(ನ್ಯಾಯ್) ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು.

English summary
Rahul Gandhi on BJP manifesto: The Congress manifesto was created through discussion. The voice of over a million Indian people it is wise and powerful. The BJP Manifesto was created in a closed room. The voice of an isolated man, it is short sighted and arrogant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X